About the Author

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪಡ್ನೂರು ಗ್ರಾಮದ ಚಣಿಲ ಎಂಬಲ್ಲಿ ದಿ! ಕಜೆ ತಿಮ್ಮಣ್ಣ ಭಟ್ಟ- ದಿ! ಸರಸ್ವತಿ ಅಮ್ಮನವರ ಕೊನೆಯ ಪುತ್ರನಾಗಿ 11--4--1957 ಜನಿಸಿದರು.

ಪ್ರಾಥಮಿಕ ವಿದ್ಯಾಭ್ಯಾಸ ಸಮೀಪದ ಕೋಡಪದವಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಪ್ರೌಢಶಾಲಾ ಶಿಕ್ಷಣ ಮಂಗಳೂರಿನ ಜೆಪ್ಪುವಿನಲ್ಲಿದ್ದ ಕಾಸಿಯಾ ಪ್ರೌಢಶಾಲೆ ಯಲ್ಲಾಯಿತು.ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನುಪಡೆದರು. ಮಂಗಳೂರು ಶಿಕ್ಷಕ ತರಬೇತಿ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ತರಬೇತಿ.

ವಿಟ್ಲ ಸಮೀಪದ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಹಾಸ್ಟೆಲ್ ವಿಭಾಗದಲ್ಲಿ ಸಹಾಯಕ ಅಧ್ಯಾಪಕನಾಗಿ ನಿಯುಕ್ತಿಗೊಂಡೆ. ಬಳಿಕ 1980ನೇ ಇಸವಿಯಲ್ಲಿ ಕಾಸರಗೋಡಿನ ವಿದ್ಯಾಸಂಸ್ಥೆ ಶ್ರೀ ಸ್ವಾಮೀಜಿ ಪ್ರೌಢಶಾಲೆಯಲ್ಲಿ ಗಣಿತ ಅಧ್ಯಾಪಕನಾಗಿನನ್ನ ವೃತ್ತಿ ಜೀವನ ಆರಂಭವಾಗಿ 26 ವರುಷಗಳ ಕಾಲ ಪ್ರೌಢಶಾಲಾ ಗಣಿತ ಅಧ್ಯಾಪಕನಾಗಿ ಹಾಗೂ 2007 ರಿಂದ ಮುಖ್ಯೋಪಾಧ್ಯಾಯನಾಗಿಯೂ ಸೇವೆ.

ಅಧ್ಯಾಪನ ವೃತ್ತಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಒಲವು ಬೆಳೆಸಿಕೊಂಡ ಅವರು, ಸುಮಾರು ವಿವಿಧ19 ಕೃತಿಗಳನ್ನು ರಚಿಸಿ ( ಇವುಗಳಲ್ಲಿ ಭಕ್ತಿಗೀತೆಗಳ ಸಂಕಲನ, ಚುಟುಕು ಸಾಹಿತ್ಯ,ಮಕ್ಕಳ ಗೀತೆಗಳು ಸೇರಿಕೊಂಡಿವೆ.) ಬಿಡುಗಡೆಗೊಳಿಸಿದೆ. 2012 ನೇ ಇಸವಿಯಲ್ಲಿ. ಕೇರಳ ರಾಜ್ಯ ಸರಕಾರ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನನಾದೆ. 2013ರಲ್ಲಿ ನಿವೃತ್ತರಾದ ಅವರು, ಕಾಸರಗೋಡಿನ ಪೆರಡಾಲ, ಬದಿಯಡ್ಕದ ನವಜೀವನ ಪ್ರಾಥಮಿಕ ಅನನುದಾನಿತ ಶಾಲೆಯಲ್ಲಿ ಮತ್ತೆ ಐದು ವರ್ಷಗಳ ಕಾಲ ಮುಖ್ಯೋಪಾಧ್ಯಾಯನಾಗಿ ಸೇವೆ ಸಲ್ಲಿಸಿ, ಸದ್ಯ ಮತ್ತೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಗೋಪಾಲ ಭಟ್ ಸಿ.ಯಚ್

(11 Apr 1957)