ಚಪ್ಪಲಿ ರಿಪೇರಿ

Author : ಹೊರೆಯಾಲ ದೊರೆಸ್ವಾಮಿ

Pages 182




Year of Publication: 2011
Published by: ತನು ಮನು ಪ್ರಕಾಶನ
Address: ನಂ.1267, 1 ನೇ ಕ್ರಾಸ್, 2 ನೇ ಹಂತ, ಶ್ರೀರಾಮಪುರ 2 ನೇ ಹಂತ, ವಿವೇಕಾನಂದ ವೃತ್ತದ ಹತ್ತಿರ, ಮೈಸೂರು - 570023
Phone: 9448056562

Synopsys

`ಚಪ್ಪಲಿ ರಿಪೇರಿ' ಕೃತಿಯು ಹೊರೆಯಾಲ ದೊರೆಸ್ವಾಮಿ ಅವರ ಕಥಾಸಂಕಲನವಾಗಿದೆ. ಇಲ್ಲಿ ಕತೆಗಾರ ಕಥೆಯೆಂದರೆ ಬದುಕಿನ ಭಾಗವೇ ಆಗಿದ್ದು ನಿರೂಪಿಸುವಲ್ಲಿ ಪ್ರಾಮಾಣಿಕತೆ, ಸತ್ಯದ ದರ್ಶನ ಅಗತ್ಯ ಇರಬೇಕಾಗುತ್ತದೆ ಎನ್ನುತ್ತಾರೆ. ಕಥೆಗಳಿಂದಾಗಿ ಸಾಮಾಜಿಕ ಪರಿವರ್ತನೆಯಾಗಿ ಯಾರದಾದರೂ ಅಸಹನೀಯ ಬದುಕು ಸಹ್ಯವಾಗುವುದಾದರೆ ಆ ಕಥೆಗಳ ಮೌಲ್ಯ ಹೆಚ್ಚುತ್ತದೆ. ಇಲ್ಲಿ ಕಥೆಗಳ ಮೂಲಕ ನಿರೂಪಿಸಿದ ಗ್ರಾಮೀಣ ಜೀವನದ ಸ್ತರ ಒ೦ದು ಮುಖವಾದರೆ ನಗರ ಜೀವನದ್ದು ಅದಕ್ಕಿಂತ ಭಿನ್ನ ಕಥೆಗಳ ಓಟ ನಿಧಾನ. ಹಳ್ಳಿಗಳ ವಾತಾವರಣದಲ್ಲಿ ಸಂಬಂಧಗಳು ಗಾಢವಾಗಿದ್ದು ಮನ ಕಲಕಿದರೆ ನಗರಗಳಲ್ಲಿ - ಅದು ಯಾಂತ್ರಿಕವಾಗಿ, ಆಕರ್ಷಣೆಗಿಂತ ಏಕರ್ಷಣೆ ಹೆಚ್ಚಾಗಿದೆ. ಕೆಲವು ಕಥೆಗಳಲ್ಲಿ ಏಕತಾನತೆಯಿದ್ದು, ವಿವಿಧ ಕಾಲಘಟ್ಟಗಳಲ್ಲಿ ಬರೆದ ಕಾರಣದಿಂದ ಕಾಲದಲ್ಲಿನ ವ್ಯತ್ಯಾಸ ಸಹಜವಾಗಿ ಮೂಡಿಬಂದಿದೆ.  

About the Author

ಹೊರೆಯಾಲ ದೊರೆಸ್ವಾಮಿ
(31 December 1946)

ಸಾಹಿತಿ ಹೊರೆಯಾಲ ದೊರೆಸ್ವಾಮಿ ಅವರು ಚಾಮರಾಜನಗರ ಜಿಲ್ಲೆಯ ಹೊರೆಯಾಲ ಗ್ರಾಮದಲ್ಲಿ 1946 ಡಿಸೆಂಬರ್ 31ರಂದು ಜನಿಸಿದರು. ಹುಯಿಲಾಳ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಸಂಶೋಧಕರಾಗಿ ವೃತ್ತಿ ಆರಂಭಿಸಿದರು. ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ, ವಿಚಾರವಾದಿ ಚಳವಳಿ, ದಲಿತ ಚಳವಳಿಯಲ್ಲಿ ತೊಡಗಿಕೊಂಡಿದ್ದ ಇವರು  ೩೧-೧೨-೧೯೪೬ರಲ್ಲಿ ಹುಟ್ಟಿ, ಹುಯಿಲಾಳ ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮುಗಿಸಿ, ಮೈಸೂರು ವಿ.ವಿ.ಯಲ್ಲಿ ಸಹಾಯಕ ಸಂಶೋಧಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ೧೦ ವರ್ಷಗಳ ನಂತರ ಈ ವತಿಯಿಂದ ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ, ಮಾರಾಟ, ವಿಚಾರವಾದಿ ಚಳುವಳಿ, ದಲಿತ ಚಳುವಳಿ ಮುಂತಾದ ಪದ್ಧತಿಗಳಲ್ಲಿ ...

READ MORE

Reviews

(ಹೊಸತು, ಫೆಬ್ರವರಿ 2012, ಪುಸ್ತಕದ ಪರಿಚಯ)

ನಗರ ಜೀವನ ಗ್ರಾಮೀಣ ಜೀವನ ಎರಡೂ ಕಡೆಯ ಸಂವೇದನೆಗಳನ್ನೊಳಗೊಂಡಿರುವ ಕಥೆಗಳಿವು. ಕಥೆಗಳು ಎಲ್ಲೆಲ್ಲೂ ಸೃಷ್ಟಿಯಾಗುವಂಥ ವಾತಾವರಣ, ಸನ್ನಿವೇಶ ನಮ್ಮದು. ಅವುಗಳನ್ನು ಬಿಟ್ಟು ಈ ಪ್ರಪಂಚವಿರಲು ಸಾಧ್ಯವಿಲ್ಲ. ಆದರೆ, ಉತ್ತಮ ಕಥೆಗಳು ಮಾತ್ರ ಎಲ್ಲೆಂದರಲ್ಲಿ ಸೃಷ್ಟಿಯಾಗಲು ಸಾಧ್ಯವಿಲ್ಲ. ಕಥೆಯೆಂದರೆ ಬದುಕಿನ ಭಾಗವೇ ಆಗಿದ್ದು ನಿರೂಪಿಸುವಲ್ಲಿ ಪ್ರಾಮಾಣಿಕತೆ, ಸತ್ಯದ ದರ್ಶನ ಅಗತ್ಯ ಇರಬೇಕಾಗುತ್ತದೆ. ಕಥೆಗಳಿಂದಾಗಿ ಸಾಮಾಜಿಕ ಪರಿವರ್ತನೆಯಾಗಿ ಯಾರದಾದರೂ ಅಸಹನೀಯ ಬದುಕು ಸಹ್ಯವಾಗುವುದಾದರೆ ಆ ಕಥೆಗಳ ಮೌಲ್ಯ ಹೆಚ್ಚುತ್ತದೆ. ಇಲ್ಲಿ ಕಥೆಗಳ ಮೂಲಕ ನಿರೂಪಿಸಿದ ಗ್ರಾಮೀಣ ಜೀವನದ ಸ್ತರ ಒ೦ದು ಮುಖವಾದರೆ ನಗರ ಜೀವನದ್ದು ಅದಕ್ಕಿಂತ ಭಿನ್ನ ಕಥೆಗಳ ಓಟ ನಿಧಾನ. ಹಳ್ಳಿಗಳ ವಾತಾವರಣದಲ್ಲಿ ಸಂಬಂಧಗಳು ಗಾಢವಾಗಿದ್ದು ಮನ ಕಲಕಿದರೆ ನಗರಗಳಲ್ಲಿ - ಅದು ಯಾಂತ್ರಿಕವಾಗಿ, ಆಕರ್ಷಣೆಗಿಂತ ಏಕರ್ಷಣೆ ಹೆಚ್ಚಾಗಿದೆ. ಕೆಲವು ಕಥೆಗಳಲ್ಲಿ ಏಕತಾನತೆಯಿದ್ದು, ವಿವಿಧ ಕಾಲಘಟ್ಟಗಳಲ್ಲಿ ಬರೆದ ಕಾರಣದಿಂದ ಕಾಲದಲ್ಲಿನ ವ್ಯತ್ಯಾಸ ಸಹಜವಾಗಿ ಮೂಡಿಬಂದಿದೆ. ಅಂದಿನ ಬದುಕು ಇಂದಿನದಲ್ಲ; ಇಂದಿನದು ಮುಂದಿನದಲ್ಲ ವಾದರೂ ಮೌಲ್ಯಗಳು ಶಾಶ್ವತವಾಗಿ ಉಳಿಯುವಂಥವೆಂದು ಮನಗಾಣುತ್ತೇವೆ. ಲೇಖಕರು ಇದುವರೆಗೆ ಇನ್ನೂರಕ್ಕೂ ಮಿಕ್ಕಿ ಕಥೆಗಳನ್ನು ಬರೆದಿದ್ದಾರಾದರೂ ಹತ್ತು ಕಥೆಗಳ ಒಂದು ಸಂಕಲನ ಹಿಂದೆ ಪ್ರಕಟವಾಗಿದ್ದು ಇದೀಗ 22 ಕಥೆಗಳ ಈ ಪುಸ್ತಕ ಮಾತ್ರ ಪ್ರಕಟವಾಗಿವೆ.

 

Related Books