About the Author

ಹನುಮಂತ ಅನಂತ ಪಾಟೀಲ ( ಹ.ಅ.ಪಾಟೀಲ) ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದವರು. 1948ರ ಜೂನ್ 1 ರಂದು ಜನನ. ಧಾರವಾಡ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ. ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಪ್ರೌಢಶಿಕ್ಷಣ, ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ (ಸಿವಿಲ್)  ಪೇದೆಯಾಗಿ (1975 ಏಪ್ರಿಲ್) ಸೇರ್ಪಡೆ, 2006ರಲ್ಲಿ ನಿವೃತ್ತಿ.

ಪ್ರಕಟಿತ ಕೃತಿಗಳು: ಕೋವಿ ಮತ್ತು ಗುಬ್ಬಚ್ಚಿ ಗೂಡು, ಕವನ ಬರುವುದಾದರೆ ಬರಲಿ (ಕವನ ಸಂಕಲನಗಳು), ಯುಗಾದಿ ಒಂದು ಚಿಂತನೆ ಮತ್ತು ಇತರ ಲೇಖನಗಳು, ಇನ್ನೂ ಕೆಲ ಕೃತಿಗಳು ಅಚ್ಚಿನಲ್ಲಿವೆ. ರಿಪ್ಪನ್ ಪೇಟೆಯ ಕಲಾ ಕೌಸ್ತುಭ ಕನ್ನಡ ಸಂಘ, ಸೊರಬ ತಾಲೂಕು ಹಾಗೂ ಶಿವಮೊಗ್ಗ-ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧೆಡೆ ಸನ್ಮಾನಗಳು ಜರುಗಿವೆ. ರಿಪ್ಪನ್ ಪೇಟೆ ಹೋಬಳಿ ಘಟಕದ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. 

ಹವ್ಯಾಸಗಳು - ಓದು ಬರಹ, ಸಂಗೀತ ಶ್ರವಣ (ಹಿಂದುಸ್ತಾನಿ ) ಗಜಲ್, ಭಾವ ಗೀತೆಗಳು, ಹಳೆಯ ಕನ್ನಡ-ಹಿಂದಿ ಚಲನ ಚಿತ್ರ ಗೀತೆಗಳು, ಪ್ರೇಕ್ಷಣೀಯ ಪ್ರಾಕೃತಿಕ ಪಾರಂಪರಿಕ ಮತ್ತು ಐತಿಹಾಸಿಕ ಸ್ಳಳ ವೀಕ್ಷಣೆ. ಸದ್ಯ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ವಾಸವಾಗಿದ್ದಾರೆ.

ಹನುಮಂತ ಅನಂತ ಪಾಟೀಲ್

(01 Jun 1948)