ಯುಗಾದಿ ಒಂದು ಚಿಂತನೆ

Author : ಹನುಮಂತ ಅನಂತ ಪಾಟೀಲ್

Pages 224

₹ 180.00




Year of Publication: 2011
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ-577429, ಶಿವಮೊಗ್ಗ ಜಿಲ್ಲೆ
Phone: 9448900846

Synopsys

ವಿಭಿನ್ನ ವಸ್ತು ಹಾಗೂ ನಿರೂಪಣಾ ಮಾದರಿಯ ಮೂವತ್ತು ಲೇಖನಗಳು ಈ ಕೃತಿಯಲ್ಲಿವೆ. ಸಾಹಿತಿಗಳ, ಸಾಹಿತ್ಯ ಕೃತಿಗಳ, ರಾಷ್ಟ್ರನಾಯಕರ, ರಾಜಕಾರಣಿಗಳ, ಪ್ರಸಿದ್ಧ ಪುಸ್ತಕಗಳ ಪರಿಚಯ ಮಾಡಿಕೊಡುವ ಲೇಖನಗಳಿವೆ. ಹಬ್ಬಗಳ ಮಹತ್ವದ, ಸ್ಥಳೀಯ ಪ್ರತಿಭೆಗಳ ಪರಿಚಯವೂ ಕೆಲವು ಲೇಖನಗಳಲ್ಲಿವೆ. ಸಿನಿಮಾ, ಕ್ರಿಕೆಟ್, ಶಿಕ್ಷಣ - ಸಂಸ್ಕೃತಿ - ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸರಳ-ಸಂಕ್ಷಿಪ್ತ ಮಾಹಿತಿಗಳು ಇಲ್ಲಿನ ಲೇಖನಗಳಲ್ಲಿ ಸಿಗುತ್ತವೆ.

ಲೇಖಕರು ಸ್ಥಳೀಯ ಹಿರಿಕಿರಿಯ ಪ್ರತಿಭೆಗಳ ಪರಿಚಯ ಮಾಡಿಕೊಡುವುದರ ಮೂಲಕ ನಡೆದ ಸಾಹಿತ್ಯಕ ಚಟುವಟಿಕೆಗಳನ್ನು ದಾಖಲಿಸುವ ಮೂಲಕ ಈ ಕೃತಿಯನ್ನು ಹೊರತಂದಿದ್ದಾರೆ. ಗ್ರಾಮೀಣ ಪರಿಸರದ ಸಾಹಿತ್ಯಿಕ ಚಟುವಟಿಕೆಗಳ ಪ್ರಾಮುಖ್ಯವನ್ನೂ ಸಹ ಲೇಖಕರು ಈ ಕೃತಿಯಲ್ಲಿ ತಿಳಿಸಿದ್ದಾರೆ. 

About the Author

ಹನುಮಂತ ಅನಂತ ಪಾಟೀಲ್
(01 June 1948)

ಹನುಮಂತ ಅನಂತ ಪಾಟೀಲ ( ಹ.ಅ.ಪಾಟೀಲ) ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದವರು. 1948ರ ಜೂನ್ 1 ರಂದು ಜನನ. ಧಾರವಾಡ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ. ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಪ್ರೌಢಶಿಕ್ಷಣ, ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ (ಸಿವಿಲ್)  ಪೇದೆಯಾಗಿ (1975 ಏಪ್ರಿಲ್) ಸೇರ್ಪಡೆ, 2006ರಲ್ಲಿ ನಿವೃತ್ತಿ. ಪ್ರಕಟಿತ ಕೃತಿಗಳು: ಕೋವಿ ಮತ್ತು ಗುಬ್ಬಚ್ಚಿ ಗೂಡು, ಕವನ ಬರುವುದಾದರೆ ಬರಲಿ (ಕವನ ಸಂಕಲನಗಳು), ಯುಗಾದಿ ಒಂದು ಚಿಂತನೆ ಮತ್ತು ಇತರ ಲೇಖನಗಳು, ಇನ್ನೂ ಕೆಲ ಕೃತಿಗಳು ಅಚ್ಚಿನಲ್ಲಿವೆ. ರಿಪ್ಪನ್ ಪೇಟೆಯ ಕಲಾ ಕೌಸ್ತುಭ ಕನ್ನಡ ಸಂಘ, ...

READ MORE

Related Books