About the Author

ಸಾಹಿತಿ ಹೊರೆಯಾಲ ದೊರೆಸ್ವಾಮಿ ಅವರು ಚಾಮರಾಜನಗರ ಜಿಲ್ಲೆಯ ಹೊರೆಯಾಲ ಗ್ರಾಮದಲ್ಲಿ 1946 ಡಿಸೆಂಬರ್ 31ರಂದು ಜನಿಸಿದರು. ಹುಯಿಲಾಳ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಸಂಶೋಧಕರಾಗಿ ವೃತ್ತಿ ಆರಂಭಿಸಿದರು. ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ, ವಿಚಾರವಾದಿ ಚಳವಳಿ, ದಲಿತ ಚಳವಳಿಯಲ್ಲಿ ತೊಡಗಿಕೊಂಡಿದ್ದ ಇವರು 

೩೧-೧೨-೧೯೪೬ರಲ್ಲಿ ಹುಟ್ಟಿ, ಹುಯಿಲಾಳ ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮುಗಿಸಿ, ಮೈಸೂರು ವಿ.ವಿ.ಯಲ್ಲಿ ಸಹಾಯಕ ಸಂಶೋಧಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ೧೦ ವರ್ಷಗಳ ನಂತರ ಈ ವತಿಯಿಂದ ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ, ಮಾರಾಟ, ವಿಚಾರವಾದಿ ಚಳುವಳಿ, ದಲಿತ ಚಳುವಳಿ ಮುಂತಾದ ಪದ್ಧತಿಗಳಲ್ಲಿ ತೊಡಗಿಕೊಂಡಿದ್ದರು.

ಇವರ ಪ್ರಮುಖ ಕೃತಿಗಳೆಂದರೆ ಕೇಳು ಒಂದು ಕಥೆಯ, ಮಕ್ಕಳ ಬಳಗ, ನಾನು ಒಂದೂರಿನಲ್ಲಿ ಒಬ್ಬ ರಾಜ ಪರ್ನಸ್, ಬಾ ಚೇತನವೇ ಬಾ, ಏಕಾಂಗಿ ನಾನವ್ವ ಇದಿಯಮ್ಮ ಹುಡುಕಾಡಿ ಬಂದ ಹೊನ್ನಿನ ಬದುಕು, ಬಯಲು, ಗೆದ್ದಲಿ ಮುಂತಾದವು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಪುಸ್ತಕ ಬಹುಮಾನ ಮುಂತಾದ ಗೌರವಗಳು ಸಂದಿವೆ.

ಹೊರೆಯಾಲ ದೊರೆಸ್ವಾಮಿ

(31 Dec 1946)