About the Author

ಹಾಸನ ಜಿಲ್ಲೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಚಿರಪರಿಚಿತರಾದ ಗೊರೂರು ಅನಂತರಾಜು ಸಾಹಿತಿಯಾಗಿ, ನಾಟಕಕಾರರಾಗಿ, ರಂಗಭೂಮಿಯ ಕಲಾವಿದರಾಗಿ, ಹವ್ಯಾಸಿ ಪತ್ರಕರ್ತರಾಗಿ ಪ್ರಸಿದ್ದಿ ಪಡೆದವರು.ಇವರು ಹುಟ್ಟಿ ಬೆಳೆದದ್ದು ಗೊರೂರು ಗ್ರಾಮದಲ್ಲಿ. 13-05-1961 ಜನಿಸಿದ ಇವರ ತಂದೆ ಬಸವರಾಜು ಮತ್ತು ತಾಯಿ ಪುಟ್ಟಲಕ್ಕ್ಷ್ಮಮ್ಮ . ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದವರೆಗೆ ಸ್ವಗ್ರಾಮ ಗೊರೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದು ಹೇಮಾವತಿ ನೀರಾವರಿ ನಿಗಮದಲ್ಲಿ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಲೇ ಹಾಸನದ ಕೃಷ್ಣ ಸಂಜೆ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ವ್ಯಾಸಂಗ ಮಾಡಿದ್ದಾರೆ. ಪ್ರಥಮ ಧರ್ಜೆ ಲೆಕ್ಕಸಹಾಯಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ಹಾಸನದ ಹುಣಸಿನಕೆರೆ ಬಡಾವಣೆಯಲ್ಲಿ ನೆಲೆಸಿದ್ದಾರೆ. ಕವನ ಸಂಕಲನಗಳು, ಕಥಾ ಸಂಕಲನಗಳು, ಹಾಸ್ಯ ಸಾಹಿತ್ಯ, ಲೇಖನಗಳು, ನಾಟಕಗಳು, ಕಿರು ಪ್ರಹಸನಗಳು, ವ್ಯಕ್ತಿ ಚಿತ್ರಗಳು, ನವ ಸಾಕ್ಷರರಿಗಾಗಿ ಪುಸ್ತಕಗಳು, ವಿಮರ್ಶಾ ಲೇಖನಗಳು ಹೀಗೆ ಐವ್ವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.

ಕೃತಿಗಳು: ಸಮ್ಮಿಲನ(ಸಂಪಾದಿತ ಮೊದಲ ಪಕ್ರಟಣೆ 1987), ವಸಂತ (ಸಂಪಾದಿತ), ಮುಖಾಮುಖಿ, ಹಾಸ್ಯ ಸವಿ(ಹನಿಗವನ ಸಂಕಲನ) , ಮೇಳದ ಹಾಡುಗಳು, ಜನಪ್ರಿಯ ಗೀತೆಗಳು ಅನಂತರಾಜು ಪ್ರಮುಖವಾಗಿ ಪ್ರಕಟಿಸಿರುವ ಕವನ ಸಂಕಲನಗಳು. ಅನಂತರಾಜು ಪ್ರಕಟಿಸಿರುವ ಕಥಾ ಸಂಕಲನಗಳೆಂದರೆ,ನಮ್ಮೂರ ಚಾಮಯ್ಯ ಮೇಸ್ಟ್ರು(22 ಕಥೆಗಳ ಸಂಕಲನ),ಬದುಕು ಸಂತೆ ಬಂಡಿ(15 ಕಥೆಗಳ ಸಂಕಲನ), ಪ್ರಕೃತಿ (ಸಂಪಾದಿತ ಕಥಾಸಂಕಲನ), ಕಥೆಗೆ ವಸ್ತುವಾದಳು ಹುಡುಗಿ,ಹಾಸ್ಯ ಸ್ವಭಾವದ ಅನಂತರಾಜುರವರು ತಮ್ಮ ಬದುಕಿನಲ್ಲಿ ಕಂಡ ಘಟನೆಗಳನ್ನು, ಅನುಭವಗಳನ್ನು ಹಾಸ್ಯದ ಪ್ರಕಾರದಲ್ಲಿ ಮನಮುಟ್ಟುವಂತೆ ಬರೆಯುವ ಕೌಶಲ್ಯ ಹೊಂದಿದ್ದಾರೆ. ಸೋಮಾರಿಗಳ ಸಭೆಯಲ್ಲಿ(38 ಹಾಸ್ಯ ಲೇಖನಗಳ ಸಂಕಲನ),ಕಿರು ಹಾಸ್ಯ ಪ್ರಹಸನಗಳು (20 ಹಾಸ್ಯ ಪ್ರಹಸನಗಳ ಸಂಕಲನ) ಹಾಸ್ಯ ಸಾಹಿತ್ಯಕ್ಕೆ ಪ್ರಮುಖ ಕೊಡುಗೆಗಳು ಇದುವರೆಗೆ ನೂರಾರು ಲೇಖನಗಳನ್ನು ಬರೆದಿರುವ ಅನಂತರಾಜು ಪ್ರಮುಖ ಲೇಖನಗಳನ್ನು ಸಂಗ್ರಹಿಸಿ ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾವೇರಿಯ ನದಿಯ ದಡದಲ್ಲಿ (ಕಾವೇರಿ ನದಿಯ ದಡದ ಐತಿಹ್ಯ,ದೇಗುಲ, ಪಕೃತಿ ತಾಣ, ನದಿ ಸಂಪನ್ಮೂಲ ಕುರಿತ ಲೇಖನ), ಹಾಸನ ಜಿಲ್ಲೆಯ ದೇವಾಲಯಗಳ ದರ್ಶನ (ಹಾಸನ ಜಿಲ್ಲೆಯ ಎಂಟು ತಾಲ್ಲೂಕುಗಳ ಪ್ರಾಚೀನ ಐತಿಹ್ಯವುಳ್ಳ ದೇವಾಲಯಗಳನ್ನು ಪರಿಚಯಿಸುವ ಲೇಖನಗಳು.ಗೊರೂರು ಹೇಮಾವತಿ ದರ್ಶನ (ಗೊರೂರು ಗ್ರಾಮ ಅಧ್ಯಯನ, ಹೇಮಾವತಿ ಯೋಜನೆಯ ವಿವರ),.ಡಾ.ಗೊರೂರು ಮತ್ತು ಇತರ ಲೇಖನಗಳು( 18 ವೈವಿಧ್ಯಮಯ ವಿಷಯಗಳ ಲೇಖನಗಳ ಸಂಗ್ರಹ), ಹಬ್ಬಗಳು ಮತ್ತು ಜನಪದ ಆಚರಣೆಗಳು (15 ವೈವಿಧ್ಯಮಯ ವಿಷಯಗಳ ರಸದೌತಣ), ಸಾರಸ್ವತ ಲೋಕದ ದಿಗ್ಗಜರು(ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್, ಹಾಸನ ಜಿಲ್ಲಾ ಕ.ಸಾ.ಪ.ಪ್ರಕಟಣೆ).

ನಟನೆ, ನಿರ್ದೇಶನ, ನಾಟಕ ರಚನೆ, ಸಂಘಟನೆ ವಿಮರ್ಶೆ ಹೀಗೆ ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿ ಕನ್ನಡ ರಂಗಭೂಮಿಯಲ್ಲಿ ಚಿರಪರಿಚಿತರಾಗಿರುವ, ಸೃಜನಶೀಲ ಸಾಹಿತಿ ಗೊರೂರು ಅನಂತರಾಜುರವರ ನಾಟಕಗಳು ಮತ್ತು ರಂಗಭೂಮಿ ಕುರಿತ ಈವರೆಗೆ ಹತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ. ಮೂರು ಪ್ರಯೋಗ ಶೀಲ ನಾಟಕಗಳು, ವ್ಯವಸ್ಥೆ, ಈ ನಾಟಕವನ್ನು ಎಂ.ಎಸ್. ವೆಂಕಟರಾಮಯ್ಯನವರು ಇಂಗ್ಲೀಷ್ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ.ವೀರಪ್ಪನ್ ಭೂತ, ತೋಳ ಬಂತು ತೋಳ, ರಂಗ ಪ್ರಯೋಗ (ಪ್ರದರ್ಶಿತ ನಾಟಕಗಳ ವಿಮರ್ಶಾ ಕೃತಿ),.ಅಭಿನಯ ಅಭಿವ್ಯಕ್ತಿ (ರಂಗ ಕಲಾವಿದರ ಪರಿಚಯ ಲೇಖನಗಳುಳ್ಳ ಕೃತಿ), ರಂಗ ಸಿರಿ ಕಥಾ ಐಸಿರಿ (ಪ್ರದರ್ಶಿತ ನಾಟಕಗಳ ವಿಮರ್ಶಾ ಕೃತಿ), ರಂಗಾಂತರಂಗ (ರಂಗಭೂಮಿ ಕುರಿತ ಅಂಕಣ ಬರಹಗಳ ಸಂಗ್ರಹ), ನಾರಿ ಹೆಜ್ಜೆ ನರಿ ಕಣ್ಣು , ಬೇತಾಳ ಹೇಳಿದ ಸಾರ್ವಕಾಲಿಕ ಸತ್ಯ ಕಥೆ-ವ್ಯವಸ್ಥೆ ಮತ್ತು ನಾರಿ ಹೆಜ್ಜೆ ನರಿ ಕಣ್ಣು-ನಾಟಕಗಳನ್ನು ಜಯಶಂಕರ್ ಬೆಳಗುಂಬ ರಂಗ ಮರು ರೂಪಾಂತರ ಮಾಡಿದ್ದಾರೆ. ಸಂಗೀತ, ಗಾಯನ, ನಾಟ್ಯ, ವಾಧ್ಯ ಹೀಗೆ ಇವರ ಆಸಕ್ತಿಯ ಕ್ಷೇತ್ರಗಳು ಹಲವಾರು ಇಂತಹ ಸಾಂಸ್ಕೃತಿಕ ಕ್ಷೇತ್ರದ ಸಾಧಕರ ಬಗೆಗೆ ನೂರಾರು ಲೇಖನಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸಿರುವ ಇವರು ಸಾಂಸ್ಕೃತಿಕ ಕ್ಷೇತ್ರದ ಸಾಧಕರ ಮಾಹಿತಿಗಳನ್ನೊಳಗೊಂಡ ಎರಡು ಕೃತಿಗಳನ್ನು ಹೊರತಂದಿದ್ದಾರೆ. ಗಾನ, ನಾಟ್ಯ ಎರಡೂ ರಮ್ಯ (ಸಂಗೀತ, ನಾಟ್ಯ ಸಾಧಕರ ಪರಿಚಯ), ಪ್ರತೃತಿ-ವಿಕೃತಿ ಕಲಾಕೃತಿ (ಚಿತ್ರಕಲಾವಿದರ ಪರಿಚಯ),ವಸ್ತು ನಿಷ್ಟ ವಿಮರ್ಶೆಗೆ ಹೆಸರಾಗಿರುವ ಅನಂತರಾಜು ಕನ್ನಡ ನಾಡಿನ ಬಹುತೇಕ ಸಾಹಿತಿಗಳ ಕೃತಿಗಳನ್ನು ವಿಮರ್ಶೆ ಮಾಡಿ ಅವರ ಬರಹಗಳಿಗೆ ಮೌಲ್ಯಯುತ ಚೌಕಟ್ಟು ನೀಡಿದ್ದಾರೆ. ಹಗಲು ಕನಸಿನಲ್ಲಿ ಕಟ್ಟಿದಾ ಮನೆಯೊಳಗೆ ಇವರ ಪ್ರಮುಖ ವಿಮರ್ಶಾ ಲೇಖನಗಳನ್ನೊಳಗೊಂಡ ಕೃತಿ. 1994ಲ್ಲಿ ಸಾಕ್ಷರತಾ ಆಂದೋಲನದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಆನಂತರಾಜು ನವ ಸಾಕ್ಷರರಿಗಾಗಿ ನಾಲ್ಕು ಕೃತಿಗಳನ್ನು ಹೊರತಂದು ನವಸಾಕ್ಷರರಿಗೆ ಅರಿವು ಮೂಡಿಸಿದ್ದಾರೆ. ಅವುಗಳೆಂದರೆ, ನವ ಸಾಕ್ಷರರಿಗಾಗಿ ಪದ್ಯಗಳು, ಕೆರೆ ಸಂರಕ್ಷಣೆ, ಸಾಕ್ಷರರಾಗೋಣ, ಸುಗ್ಗಿಯ ಹಬ್ಬ ಸಂಕ್ರಾಂತಿ. ವ್ಯಕ್ತಿ ಚಿತ್ರಗಳು:ವಿದ್ಯಾದಾನಿ ಎ.ನ್.ವರದರಾಜುಲು, ಎ.ವಿ. ಗುಂಡಪ್ಪಶ್ರೇಷ್ಟಿ ನಡೆದು ಬಂದ ದಾರಿ. ಸಂಘ ಸಂಸ್ಥೆ, ಸಂಘಟನೆಗಳಲ್ಲಿ ಕಾರ್ಯ ನಿರ್ವಹಣೆ:

ಸನ್ಮಾನ/ ಪ್ರಶಸ್ತಿ ಪುರಸ್ಕಾರಗಳು: ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,, ವರ್ಷದ ವ್ಯಕ್ತಿ ಪ್ರಶಸ್ತಿ 2007, ಸುವರ್ಣಸಿರಿ ಕನ್ನಡಿಗ ಪ್ರಶಸ್ತಿ -2008, ಕರ್ನಾಟಕ ಭೂಷಣ ಪ್ರಶಸ್ತಿ-2013, ನೇಕಾರ ರತ್ನ ಪ್ರಶಸ್-2014, ಶ್ರೀ ನಿಟ್ಟೂರು ಶ್ರೀನಿವಾಸರಾವ್ ಸ್ಮಾರಕ ಪ್ರಶಸ್ತಿ -2013, ಶ್ರೀ ರಾಘವೇಂದ್ರ ಸದ್ಬಾವನಾ ಪ್ರಶಸ್ತಿ ಮಂತ್ರಾಲಯ-2011, ನಾಡೋಜ ಡಾ. ದೇಜಗೌ ಸಾಹಿತ್ಯ ಪ್ರಶಸ್ತಿ2016.

ಗೊರೂರು ಅನಂತರಾಜು

(13 May 1961)