ಕಥೆಗೆ ವಸ್ತುವಾದಳು ಹುಡುಗಿ

Author : ಗೊರೂರು ಅನಂತರಾಜು

Pages 152

₹ 135.00




Year of Publication: 2018
Published by: ವಿಜಯ ಲಕ್ಷ್ಮಿ ಪ್ರಕಾಶನ
Address: ಕೂಗುಬಂಡೆ ರಸ್ತೆ, ಕುವೆಂಪು ನಗರ ಮೈಸೂರು 570023
Phone: 9448350932

Synopsys

ಗೊರೂರು ಅನಂತರಾಜು ಅವರ ಕಥಾ ಸಂಕಲನ ಕಥೆಗೆ ವಸ್ತುವಾದಳು ಹುಡುಗಿ. ಇಲ್ಲಿನ ಕಥೆಗಳಲ್ಲಿ ಹೆಣ್ಣು ಮಕ್ಕಳ ಬದುಕಿನ ಕತೆಯನ್ನು ವಿಭಿನ್ನವಾಗಿ ಅರ್ಥೈಸಲಾಗಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃತಿ ರಚಿಸಿ ಪ್ರಸಿದ್ಧರಾದಂತಹ ಗೊರೂರು ಅನಂತರರಾಜು ರವರು  ಬರಹದ ಪರಿವನ್ನು ತನ್ನದೇ ಆದಂತಹ  ರೀತಿಯಲ್ಲಿ  ಜನರ ಮನ ಮುಟ್ಟುವಂತೆ ಈ ಕೃತಿಯಲ್ಲಿ ಬರೆದಿದ್ದಾರೆ. ಕಥೆಗೆ ವಸ್ತುವಾದಳು ಹುಡುಗಿ ಎಂಬ ಕಥೆಯಲ್ಲಿ  ಕೋಮಲ ಎಂಬ ಪಾತ್ರದ ಮೂಲಕ ಹೆಣ್ಣಿನ ತಳಮಳಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿ ಅವಳ ಪರಿಸ್ಥಿತಿಯ ಮೂಲಕ ಲೋಕದ ಹೆಣ್ಣುಗಳ ಬದುಕನ್ನು ವಿವರಿಸಿದ್ದಾರೆ. 

About the Author

ಗೊರೂರು ಅನಂತರಾಜು
(13 May 1961)

ಹಾಸನ ಜಿಲ್ಲೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಚಿರಪರಿಚಿತರಾದ ಗೊರೂರು ಅನಂತರಾಜು ಸಾಹಿತಿಯಾಗಿ, ನಾಟಕಕಾರರಾಗಿ, ರಂಗಭೂಮಿಯ ಕಲಾವಿದರಾಗಿ, ಹವ್ಯಾಸಿ ಪತ್ರಕರ್ತರಾಗಿ ಪ್ರಸಿದ್ದಿ ಪಡೆದವರು.ಇವರು ಹುಟ್ಟಿ ಬೆಳೆದದ್ದು ಗೊರೂರು ಗ್ರಾಮದಲ್ಲಿ. 13-05-1961 ಜನಿಸಿದ ಇವರ ತಂದೆ ಬಸವರಾಜು ಮತ್ತು ತಾಯಿ ಪುಟ್ಟಲಕ್ಕ್ಷ್ಮಮ್ಮ . ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದವರೆಗೆ ಸ್ವಗ್ರಾಮ ಗೊರೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದು ಹೇಮಾವತಿ ನೀರಾವರಿ ನಿಗಮದಲ್ಲಿ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಲೇ ಹಾಸನದ ಕೃಷ್ಣ ಸಂಜೆ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ವ್ಯಾಸಂಗ ಮಾಡಿದ್ದಾರೆ. ಪ್ರಥಮ ಧರ್ಜೆ ...

READ MORE

Related Books