About the Author

ಕವಿ, ಕಥೆಗಾರ ಹಾಗೂ ಹೆಸರಾಂತ ಪ್ರಸಾರತಜ್ಞ ಡಾ. ಬಸವರಾಜ ಸಾದರ ಹುಟ್ಟಿದ್ದು 1955 ರ ಜುಲೈ 20 ರಂದು,  ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ. ಮೂಲತಃ ಕಲಘಟಗಿ ತಾಲೂಕಿನ ಹುಲ್ಲಂಬಿಯವರಾದ ಇವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ಉನ್ನತ ಶ್ರೇಣ ಯಲ್ಲಿ ಬಿ.ಎ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರ್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ  ಎಂ. ಎ. ಪದವಿ ಪಡೆದಿದ್ದಾರೆ. ’ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು’ ಎಂಬ ವಿಷಯ ಕುರಿತ ಅಧ್ಯಯನಕ್ಕೆ ಪಿಎಚ್.ಡಿ ಪದವಿ ಪಡೆದಿರುವ ಇವರು, ರ್ಯಾಂಕ್ ಹಾಗೂ ಮತ್ತೊಂದು ಚಿನ್ನದ ಪದಕದೊಂದಿಗೆ ಡಿಪ್ಲೋಮಾ-ಇನ್-ಬಸವ ಸ್ಟಡೀಜ್‍ನ್ನೂ ಪೂರೈಸಿದ್ದಾರೆ. 1984 ರಲ್ಲಿ ಕಾರ್ಯಕ್ರಮ ನಿರ್ವಾಹಕನೆಂದು ಅಖಿಲ ಭಾರತ ಆಕಾಶವಾಣಿಯಲ್ಲಿ ವೃತ್ತಿ ಆರಂಭಿಸಿ, ಬೆಂಗಳೂರು ನಿಲಯದ ಕೇಂದ್ರ ನಿರ್ದೇಶಕ ಹಾಗೂ ಆಕಾಶವಾಣಿಯ ದಕ್ಷಿಣ ವಲಯದ ಉಸ್ತುವಾರಿ ನಿರ್ದೇಶಕನಾಗಿ ಬಡ್ತಿ ಹೊಂದಿ 2015 ರ ಜುಲೈನಲ್ಲಿ ನಿವೃತ್ತರಾಗಿದ್ದಾರೆ. 

ತಪ್ದಂಡ (ಕಥಾಸಂಕಲನ), ಸಿಸಿಫಸ್‍ರ ಸುತ್ತು, ಬುದ್ಧನ ಭಿಕ್ಷಾಪಾತ್ರೆ (ಕವನಸಂಕಲನಗಳು), ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು (ಪಿಎಚ್.ಡಿ.ಪ್ರಬಂಧ), ಅನುಮಿತಿ (ಸಾಹಿತ್ಯ ವಿಮರ್ಶೆ), ...ರೂಪಗಳನು ದಾಟಿ (ಬಾನುಲಿ ರೂಪಾಂತರಗಳು), ಹೊಸ ಆಲೋಚನೆ, ತಮಂಧಕ್ಕೆ ಬೆಳಗು, ಕಾಯಕ ದಾಸೋಹ, ಮೀರುವ ಘನ (ವಚನ ಸಂಶೋಧನೆ), ಮೃದುವಾಗಿ ಮುಟ್ಟು (ಚಿಂತನ), ದಿನಕ್ಕೊಂದು ನುಡಿಮುತ್ತು (ವೈಚಾರಿಕ ನುಡಿಮುತ್ತುಗಳು), ಬಸವರಾಜ ಕಟ್ಟೀಮನಿ (ವ್ಯಕ್ತಿಚಿತ್ರ)- ಮೊದಲಾದ ಸ್ವತಂತ್ರ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ನೂರೊಂದು ಚಿಂತನ, ಪ್ರಸಾರ ಹಾಸ್ಯ, ಬದುಕು ನನ್ನ ದೃಷ್ಟಿಯಲ್ಲಿ, ಆಧುನಿಕ ಕನ್ನಡ ಮಹಾಕಾವ್ಯಗಳು, ಬಾನುಲಿದ ಮಾತುಗಳು, ಕನ್ನಡ ಸಾಹಿತ್ಯ ಸಮೀಕ್ಷೆ (ಮೂರು ಕೃತಿಗಳು), ಮೇಘ ಮಂದಾರ, ಕಾವ್ಯಯಾನ, ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು, ವಚನ ವರ್ಷ- ಅವರ ಸಂಪಾದಿತ ಕೃತಿಗಳು. ಜುರ್ಮಾನಾ ಎಂಬುದು ಅವರ ತಪ್ದಂಡ ಕಥಾಸಂಕಲನದ ಹಿಂದಿ ಅನುವಾದ. (ಅನು: ಪ್ರೊ.ಧರಣೇಂದ್ರ ಕುರಕುರಿ) ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಇವರ ಕಥೆ-ಕವನ-ಲೇಖನಗಳು ಪ್ರಕಟವಾಗಿವೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವಾರು ವಿಚಾರ ಸಂಕಿರಣಗಳಲ್ಲಿ, ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಸಾಹಿತ್ಯ ಹಾಗೂ ಮಾಧ್ಯಮಗಳಿಗೆ ಸಂಬಂಧಿಸಿದ ಪ್ರಬಂಧಗಳನ್ನು ಮಂಡಿಸಿದ್ದಾರೆ, ಕವನವಾಚನ ಮಾಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ.ಡಿ.ಎಸ್.ಕರ್ಕಿ. ಕಾವ್ಯ ಪ್ರಶಸ್ತಿ, ಗೊರೂರು ಪ್ರತಿಷ್ಠಾನದ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಭಾರತಿಸುತ ಪ್ರಶಸ್ತಿ, ಕಲಬುರ್ಗಿ ವಿಶ್ವವಿದ್ಯಾಲಯದ ಜಯತೀರ್ಥ ರಾಜಪುರೋಹಿತ ಸ್ಮಾರಕ ಬಂಗಾರದ ಪದಕ ಹಾಗೂ ಬಹುಮಾನ, ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ.ಸ.ಸ.ಮಾಳವಾಡ ಪ್ರಶಸ್ತಿ, ಬೆಂಗಳೂರಿನ ರಂಗಚೇತನದ ನಾಡಚೇತನ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಅಖಿಲ ಭಾರತ ಆಕಾಶವಾಣ ಯ ರಾಷ್ಟ್ರೀಯ ಪ್ರಶಸ್ತಿ, ಆಕಾಶವಾಣ ಯ ರಾಜ್ಯ ಪ್ರಶಸ್ತಿ ಹಾಗೂ ಪ್ರಜಾವಾಣ  ಮತ್ತು ವಿಜಯ ಕರ್ನಾಟಕ ಪತ್ರಿಕೆಗಳ ದೀಪಾವಳಿ ಕಥಾಸ್ಪರ್ಧೆಯ ಬಹುಮಾನಗಳು ಇವರ ಪಾಲಿಗೆ ಸಂದಿವೆ.

ಜ್ಞಾನಪೀಠ ಪ್ರಶಸ್ತಿ ವಿಜೇತರನ್ನೂ ಒಳಗೊಂಡ ಹಾಗೆ ಕನ್ನಡದ ನೂರಾರು ಹಿರಿಯ ಹಾಗೂ ಹೆಸರಾಂತ ಸಾಹಿತಿಗಳ, ಕಲಾವಿದರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಇತರ ಸಾಧಕರ ಸಂದರ್ಶನಗಳನ್ನು ನಡೆಸಿ ಧ್ವನಿಮುದ್ರಿಸಿದ ಅವರು, ಕರ್ನಾಟಕದ ವಿವಿಧ ಆಕಾಶವಾಣಿ  ಕೇಂದ್ರಗಳ ಮೂಲಕ ನೂರಾರು ವಿನೂತನ ಕಾರ್ಯಕ್ರಮಗಳನ್ನು ನಿರ್ಮಿಸಿ ಪ್ರಸಾರ ಮಾಡಿದ್ದಾರೆ. “ಎ” ಶ್ರೇಣ ಯ ಧ್ವನಿಕಲಾವಿದರಾಗಿ ಅವರು ನಿರ್ವಹಿಸಿದ ಬಾನುಲಿ ನಾಟಕಗಳು ಪಾತ್ರಗಳು, ಪ್ರಸ್ತುತಪಡಿಸಿದ ಗಾಂಧಿಸ್ಮೃತಿ ಮತ್ತು ವಿಶೇಷವಾಗಿ ರೂಪಿಸಿ ಪ್ರಸಾರಿಸಿದ ರೇಡಿಯೋ ಧಾರಾವಾಹಿಗಳು ರಾಜ್ಯದೆಡೆಯಲ್ಲೆಲ್ಲಾ ಪ್ರಸಿದ್ಧವಾಗಿವೆ. ಅವರು ಬರೆದು ನಿರ್ಮಿಸಿದ ಹಲವಾರು ರೇಡಿಯೊ ನಾಟಕ-ರೂಪಕಗಳು ಹಾಗೂ ಆಯೋಜಿಸಿದ ವಿಚಾರ ಸಂಕಿರಣಗಳು, ನೇರ ಪ್ರಸಾರ ಮಾಡಿದ ಕವಿಗೋಷ್ಠಿಗಳು, ಸಂಗೀತ ಕಾರ್ಯಕ್ರಮಗಳು, ಟೆಲಿಕ್ವಿಜ್, ಫೋನ್-ಇನ್ ಮೊದಲಾದ ಅನೇಕ ಕಾರ್ಯಕ್ರಮಗಳು ಇಡೀ ರಾಜ್ಯದ ಜನತೆಯ ಮನ ಗೆದ್ದಿವೆ.

ಬಸವರಾಜ ಸಾದರ

(20 Jul 1955)

BY THE AUTHOR