ಕೋವಿ ಮತ್ತೂ ಗುಬ್ಬಿ ಗೂಡು

Author : ಹನುಮಂತ ಅನಂತ ಪಾಟೀಲ್

Pages 172

₹ 110.00




Year of Publication: 2009
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಕೋವಿ ಮತ್ತೂ ಗುಬ್ಬಿ ಗೂಡು- ಹನುಮಂತ ಅನಂತ ಪಾಟೀಲ್ ಅವರ ಮೊದಲ ಕವನ ಸಂಕಲನ. ಪೊಲೀಸ್ ಇಲಾಖೆಯಲ್ಲಿ ದಶಕಗಳ ಕಾಲ ವೃತ್ತಿಯಲ್ಲಿದ್ದು, ನಿವೃತ್ತರಾಗಿದ್ದಾರೆ. ಖಾಕಿಯೊಳಗೆ ಇದ್ದು ಕವಿತೆಯೊಂದಿಗೆ ಅನುಸಂಧಾನ ಮಾಡಿಕೊಳ್ಳುತ್ತಾ ಅತ್ಯಂತ ಸರಳ, ಸಜ್ಜನಿಕೆಯಿಂದ ತಾವು ಒಪ್ಪಿಕೊಂಡು ಬಂದ ತತ್ವಾದರ್ಶಗಳೊಂದಿಗೆ ಬಾಳುತ್ತಿರುವವರು, ಪ್ರಾಮಾಣಿಕತೆ-ಮಾನವೀಯತೆಯ ಸ್ವರೂಪ ಅವರು. ಹಿಂಸೆಯ ರೂಪಕವಾದ ಕೋವಿ ಮೂಲೆ ಸೇರಬೇಕು, ಅದರ ಸುತ್ತ ಜೇಡ ಬಲೆ ಹೆಣೆಯಬೇಕು. ಕೊನೆಗೊಮ್ಮೆ ಗುಬ್ಬಚ್ಚಿ ಅದರ ಮೇಲೆ ಗೂಡು ಕಟ್ಟಿ ಹಿಂಸೆ ಶಾಶ್ವತವಾಗಿ ತೊಲಗಬೇಕು ಎಂಬುದು ಕವಿಯ ಆಶಯ. ವೈಚಾರಿಕತೆ, ಜಾತ್ಯಾತೀತ ಆದರ್ಶಗಳಲ್ಲಿ ನಂಬಿಕೆ ಇಟ್ಟಿರುವ ಈ ಕವಿ ತಮ್ಮ ಕವನಗಳ ಮೂಲಕ ಅಂತಿಮವಾಗಿ ಹೊಸದೊಂದು ಸಮಾಜದ ಕನಸು ಕಾಣುತ್ತಾರೆ. ಸ್ವರ್ಗದ ಭ್ರಮೆಗಳನ್ನು ತಿರಸ್ಕರಿಸಿ ಈ ಭೂಮಿಯ ಬದುಕಿಗಾಗಿ ಇಲ್ಲಿಯ ಕವಿ ಹಂಬಲಿಸುತ್ತಾರೆ. ಬಂದಿದೆ ಬಂದಿದೆ ಸ್ವಾತಂತ್ರ ! ಯಾರಿಗೆ ಬಂದಿದೆ ಎಲ್ಲಿಗೆ ಬಂದಿದೆ ಏತಕೆ ಬಂದಿದೆ ಸ್ವಾತಂತ್ರ? ದೇಶಕೆ ಇಲ್ಲದ ಕೋಶಕೆ ಇಲ್ಲದ ಸಾಮಾನ್ಯನಿಗಿಲ್ಲದ ಸ್ವಾತಂತ್ರ ಎಂದು ಸ್ವಾತಂತ್ರೋತ್ತರ ಭಾರತದ ಸ್ಥಿತಿಗಾಗಿ ಮರುಕಪಡುವ ಕವಿ, ನಿಜ ಸ್ವಾತಂತ್ರ್ಯದ ಕನಸು ಕಾಣುತ್ತಾರೆ.

About the Author

ಹನುಮಂತ ಅನಂತ ಪಾಟೀಲ್
(01 June 1948)

ಹನುಮಂತ ಅನಂತ ಪಾಟೀಲ ( ಹ.ಅ.ಪಾಟೀಲ) ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದವರು. 1948ರ ಜೂನ್ 1 ರಂದು ಜನನ. ಧಾರವಾಡ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ. ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಪ್ರೌಢಶಿಕ್ಷಣ, ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ (ಸಿವಿಲ್)  ಪೇದೆಯಾಗಿ (1975 ಏಪ್ರಿಲ್) ಸೇರ್ಪಡೆ, 2006ರಲ್ಲಿ ನಿವೃತ್ತಿ. ಪ್ರಕಟಿತ ಕೃತಿಗಳು: ಕೋವಿ ಮತ್ತು ಗುಬ್ಬಚ್ಚಿ ಗೂಡು, ಕವನ ಬರುವುದಾದರೆ ಬರಲಿ (ಕವನ ಸಂಕಲನಗಳು), ಯುಗಾದಿ ಒಂದು ಚಿಂತನೆ ಮತ್ತು ಇತರ ಲೇಖನಗಳು, ಇನ್ನೂ ಕೆಲ ಕೃತಿಗಳು ಅಚ್ಚಿನಲ್ಲಿವೆ. ರಿಪ್ಪನ್ ಪೇಟೆಯ ಕಲಾ ಕೌಸ್ತುಭ ಕನ್ನಡ ಸಂಘ, ...

READ MORE

Related Books