About the Author

ಪ್ರೊ. ಕೆ.ಈ. ರಾಧಾಕೃಷ್ಣ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆ (ಜನನ: 22-12-1946) ಮೂಲದವರು. ತಂದೆ ಈಶ್ವರಪ್ಪ, ತಾಯಿ ಕಾವೇರಮ್ಮ. ಬೆಂಗಳೂರು ವಿ.ವಿ.ಯಿಂದ ಇಂಗ್ಲಿಷ್ ನಲ್ಲಿ ಎಂ.ಎ. ಹಾಗೂ ಎಲ್.ಎಲ್. ಬಿ.ಪದವೀಧರರು. 1972 ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ 1988 ರಲ್ಲಿ ಪ್ರಾಂಶುಪಾಲರಾಗಿ, 2002 ರಲ್ಲಿ ಸ್ವಯಂ ನಿವೃತ್ತಿ ಪಡೆದರು.

ಯುಜಿಸಿ ಯಲ್ಲಿ ವಿಷಯ ಪರಿಣಿತರ ಸಮಿತಿ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ನೀತಿ ರಚನೆಯ ಸಮಿತಿ ಸದಸ್ಯರಾಗಿದ್ದರು. ಬೆಂಗಳೂರು ವಿ.ವಿ.ಯಲ್ಲಿ ಅಭ್ಯಾಸ ಮಂಡಳಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಹೀಗೆ ವಿವಿಧ ವಿಭಾಗಗಳಲ್ಲಿ ಸದಸ್ಯರಾಗಿದ್ದರು. ಅವರು ಸ್ವತಃ ಯಕ್ಷಗಾನ ಕಲಾವಿದರು. ಕವಿಗಳು, ಕನ್ನಡ ಹಾಗೂ ತುಳು ಭಾಷೆಯಲ್ಲೂ ಹಲವು ಕೃತಿಗಳನ್ನು ರಚಿಸಿದ್ದಾರೆ.

ಕೃತಿಗಳು:ಕನ್ನಕಾಡು (ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪ್ರಾಧಿಕಾರ ಪ್ರಶಸ್ತಿ ಪಡೆದ ಕೃತಿ), ಭಾರತಿ ಸಮುದ್ರ (ಕವನ ಸಂಕಲನ), ಅಕ್ಷದಲ್ಲಿ ಬೆಂಕಿ (ಲೇಖನಗಳ ಸಂಗ್ರಹ), ವಿಶ್ವಗ್ರಾಮ, ಮುಗಿಲಗಲ, ಕಲಾ ಪ್ರಸಂಗ, ವಾರಿ ನೋಟ, ಮರ್ಯಾದೆ ಮಾತು, ಸತ್ಯಪ್ಪೆ ಬೆಳಲು (ತುಳು ಕತಾ ಸಂಕಲನ-ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ), ಕನ್ನಡಕ್ಕೆ ಅನುವಾದಿತ ಕೃತಿಗಳು: ನಂದನ ನಿಲೇಕಣಿ ಬಿಂಬ ಭಾರತ, ಜೈರಾಮ ರಮೇಶ್, ಇಂದಿರಾ ಗಾಂಧಿ ಲೈಫ್ ಇನ್ ನೇಚರ್, ಯಾರು ಭಾರತ ಮಾತೆ. ಇಂಗ್ಲಿಷಿಗೆ ಅನುವಾದಿತ ಕೃತಿಗಳು: ಜೈನ ಮಹಾಪುರಾಣ, ಡಿವಿಜಿ ಬದುಕು-ಬರಹ, ಗೋಪಾಲಕೃಷ್ಣ ಅಡಿಗ-ಅನುಸಂಧಾನ, ಅಲ್ಲಮ-ಅನುಭಾವ, ಪಂಪಾಧ್ಯಾಯನ, ಕುಮಾರವಯಅಸ ಕಥನ, ಲಕ್ಷ್ಮೀಶ ಕಾವ್ಯ ವೈಭವ, ರತ್ನಾಕರ ವರ್ಣಿ ಇತಿ- ವ್ರತ, ಜಗನ್ನಾಥ ಪಂಡಿತ, ಅನೂಹ್ಯ, ಅಲೋಕ ಇತ್ಯಾದಿ.

ಪ್ರಶಸ್ತಿ-ಗೌರವ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗೋರಖನಾಥ ಪ್ರಶಸ್ತಿ, ಡಿವಿಜಿ ಪುರಸ್ಕಾರ, ಶಿಕ್ಷಣ ಸೇವೆಗಾಗಿ ರಾಷ್ಟ್ರೀಯ ಚಾಣಕ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯಿಂದ ಗೌರವ ಡಾಕ್ಟರೇಟ್ ಗೌರವ, ಬಿಬಿಎಂಪಿಯಿಂದ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯಿಂದ ಸಂಸ ಪ್ರಶಸ್ತಿ, ಚಂದನ ದೂರದರ್ಶನದಲ್ಲಿ ನೆಲದ ಸಿರಿ ಎಂಬ ಕಾರ್ಯಕ್ರಮದಡಿ ಹೆಸರಾಂತ ಸಾಹಿತಿ-ಕಲಾವಿದರ ಪರಿಚಯಾತ್ಮಕ ಸಾಕ್ಷ್ಯಚಿತ್ರಗಳ ನಿರ್ಮಾಣ ಹಾಗೂ ಪ್ರಸಾರವಾಗಿವೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದು ರಾಜಕೀಯವಾಗಿಯೂ ಸಕ್ರಿಯರಾಗಿದ್ದಾರೆ.

ಕೆ.ಈ. ರಾಧಾಕೃಷ್ಣ

(22 Dec 1946)