About the Author

ಕೆ.ಸಿ.ಶಿವಪ್ಪ-ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯಲ್ಲಿ26-07-1937 ರಲ್ಲಿ ಜನಿಸಿದ ಇವರು ಚಾಮರಾಜನಗರ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಸರ್ಕಾರಿ ತರಬೇತಿ ಮಹಾವಿದ್ಯಾಲಯ(ಮೈಸೂರು), ಕೇಂದ್ರ ಚರ್ಮಸಂಶೋಧನಾಲಯ (ಚೆನ್ನೈ), ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಸಚಿವಾಲಯ (ವಿಧಾನಸೌಧ), ಜೆ.ಎಸ್.ಎಸ್ ಮಹಾವಿದ್ಯಾಪೀಠ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 

ರಾಗರತಿ, ಅನುರಾಗ, ರಾಧಾಮಾಧವ, ಚಿತ್ತಭಿತ್ತಿ, ಚಿತ್ರಾಂಬರ, ಚೆಂಬೆಳಕು, ಚಿದಾನಂದ, ಚೆಲುವೆ,ಚಂದ್ರಿಕೆ, ಚಾರುಲತೆ, ಚಿತ್ರಪತ್ರ(ಕವನ ಸಂಕಲನಗಳು). ಮುದ್ದು ರಾಮನ ಮನಸು, ಮುದ್ದುರಾಮನ ಬದುಕು-ಬೆಳಕು(ಚೌಪದಿಗಳ ಸಂಕಲನ). ಬದುಕಿಗೊಂದು ಭರವಸೆ, ಚಿತ್ತಚಿತ್ತಾರ(ವ್ಯಕ್ತಿ ವಿಕಸನ). ಮೌನಸ್ಪಂದನ, ಚಿತ್ತಪರಿಪಾಕ(ಚಿಂತನ ಬಿಡಿನುಡಿಸಂಚಯ). ಜೀವಸತ್ವಗಳು, ಬೆಡಗಿನ ಬಾಟಿಕ್, ಭೂಮಿ, ಶುಕ್ರದೆಸೆ(ಅನುವಾದ), ಅರವಿಂದ ದರ್ಶನ, ವಂದನಾ, ವಿಶ್ವಧರ್ಮ ದರ್ಶನ ಸಂಪುಟ-2. ರಾಜೇಂದ್ರ ಚಿತ್ರಸಂಪುಟ, ರಾಜೇಂದ್ರ ನುಡಿನಮನ, ರಾಜೇಂದ್ರ ಕವನಕುಸುಮ(ಸಂಪಾದನೆ), ಬಾಳಬಣ್ಣ, ಪಂಚತಂತ್ರದ ಕತೆಗಳು, ವಿನಯ ಕನ್ನಡ ಭಾರತಿ(ಇತರೆ).ಹೀಗೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಇಂಗ್ಲಿಷಿನಲ್ಲಿಯೂ ಹಲವು ಕೃತಿಗಳು ಪ್ರಕಟಗೊಂಡಿವೆ. 

ಡಿ.ವಿ.ಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ, ಕುಲಪತಿ ಕೆ.ಎಂ. ಮುನ್ಷಿ ಸನ್ಮಾನ, ರಮಣಶ್ರೀ ಶರಣ ಪ್ರಶಸ್ತಿ, ಬಸವ ವೇದಿಕೆಯ ವಚನಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸುವರ್ಣ ಗೌರವ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ, ದಶಮಾನೋತ್ಸವ ಹೊಯ್ಸಳ ಪ್ರಶಸ್ತಿ, ಭಾರತ ಸರ್ಕಾರದ ಎಕ್ಸೆಲೆನ್ಸ್ ಇನ್ ಪ್ರಿಂಟಿಂಗ್ ಅವಾರ್ಡ್(ಬೆಂವಿವಿ ಪ್ರಕಟಣೆಗಳಿಗೆ), ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.

ಕೆ.ಸಿ. ಶಿವಪ್ಪ

(26 Jul 1937)