ಚಿನಾರ್‌ ವೃಕ್ಷದ ಅಳು

Author : ಬಸವರಾಜ ಸಾದರ

Pages 96

₹ 100.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

‘ಚಿನಾರ್‌ ವೃಕ್ಷದ ಅಳು’ ಭಾರತದ ವಿವಿಧ ಭಾಷೆಗಳ ಹನ್ನೊಂದು, ವೈವಿಧ್ಯಮಯ ಸಣ್ಣ ಕತೆಗಳನ್ನು ಇಂಗ್ಲಿಷ್ ಮೂಲಕ ಅನುವಾದಿಸಿರುವ ಕತೆಗಳು.

ಇಲ್ಲಿನ ಕತೆಗಳು ಹೆಚ್ಚು ಆಧುನಿಕವೂ ಸಮಕಾಲೀನವೂ ಆದ ಸಮಸ್ಯೆಗಳನ್ನು ಎದುರಿಸುತ್ತವೆ. ಅಷ್ಟೂ ಕತೆಗಳು ಯಾವುದೋ ಒಂದು ಐಡಿಯಾಲಜಿ ಅಥವಾ ಐಡೆಂಟಿಟಿಗೆ ಮೀಸಲಾಗದೆ, ಹೆಚ್ಚು ಮಾನವೀಯವಾದ ನೆಲೆಗಳಲ್ಲಿ ಅನುಸಂಧಾನ ಮಾಡುತ್ತವೆ. ಭೌಗೋಳಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳ ಪರಿಣಾಮವಾಗಿ ಹೊಸದೊಂದು ಅನುಭವವನ್ನಂತೂ ಕೊಡುತ್ತವೆ. 

About the Author

ಬಸವರಾಜ ಸಾದರ
(20 July 1955)

ಕವಿ, ಕಥೆಗಾರ ಹಾಗೂ ಹೆಸರಾಂತ ಪ್ರಸಾರತಜ್ಞ ಡಾ. ಬಸವರಾಜ ಸಾದರ ಹುಟ್ಟಿದ್ದು 1955 ರ ಜುಲೈ 20 ರಂದು,  ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ. ಮೂಲತಃ ಕಲಘಟಗಿ ತಾಲೂಕಿನ ಹುಲ್ಲಂಬಿಯವರಾದ ಇವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ಉನ್ನತ ಶ್ರೇಣ ಯಲ್ಲಿ ಬಿ.ಎ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರ್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ  ಎಂ. ಎ. ಪದವಿ ಪಡೆದಿದ್ದಾರೆ. ’ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು’ ಎಂಬ ವಿಷಯ ಕುರಿತ ಅಧ್ಯಯನಕ್ಕೆ ಪಿಎಚ್.ಡಿ ಪದವಿ ಪಡೆದಿರುವ ಇವರು, ರ್ಯಾಂಕ್ ಹಾಗೂ ಮತ್ತೊಂದು ಚಿನ್ನದ ಪದಕದೊಂದಿಗೆ ಡಿಪ್ಲೋಮಾ-ಇನ್-ಬಸವ ಸ್ಟಡೀಜ್‍ನ್ನೂ ಪೂರೈಸಿದ್ದಾರೆ. 1984 ರಲ್ಲಿ ಕಾರ್ಯಕ್ರಮ ನಿರ್ವಾಹಕನೆಂದು ...

READ MORE

Excerpt / E-Books

https://www.prajavani.net/artculture/short-story/chinar-tree-653462.html

Reviews

‘ಚಿನಾರ್‌ ವೃಕ್ಷದ ಅಳು’ ಕಥಾ ಸಂಕಲನ ವಿಭಿನ್ನ ಹನ್ನೊಂದು ಆಯ್ದ ಕಥೆಗಳನ್ನೊಳಗೊಂಡಿದೆ. ಭಾರತದ ವಿವಿಧ ಭಾಷೆಗಳಲ್ಲಿನ ಸಣ್ಣಕಥೆಗಳನ್ನು ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ. ವರ್ತಮಾನದ ಬದುಕಿನ ವಿವಿಧ ತಲ್ಲಣಗಳನ್ನು ಕಟ್ಟಿಕೊಡುವ ಈ ಸಂಕಲನವು ಮನುಕುಲದ ಸ್ಥಿತಿ–ಗತಿಯನ್ನು ತೆರೆದಿಡುತ್ತದೆ. ಶೀರ್ಷಿಕೆಯೇ ಧ್ವನಿಸುವಂತೆ ಒಂದು ತಲ್ಲಣದ ಕಥೆ ಇದರಲ್ಲಿ ಅಡಗಿದೆ. ಕಾಶ್ಮೀರಿ ಜನತೆಯ ಬದುಕಿನಲ್ಲಿ ಚಿನಾರ್‌ ವೃಕ್ಷ ಬಹಳ ಅಮೂಲ್ಯವಾದದ್ದು. ಕಾಶ್ಮೀರಿ ಸಂಸ್ಕೃತಿಯ ಒಂದು ಭಾಗ ಈ ವೃಕ್ಷ. ಈ ಮರದ ಅವಸಾನದ ನೋವನ್ನು ತಮ್ಮ ಸಂಕಲನದಲ್ಲಿ ಸೇರಿಸಿದ್ದಾರೆ. ಇಂತಹ ಸತ್ಯಗಳು ಮತ್ತು ರಹಸ್ಯಗಳು ಓದುಗನ ಕುತೂಹಲ ಇಮ್ಮಡಿಗೊಳಿಸುತ್ತವೆ.

ಧರ್ಮದ ಮೇಲೆ ಪ್ರಭಾವ ಬೀರುವ ಸನ್ನಿವೇಶಗಳು, ಧರ್ಮ ಮತ್ತು ಮನುಷ್ಯನ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನೂ ಈ ಸಂಕಲನದ ಮತ್ತೊಂದು ಕಥೆ ನಿರೂಪಿಸಿದೆ. ಹೀಗೆ ಹನ್ನೊಂದು ಕಥೆಗಳೂ ವಿಭಿನ್ನ ನೆಲೆಗಟ್ಟಿನಲ್ಲಿ, ಮನುಕುಲ, ಸಮಾಜ, ಆಧುನಿಕತೆ ಮತ್ತು ಇವುಗಳ ಪ್ರಭಾವವನ್ನು ಪಾತ್ರಸಹಿತ ವಿವರುಸುತ್ತಾ ಓದುಗನನ್ನು ಚಿಂತನೆಗೆ ಹಚ್ಚಿಬಿಡುತ್ತದೆ.
ಆಧುನಿಕತೆಗೆ ತೆರೆದುಕೊಂಡಾಗಿನಿಂದ ಮಾನವನ ಜೀವನ ಶೈಲಿಯಲ್ಲಿ ಬದಲಾವಣೆಗಳು ಹೆಚ್ಚಾದವು. ಬದುಕುವ ರೀತಿಯಲ್ಲಿ ಹೊಸತನ ಇದ್ದರೂ ಅದು ನಕಲಿಯೇನೊ ಎಂಬಂತಾಗಿದೆ. ಮೂಲ ಆಚಾರ–ವಿಚಾರ, ಸಂಪನ್ಮೂಲಗಳನ್ನು ಕಳೆದುಕೊಳ್ಳುತ್ತಾ ತಾಂತ್ರಿಕ ಯುಗದ ಬಂಧನದಲ್ಲಿ ಬಿಗಿಯಾಗಿದ್ದಾನೆ. ಇಂತಹ ಹಲವಾರು ಸಂಕೋಲೆಗಳನ್ನು
ಕೃತಿ ತೆರೆದಿಟ್ಟಿದೆ. 

ಕೃಪೆ : ಪ್ರಜಾವಾಣಿ (2020 ಮಾರ್ಚಿ 22)

 

 

Related Books