ರಾಮತೀರ್ಥ

Author : ಜಯತೀರ್ಥ ರಾಜಪುರೋಹಿತ

Pages 96

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ರಾಮತೀರ್ಥ' ಈ ಕೃತಿಯು ಲೇಖಕ  ಜಯತೀರ್ಥ ರಾಜಪುರೋಹಿತ್‌ ಅವರು ರಚಿಸಿದ ಜೀವನಚಿತ್ರ. ಕೇವಲ 33 ವರ್ಷದ ಜೀವನಕಾಲದಲ್ಲಿ ಅದ್ಭುತ ಸಾಧನೆ ಮಾಡಿ, ಭಾರತೀಯರಲ್ಲಿ ದೇಶಾಭಿಮಾನ ಜಾಗೃತಗೊಳಿಸಿ ’ವ್ಯಾವಹಾರಿಕ ವೇದಾಂತ’ ಬೋಧಿಸಿದ, ಪ್ರತಿ ಭಾರತೀಯನೂ ಭಾರತದ ಪ್ರತಿಮೂರ್ತಿಯೆಂದು ಸಾರಿದ ರಾಮತೀರ್ಥರ ಜೀವನದ ಬಗೆಗಿನ ಕೃತಿಯು ಇದು. ರಾಮತೀರ್ಥರು ನಡೆದು ಬಂದ ಹಾದಿ, ಬಾಲ್ಯದ ದಿನಗಳು, ದೇಶಾಭಿಮಾನದ ತಿರುವುಗಳು, ಪಾಂಡಿತ್ಯ ಹೀಗೆ ಅವರ ಜೀವನದ ಅಭೂತಪೂರ್ವ ಘಟ್ಟಗಳನ್ನು ಲೇಖಕರು ಈ ಕೃತಿಯಲ್ಲಿ ಸರಳ ಕನ್ನಡದಲ್ಲಿ ಚಿತ್ರಿಸಿದ್ದಾರೆ.

About the Author

ಜಯತೀರ್ಥ ರಾಜಪುರೋಹಿತ
(01 July 1925)

ಸಾಹಿತಿ ಜಯತೀರ್ಥ ರಾಜಪುರೋಹಿತ ಅವರು ಮೂಲತಃ ಗಂಗಾವತಿ ತಾಲ್ಲೂಕಿನ ಕನಕಗಿರಿಯವರು. 1925 ಜುಲೈ 01ರಂದು ಜನಿಸಿದರು. ತಂದೆ ಶೇಷಾಚಾರ‍್ಯ, ತಾಯಿ ರಂಗಮ್ಮ. ತಂದೆಯಿಂದ ಸಂಸ್ಕೃತ ಶಿಕ್ಷಣ ಪಡೆದ ಇವರು ಹರಿದಾಸರ ಹಾಡುಗಳನ್ನು ಚಿಕ್ಕವರಿದ್ದಾಗಲೇ ಹಾಡುತ್ತಿದ್ದರು. ಬಿ. ಎ. ಪದವಿಯನ್ನು ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಪಡೆದರು. ನಂತರ ಡೆಪ್ಯುಟಿ ಕಮೀಷನರ್, ಮುನಿಸಿಪಲ್ ಕಮೀಷನರ್, ವಿ.ವಿ.ದ ಪರೀಕ್ಷಾ ನಿಯಂತ್ರಣಾಧಿಕಾರಿ, ನೀರಾವರಿ ಯೋಜನೆಗಳ ಆಡಳಿತಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಕನ್ನಡ ಅಭಿವೃದ್ಧಿ ನಿರ್ದೇಶನದ ಪ್ರಥಮ ನಿರ್ದೇಶಕರಾಗಿದ್ದರು.  ಹಾಲುಜೇನು, ಸುಳಿಗಾಳಿ, ಕಡಲತೋಳ (ಅನುವಾದ) ಅವರ ಕಾದಂಬರಿಗಳು. ಪಾರವ್ವನ ಪಂಚಾಯಿತಿ, ರೋಹಿಣಿ, ಮೌಲ್ಯಗಳು, ಶಿಥಿಲ ಶಿಲೆ ...

READ MORE

Related Books