ತುಂಬಿದ ಕೊಡ ಮತ್ತು ಇತರ ಕಥೆಗಳು

Author : ದೊಡ್ಡೇರಿ ವೆಂಕಟಗಿರಿರಾವ್

Pages 114

₹ 1.00
Year of Publication: 1946
Published by: ಸಾಧನ ಪ್ರಕಟನಾಲಯ.
Address: ಸಾಗರ, ಜಿಲ್ಲೆ ಶಿವಮೊಗ್ಗ

Synopsys

ʼತುಂಬಿದ ಕೊಡ ಮತ್ತು ಇತರ ಕಥೆಗಳುʼ ಕಥಾ ಸಂಕಲನವನ್ನು ಲೇಖಕ ದೊಡ್ಡೇರಿ ವೆಂಕಟಗಿರಿರಾವ್ ಅವರು ರಚಿಸಿದ್ದಾರೆ. ಜೀವನದಲ್ಲಿ ನಡೆಯುವ ಸೂಕ್ಷ್ಮ ಘಟನೆಗಳನ್ನು ದೃಷ್ಟಿಯಲ್ಲಿಟ್ಟುಕ್ಕೊಂಡು ಕಥೆಗಳು ರಚಿತವಾಗಿದೆ. ಗಂಡ ಹೆಂಡಿರ ಮುನಿಸು, ಹುಸಿಕೋಪ, ಪ್ರೀತಿ ಈ ಎಲ್ಲವನ್ನೂ ಸಮ್ಮಿಶ್ರಣ ಮಾಡಿಕೊಂಡು ರಚಿತವಾದ ಕಥೆಗಳು ಭಾವ ಪ್ರಧಾನವಾಗಿವೆ. ತುಂಬಿದ ಕೊಡ, ಹಳದಿ ಅಂಗಿ, ಅವಳ ಮನಸ್ಸು, ನಟ, ಅವರ ಬಾಳು, ಸರಸಿಯ ಸೌಭಾಗ್ಯ, ಆಕಾಶವಾಣಿ, ಸೋಮಪ್ಪನ ಸಂಪಾದನೆ, ಸಮಸ್ಯೆ, ಮಹತ್ಸಾಧನೆ, ಶಾಂತಿ, ನಾವು ಮಾಡಿದ ಒಂದು ಜಾತ್ರೆ, ಶ್ರಾದ್ಧಾನ್ವೇಷಣೆ, ದೀಪ ಹೀಗೆ ಒಟ್ಟು 14 ಕಥೆಗಳನ್ನು ಈ ಸಂಕಲನವು ಒಳಗೊಂಡಿದೆ.

 

About the Author

ದೊಡ್ಡೇರಿ ವೆಂಕಟಗಿರಿರಾವ್
(28 December 1913 - 26 May 2004)

.ದೊಡ್ಡೇರಿ ವೆಂಕಟರಾವ್ಅವರು ಚಿತ್ರಗ್ರಹಣ ಪ್ರವೀಣರೂ, ಕಾದಂಬರಿಕಾರರು. ಸಾಹಿತ್ಯ ಕೃಷಿ, ಛಾಯಾಗ್ರಹಣದಲ್ಲಿ ಪ್ರವೀಣರು. ಇವರು 1913 ಡಿಸೆಂಬರ್ 28 ರಂದು ಸೊರಬ ತಾಲ್ಲೂಕಿನ ದೊಡ್ಡೇರಿಯಲ್ಲಿ ಜನಿಸಿದರು. ಸಾಹಿತ್ಯ ಕೃಷಿಯ ಆರಂಭದಲ್ಲಿ “ಕಲಾಕುಮಾರ” ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು.  ವೃತ್ತಿಯಲ್ಲಿ ವೈದ್ಯರು. ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮುಕ್ತಾ, ಅವಧಾನ, ದೃಷ್ಟಿದಾನ ಅವರ ಪ್ರಮುಖ ಕಾದಂಬರಿಗಳು. ಪುಟ್ಟಣ್ಣ ಕಣಗಾಲ ಅವರ “ಅಮೃತ ಘಳಿಗೆ”, ಇವರ ಕಾದಂಬರಿ (ಅವಧಾನ) ಆಧಾರಿತವಾದದ್ದು. ಇಷ್ಟಕಾಮ್ಯ ಇವರ ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಅದೇ ಹೆಸರಿನಲ್ಲಿ ಪ್ರಕಟಗೊಂಡಿದೆ. ಅವರು ಮನೋವಿಜ್ಞಾನದ ವಿಷಯವನ್ನಾಧರಿಸಿ “ವಿಕೃತ ಕಾಮ, ಪ್ರಸವ ಜ್ಞಾನ, ಸಂತಾನ ಸಂಯಮ” ಎಂಬ ...

READ MORE

Related Books