About the Author

ಡಾ. ಕೆ.ಆರ್ .  ಶ್ರೀಧರ್ ಅವರು ಮನೋವೈದ್ಯರು. ಹದಿನಾಲ್ಕು ವರ್ಷಗಳ ಸರ್ಕಾರೀ ಸೇವೆಯ ನಂತರ ಕಳೆದ ಮೂವತ್ತು ವರ್ಷಗಳಿಂದ ಶಿವಮೊಗ್ಗೆಯಲ್ಲಿ ಖಾಸಗೀ ವೈದ್ಯ ವೃತ್ತಿಯಲ್ಲಿ ನಿರತರಾಗಿದ್ದಾರೆ. 30 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ 'ಗ್ರಾಮೀಣ ಉಚಿತ ಮಾನಸಿಕ ಆರೋಗ್ಯ ಶಿಬಿರಗಳು' ಈ ಕ್ಷೇತ್ರದಲ್ಲಿ ಇವರು ಸಾಧಿಸಿದ ಒಂದು ದಾಖಲೆ. ಕಳೆದ ಹನ್ನೊಂದು ವರ್ಷಗಳಿಂದ ಇವರು  ಇತರೇ ವೈದ್ಯ ಸಮೂಹದೊಂದಿಗೆ ನಡೆಸುತ್ತಿರುವ ಕ್ಷೇಮ ಟ್ರಸ್ಟ್ (ರಿ.), 'ಒಂದು ಸಮಗ್ರ ಉಚಿತ ಆರೋಗ್ಯ ಆಪ್ತ ಸಲಹಾ ಕೇಂದ್ರ'. ಇದರ ಮೂಲಕ ಸಾರ್ವಜನಿಕರಿಗೆ ಇವರು ಹಮ್ಮಿಕೊಳ್ಳುವ ಉಚಿತ ಆರೋಗ್ಯ ಕಾರ್ಯಕ್ರಮಗಳು ಬಹಳ ಅರ್ಥಪೂರ್ಣವಾಗಿವೆ

ಕೃತಿಗಳು: ’ವೃದ್ಧಾಪ್ಯವನ್ನು ನಿಭಾಯಿಸುವುದು ಹೇಗೆ?’, ಅನುಭೂತಿ ಸಹಾನುಭೂತಿ’ (ವ್ಯಕ್ತಿತ್ವ ವಿಕಸನ ಕುರಿತ ಕೃತಿ) ’ಅಪಸ್ಮಾರ-ಅಂಜದಿರಿ’ ಅವರ ಪ್ರಮುಖ ಕೃತಿ. ಈವರೆಗೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ 13 ಕೃತಿಗಳನ್ನು ರಚಿಸಿದ್ದು, ಪ್ರತಿಷ್ಠಿತ ಪುರಸ್ಕಾರಗಳನ್ನೂ ಪಡೆದಿವೆ. ವಾರ್ತಾಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನಗಳು ಸುಮಾರು 600 ಕ್ಕೂ ಹೆಚ್ಚು. ಆಧುನಿಕ ಮನೋವಿಜ್ಞಾನದ ಹರಿಕಾರ ಸಿಗ್ಮಂಡ್  ಫ್ರಾಯ್' ಎಂಬುದು ಇವರ 14ನೇ ಕೃತಿ.  

ಕೆ.ಆರ್. ಶ್ರೀಧರ