
ಮೈಸೂರಿನ ತೆಲುಗು ಮನೆಮಾತಿನ ಕುಟುಂಬದಲ್ಲಿ ಜನಿಸಿ ಹಿಂದಿ ಪತ್ರಿಕಾರಂಗದಲ್ಲಿ ಅತ್ಯುತ್ತಮ ಸಂಪಾದಕರೆಂದು ಖ್ಯಾತಿ ಪಡೆದ ಶ್ರೀ ನಾರಾಯಣದತ್ತರು (1929-2014) ಒಬ್ಬ ವಿಶಿಷ್ಟ ವ್ಯಕ್ತಿ. ಬಾಲ್ಯದಲ್ಲೇ ಅವರು ದೂರದ ಉತ್ತರ ಭಾರತದಲ್ಲಿ ಸ್ವಾಮಿ ಶ್ರದ್ದಾನಂದರು ಸ್ಥಾಪಿಸಿದ್ದ ಗುರುಕುಲ ಕಾಂಗಡೀ ವಿದ್ಯಾ ಸಂಸ್ಥೆಗೆ ಸೇರಿ ಅತ್ಯುಚ್ಚ ಶ್ರೇಣಿಯಲ್ಲಿ ವಿದ್ಯಾಲಂಕಾರ ಪದವಿ ಪಡೆದು, 1952ರಲ್ಲಿ ಮುಂಬಯಿಯಲ್ಲಿ ಹಿಂದಿ ಪತ್ರಿಕಾರಂಗವನ್ನು ಪ್ರವೇಶಿಸಿದರು. ಮುಂದೆ 'ನವನೀತ' ಪತ್ರಿಕೆಯ ಸಂಪಾದಕರಾಗಿ ಕಡೆಗೆ ಪಿ.ಟಿ.ಐ. ಫೀಚರ್ ಮುಖ್ಯ ಸಂಪಾದಕರಾಗಿ ನಿವೃತ್ತರಾಗಿ, ಕಡೆಯ ಹದಿನೈದು ವರ್ಷಗಳನ್ನು ಬೆಂಗಳೂರಲ್ಲಿ ಕಳೆದರು. ದತ್ತರು ಕಾಲವಾದಾಗ ಹಿಂದಿ ಪತ್ರಿಕಾರಂಗದ ಮಾರ್ಗದರ್ಶಕ ಆಚಾರ್ಯ ಸಂಪಾದಕರ ಭವ್ಯ ಪರಂಪರೆಯ ಕಡೆಯ ಕೊಂಡಿ ಕಳಚಿಹೋಯಿತೆಂಬ ಕೊರಗು ಅನೇಕ ಪ್ರಮುಖ ಲೇಖಕರನ್ನು ಕಾಡಿಸಿತು.
ಆ ಪುಸ್ತಕದ ಬಗ್ಗೆ ಮಾತನಾಡುತ್ತ ಹಿರಿಯ ಆಡಳಿತಾಧಿಕಾರಿಯೂ, ಚಿಂತಕ, ಲೇಖಕರೂ ಆದ ಚಿರಂಜೀವಿ ಸಿಂಗ್ - 'ದತ್ತರ ಲೇಖನಗಳು ದೇಶದ ಎಲ್ಲ ಭಾಷೆಗಳಿಗೂ ಅನುವಾದವಾಗಬೇಕು, ಈ ಪುಸ್ತಕ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು' ಎಂದಿದ್ದಾರೆ.
©2025 Book Brahma Private Limited.