About the Author

ಡಾ.ಜಿ. ಭಾಸ್ಕರಮಯ್ಯ ರವರು ಕುಂದಾಪುರದ ಭಂಡಾರಕರ ಕಾಲೇಜು ಮತ್ತು ಮುಲ್ಕಿ ಕಾಲೇಜುಗಳಲ್ಲಿ ಒಟ್ಟು ನಾಲ್ಕು ದಶಕಗಳಿಗೂ ಮೀರಿ ಸಂಸ್ಕೃತ, ಹಿಂದಿ, ಮತ್ತು ಇಂಗ್ಲಿಷ್ ಭಾಷೆಗಳನ್ನೂ, ತತ್ವಶಾಸ್ತ್ರ, ಪ್ರಾಕ್ತನಶಾಸ್ತ್ರಗಳನ್ನು ಬೋಧಿಸಿ, ಹಿಂದಿ ಪ್ರಾಧ್ಯಾಪಕರಾಗಿದ್ದು ಈಗ ನೀವೃತ್ತರಾಗಿದ್ದಾರೆ. ಡಾ.ಮಯ್ಯರವರು ಬಹುಭಾಷಾ ವಿಶಾರದರು. ಹಿಂದಿ, ಸಂಸ್ಕೃತ, ಪಾಲಿ, ಕನ್ನಡ, ಇಂಗ್ಲಿಷ್ ಮತ್ತಿತರ ಭಾಷೆಗಳಲ್ಲಿ ಅವರದು ಆಳವಾದ ಪಾಂಡಿತ್ಯ. ಜೈನಧರ್ಮದಿಂದ ಮಾರ್ಕ್ಸ್ ವಾದದವರೆಗೂ ಅವರ ಆಸಕ್ತಿ ಹರಡಿದೆ. ಸತತವಾದ ಓದು. ಚಿಂತನೆ, ಪರಿಶ್ರಮಗಳಿಂದ ಹಲವಾರು ವಿಶ್ವವಿದ್ಯಾಲಯಗಳಿಂದ ಎಂ.ಎ.ಪದವಿಗಳನ್ನೂ, ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿಯನ್ನೂ ಗಳಿಸಿದ್ದಾರೆ. ಅನೇಕಾನೇಕ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಒಂಟಿತನ, ಪರಕೀಯಪ್ರಜ್ಞೆ ಕುರಿತ ಅವರ ಗ್ರಂಥ ಅಜನಬೀಪನ್:ಏಕ್ ಸೈದ್ಧಾಂತಿಕ್ ಅನುಶೀಲನ್-2002ರಲ್ಲಿ ಆಗಿನ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸನ್ಮಾನ ಪಡೆದಿದೆ. ಮಾತೃಭಾಷೆ ಹಿಂದಿಯಲ್ಲದಿದ್ದರೂ ಭಾಷೆಯಲ್ಲಿ ಪಾಂಡಿತ್ಯ, ಪ್ರಭುತ್ವಗಳಿಸಿರುವವರ ವರ್ಗದಲ್ಲಿ ಸನ್ಮಾನಿತರು. 

ಜಿ. ಭಾಸ್ಕರ ಮಯ್ಯ