ಮುದ್ದುರಾಮನ ಬದುಕು-ಬೆಳಕು

Author : ಕೆ.ಸಿ. ಶಿವಪ್ಪ

Pages 224

₹ 200.00




Year of Publication: 2016
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಹಿರಿಯ  ಲೇಖಕ ಕೆ.ಸಿ.ಶಿವಪ್ಪನವರ ’ ಮುದ್ದುರಾಮನ ಮನಸು’ ಕೃತಿಯಲ್ಲಿ ಸುಮಾರು 8000 ಚೌಪದಿಗಳನ್ನು ಕೊಡಲಾಗಿದೆ. ಒಂಬತ್ತು ವಿಭಾಗಗಳಲ್ಲಿ ಚೌಪದಿಗಳು ಹರಡಿಕೊಂಡಿವೆ.  ವ್ಯಕ್ತಿತ್ವ ವಿಕಸನಕ್ಕೆ ಚೌಪದಿಗಳು ಹೇಗೆ ನೆರವಾಗುತ್ತದೆ ಎಂಬುದನ್ನು ಕೃತಿಯಲ್ಲಿ ವಿವರಿಸಲಾಗಿದೆ. ವ್ಯಕ್ತಿತ್ವ ವಿಕಸನದಲ್ಲಿ ಆಸಕ್ತಿ ಇರುವವರಿಗೆ ಇದೊಂದು ಉತ್ತಮ ಕೈಪಿಡಿ. ನಾಲ್ಕು ದಶಕಗಳ ಅವರ ಕಾವ್ಯಕೃಷಿಯ ಫಲವಾಗಿ ಮೂಡಿಬಂದ 504 ಒಲವಿನ ಗೇಯಗೀತೆಗಳು ಮೊದಲ ಸಂಪುಟದಲ್ಲಿ ಹಾಗೂ 581 ಗೇಯಗೀತೆಗಳು 2ನೇ ಸಂಪುಟದಲ್ಲಿ ಸಮಾವೇಶಗೊಂಡಿವೆ. ಬದುಕು, ಚಿಂತನೆ, ಪ್ರಕೃತಿ, ದೈವ, ಅನುಭಾವ ಇಲ್ಲಿನ ಕವನದ ವಸ್ತುಗಳಾಗಿವೆ. ಐದು ಮುದ್ರಣ ಕಂಡು ಸತತ ಬೇಡಿಕೆಯಲ್ಲಿರುವ ಜನಪ್ರಿಯ ಕೃತಿ ಎನಿಸಿದೆ ಇದು. 

About the Author

ಕೆ.ಸಿ. ಶಿವಪ್ಪ
(26 July 1937)

ಕೆ.ಸಿ.ಶಿವಪ್ಪ-ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯಲ್ಲಿ26-07-1937 ರಲ್ಲಿ ಜನಿಸಿದ ಇವರು ಚಾಮರಾಜನಗರ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಸರ್ಕಾರಿ ತರಬೇತಿ ಮಹಾವಿದ್ಯಾಲಯ(ಮೈಸೂರು), ಕೇಂದ್ರ ಚರ್ಮಸಂಶೋಧನಾಲಯ (ಚೆನ್ನೈ), ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಸಚಿವಾಲಯ (ವಿಧಾನಸೌಧ), ಜೆ.ಎಸ್.ಎಸ್ ಮಹಾವಿದ್ಯಾಪೀಠ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ರಾಗರತಿ, ಅನುರಾಗ, ರಾಧಾಮಾಧವ, ಚಿತ್ತಭಿತ್ತಿ, ಚಿತ್ರಾಂಬರ, ಚೆಂಬೆಳಕು, ಚಿದಾನಂದ, ಚೆಲುವೆ,ಚಂದ್ರಿಕೆ, ಚಾರುಲತೆ, ಚಿತ್ರಪತ್ರ(ಕವನ ಸಂಕಲನಗಳು). ಮುದ್ದು ರಾಮನ ಮನಸು, ಮುದ್ದುರಾಮನ ಬದುಕು-ಬೆಳಕು(ಚೌಪದಿಗಳ ಸಂಕಲನ). ಬದುಕಿಗೊಂದು ಭರವಸೆ, ಚಿತ್ತಚಿತ್ತಾರ(ವ್ಯಕ್ತಿ ವಿಕಸನ). ಮೌನಸ್ಪಂದನ, ಚಿತ್ತಪರಿಪಾಕ(ಚಿಂತನ ಬಿಡಿನುಡಿಸಂಚಯ). ಜೀವಸತ್ವಗಳು, ಬೆಡಗಿನ ಬಾಟಿಕ್, ಭೂಮಿ, ಶುಕ್ರದೆಸೆ(ಅನುವಾದ), ಅರವಿಂದ ದರ್ಶನ, ...

READ MORE

Related Books