About the Author

.ದೊಡ್ಡೇರಿ ವೆಂಕಟರಾವ್ಅವರು ಚಿತ್ರಗ್ರಹಣ ಪ್ರವೀಣರೂ, ಕಾದಂಬರಿಕಾರರು. ಸಾಹಿತ್ಯ ಕೃಷಿ, ಛಾಯಾಗ್ರಹಣದಲ್ಲಿ ಪ್ರವೀಣರು. ಇವರು 1913 ಡಿಸೆಂಬರ್ 28 ರಂದು ಸೊರಬ ತಾಲ್ಲೂಕಿನ ದೊಡ್ಡೇರಿಯಲ್ಲಿ ಜನಿಸಿದರು. ಸಾಹಿತ್ಯ ಕೃಷಿಯ ಆರಂಭದಲ್ಲಿ “ಕಲಾಕುಮಾರ” ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು.  ವೃತ್ತಿಯಲ್ಲಿ ವೈದ್ಯರು. ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮುಕ್ತಾ, ಅವಧಾನ, ದೃಷ್ಟಿದಾನ ಅವರ ಪ್ರಮುಖ ಕಾದಂಬರಿಗಳು. ಪುಟ್ಟಣ್ಣ ಕಣಗಾಲ ಅವರ “ಅಮೃತ ಘಳಿಗೆ”, ಇವರ ಕಾದಂಬರಿ (ಅವಧಾನ) ಆಧಾರಿತವಾದದ್ದು. ಇಷ್ಟಕಾಮ್ಯ ಇವರ ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಅದೇ ಹೆಸರಿನಲ್ಲಿ ಪ್ರಕಟಗೊಂಡಿದೆ. ಅವರು ಮನೋವಿಜ್ಞಾನದ ವಿಷಯವನ್ನಾಧರಿಸಿ “ವಿಕೃತ ಕಾಮ, ಪ್ರಸವ ಜ್ಞಾನ, ಸಂತಾನ ಸಂಯಮ” ಎಂಬ ಕೃತಿಗಳನ್ನು ರಚಿಸಿದ್ದಾರೆ.

ಛಾಯಾಗ್ರಹಣ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ. ಆಧುನಿಕ ಛಾಯಾ ಚಿತ್ರಕಲೆ - ಪ್ರಮುಖ ಕೃತಿ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಅಮೆರಿಕ ಫೋಟೋಗ್ರಫಿ ಸೊಸೈಟಿ ತ್ರಿ ಸ್ಟಾರ್ ಸರ್ಟಿಫಿಕೇಟ್, ಸಾಹಿತ್ಯ ಅಕಾಡಮಿ, ಲಲಿತಕಲಾ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದವು ಅವರಿಗೆ ಲಭಿಸಿದೆ. ಛಾಯಾಗ್ರಹಣದಲ್ಲಿ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು 2004 ಮೇ 26ರಂದು ನಿಧನರಾದರು.

 

ದೊಡ್ಡೇರಿ ವೆಂಕಟಗಿರಿರಾವ್

(28 Dec 1913-26 May 2004)