About the Author

ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಗುರುಪ್ರಸಾದ್ ಅವರು ಉತ್ತಮ ಸಾಹಿತಿ, ಚಿತ್ರ ಸಾಹಿತಿಯೂ ಹೌದು. ಇವರು 1972 ನವೆಂಬರ್‌ 02ರಂದು ಕನಕಪುರದಲ್ಲಿ ಜನಿಸಿದರು. ನವಿರು, ಸೂಕ್ಷ್ಮ ವ್ಯಂಗ್ಯಗಳ ಮೂಲಕ ಸಾಮಾಜಿಕ ಸಂದೇಶ ನೀಡುವ ಚಿತ್ರಗಳ ನಿರ್ದೇಶನದಲ್ಲಿ ಇವರು ಸಿದ್ಧಹಸ್ತರು. 2006ರಲ್ಲಿ ತೆರೆಕಂಡ `ಮಠ' ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿ ಪಯಣ ಆರಂಭಿಸಿದರು. ಇವರ ‘ಎದ್ದೇಳು ಮಂಜುನಾಥ’ ಪುಸ್ತಕವು ಸಿನಿಮಾ ಸಾಹಿತ್ಯಕ್ಕೆ ಒಗ್ಗಿದ್ದು ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗುತ್ತವೆ. ನಂತರ ಇದೇ ಶೀರ್ಷಿಕೆಯಲ್ಲಿ ಚಿತ್ರಿಸಿದ `ಎದ್ದೇಳು ಮಂಜುನಾಥ' ತನ್ನ ವಿಭಿನ್ನ ನಿರೂಪಣೆ, ಲವಲವಿಕೆಯ ಕತೆ ಹೇಳುವಿಕೆಯ ಕಾರಣಕ್ಕಾಗಿಯೇ ಚಿತ್ರ ಪ್ರೇಕ್ಷಕರ ಮನಸೂರೆಗೊಂಡಿತ್ತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರೆಯಿತು. ನಿರ್ದೇಶಕ ಮಾತ್ರವಲ್ಲದೇ ನಟನಾಗಿ `ಮಠ',`ಎದ್ದೇಳು ಮಂಜುನಾಥ',`ಮೈಲಾರಿ', `ಹುಡುಗರು',`ಅನಂತು v/s ನುಸ್ರತ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಗುರುಪ್ರಸಾದ್‌