About the Author

ಸಾಹಿತಿ ಜಯತೀರ್ಥ ರಾಜಪುರೋಹಿತ ಅವರು ಮೂಲತಃ ಗಂಗಾವತಿ ತಾಲ್ಲೂಕಿನ ಕನಕಗಿರಿಯವರು. 1925 ಜುಲೈ 01ರಂದು ಜನಿಸಿದರು. ತಂದೆ ಶೇಷಾಚಾರ‍್ಯ, ತಾಯಿ ರಂಗಮ್ಮ. ತಂದೆಯಿಂದ ಸಂಸ್ಕೃತ ಶಿಕ್ಷಣ ಪಡೆದ ಇವರು ಹರಿದಾಸರ ಹಾಡುಗಳನ್ನು ಚಿಕ್ಕವರಿದ್ದಾಗಲೇ ಹಾಡುತ್ತಿದ್ದರು. ಬಿ. ಎ. ಪದವಿಯನ್ನು ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಪಡೆದರು. ನಂತರ ಡೆಪ್ಯುಟಿ ಕಮೀಷನರ್, ಮುನಿಸಿಪಲ್ ಕಮೀಷನರ್, ವಿ.ವಿ.ದ ಪರೀಕ್ಷಾ ನಿಯಂತ್ರಣಾಧಿಕಾರಿ, ನೀರಾವರಿ ಯೋಜನೆಗಳ ಆಡಳಿತಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಕನ್ನಡ ಅಭಿವೃದ್ಧಿ ನಿರ್ದೇಶನದ ಪ್ರಥಮ ನಿರ್ದೇಶಕರಾಗಿದ್ದರು. 

ಹಾಲುಜೇನು, ಸುಳಿಗಾಳಿ, ಕಡಲತೋಳ (ಅನುವಾದ) ಅವರ ಕಾದಂಬರಿಗಳು. ಪಾರವ್ವನ ಪಂಚಾಯಿತಿ, ರೋಹಿಣಿ, ಮೌಲ್ಯಗಳು, ಶಿಥಿಲ ಶಿಲೆ - ಅವರ ಪ್ರಮುಖ ಕತಾ ಸಂಕಲನಗಳು. ತುಂಗೆಯಂಗಳದಲ್ಲಿ ಅವರ ಗೀತರೂಪಕ. ಅವರ ಕನ್ನಡ ತೀರ್ಪುಗಳು ಕೃತಿಗೆ ರಾಜ್ಯ ಸರಕಾರದ ವಿಶೇಷ ಬಹುಮಾನ, ಸುಳಿಗಾಳಿ ಕಾದಂಬರಿಗೆ ಸುಧಾ ಪತ್ರಿಕೆಯ ರಾಜ್ಯಮಟ್ಟದ ಬಹುಮಾನ, ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರ ಸಂದಿವೆ. ಅವರು 1986 ಏಪ್ರಿಲ್ 26ರಂದು ನಿಧನರಾದರು.

ಜಯತೀರ್ಥ ರಾಜಪುರೋಹಿತ

(01 Jul 1925)