About the Author

ಸಂಗೀತ ವಿಶ್ವವಿದ್ಯಾಲಯದ ಡಾ. ಹನುಮಣ್ಣನಾಯಕ ದೊರೆ ಅವರು ಸಂಗೀತಗಾರ, ಲೇಖಕ. 1948ರ ಡಿಸೆಂಬರ್‌ 10ರಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಗ್ಗಿಪಾಲದಲ್ಲಿ ಜನಿಸಿದರು.

ವಚನಗಾನ ವಾಹಿನಿ, ರಾಗದೀಪಿಕೆ ಅವರ ಪ್ರಕಟಿತ ಕೃತಿಗಳು. ದಾಂಪತ್ಯ ಸಂಪದ (ಸಂಪಾದಿತ). ’ಹೈದ್ರಾಬಾದ ಕರ್ನಾಟಕದಲ್ಲಿ ಜನಪದ ಸಂಗೀತ’ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ.  ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಗಾನಗಂಧರ್ವ ಪ್ರಶಾಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಚಂದ್ರಹಾಸ ಪ್ರಶಸ್ತಿಗಳು ಸಂದಿವೆ.

ಹನುಮಣ್ಣನಾಯಕ ದೊರೆ

(10 Dec 1948)