ವೃದ್ಧಾಪ್ಯವನ್ನು ನಿಭಾಯಿಸುವುದು ಹೇಗೆ?

Author : ಕೆ.ಆರ್. ಶ್ರೀಧರ

Pages 100

₹ 55.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001
Phone: 08022161900

Synopsys

ಮನೋವೈದ್ಯ ಕೆ.ಆರ್. ಶ್ರೀಧರ ಅವರು ಬರೆದ ಮನೋವೈಜ್ಞಾನಿಕ ಕೃತಿ-ವೃದ್ಧಾಪ್ಯವನ್ನು ನಿಭಾಯಿಸುವುದು ಹೇಗೆ?. ಪ್ರತಿಯೊಬ್ಬರ ಜೀವನದಲ್ಲಿ ವೃದ್ಧಾಪ್ಯ ಬರುತ್ತದೆ. ಕೆಲವರು ವೃದ್ಧಾಪ್ಯಕ್ಕೆ ತಲುಪುವ ಮುನ್ನವೇ ಸಾಯುತ್ತಾರೆ; ಆ ಮಾತು ಬೇರೆ. ಆದರೆ, ವೃದ್ಧಾಪ್ಯ ಎನ್ನುವುದು ಬದುಕಿನ ಕೊನೆಯ ಘಟ್ಟ. ಇದಕ್ಕೆ ತಯಾರಿ ಮಾಡಿಕೊಳ್ಳಬೇಕು. ತಪ್ಪಿದರೆ, ನಮ್ಮ ಬದುಕು ಮತ್ತಷ್ಟು ನೋವನ್ನು ಅನುಭವಿಸಬೇಕಾಗುತ್ತದೆ. ಏಕೆಂದರೆ, ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಬದುಕು ನಲುಗಿರುತ್ತದೆ. ಇಂತಹ ಸ್ಥಿತಿಯಲ್ಲೇ ಸಮಸ್ಯೆಗಳೂ ಗುಂಪು ಗುಂಪಾಗಿ ಬರುತ್ತವೆ. ದೇಹ ಅಶಕ್ತವಾಗಿರುತ್ತದೆ. ಮನಸ್ಸೂ ಸಹ ಗಟ್ಟಿಯಾಗಿರುವುದಿಲ್ಲ. ಮಾತ್ರವಲ್ಲ; ಮಕ್ಕಳು ಸಹ ಇಂತಹ ಸ್ಥಿತಿಯಲ್ಲಿ ಚೆನ್ನಾಗಿ ನೋಡಿಕೊಳ್ಳದೇ ನಿರ್ಲಕ್ಷ್ಯ ಮಾಡುತ್ತಾರೆ, ಬಂಧುಗಳು ಸಹ ಕಡೆಗಣಿಸುತ್ತಾರೆ. ಹೀಗೆ, ವೃದ್ಧಾಪ್ಯವು ಬರೀ ಸಮಸ್ಯೆಗಳ ಘಟ್ಟವಾಗಿದೆ. ಆದ್ದರಿಂದ, ಇದನ್ನು ಎದುರಿಸಲು ಪೂರ್ವ ಸಿದ್ಧತೆ ಬೇಕು. ಇಂತಹ ಸಂಗತಿಗಳ ಕುರಿತು ಉತ್ತಮ ಮಾಹಿತಿ ನೀಡಲಾಗಿದೆ.

About the Author

ಕೆ.ಆರ್. ಶ್ರೀಧರ

ಡಾ. ಕೆ.ಆರ್ .  ಶ್ರೀಧರ್ ಅವರು ಮನೋವೈದ್ಯರು. ಹದಿನಾಲ್ಕು ವರ್ಷಗಳ ಸರ್ಕಾರೀ ಸೇವೆಯ ನಂತರ ಕಳೆದ ಮೂವತ್ತು ವರ್ಷಗಳಿಂದ ಶಿವಮೊಗ್ಗೆಯಲ್ಲಿ ಖಾಸಗೀ ವೈದ್ಯ ವೃತ್ತಿಯಲ್ಲಿ ನಿರತರಾಗಿದ್ದಾರೆ. 30 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ 'ಗ್ರಾಮೀಣ ಉಚಿತ ಮಾನಸಿಕ ಆರೋಗ್ಯ ಶಿಬಿರಗಳು' ಈ ಕ್ಷೇತ್ರದಲ್ಲಿ ಇವರು ಸಾಧಿಸಿದ ಒಂದು ದಾಖಲೆ. ಕಳೆದ ಹನ್ನೊಂದು ವರ್ಷಗಳಿಂದ ಇವರು  ಇತರೇ ವೈದ್ಯ ಸಮೂಹದೊಂದಿಗೆ ನಡೆಸುತ್ತಿರುವ ಕ್ಷೇಮ ಟ್ರಸ್ಟ್ (ರಿ.), 'ಒಂದು ಸಮಗ್ರ ಉಚಿತ ಆರೋಗ್ಯ ಆಪ್ತ ಸಲಹಾ ಕೇಂದ್ರ'. ಇದರ ಮೂಲಕ ಸಾರ್ವಜನಿಕರಿಗೆ ಇವರು ಹಮ್ಮಿಕೊಳ್ಳುವ ಉಚಿತ ಆರೋಗ್ಯ ಕಾರ್ಯಕ್ರಮಗಳು ಬಹಳ ಅರ್ಥಪೂರ್ಣವಾಗಿವೆ ...

READ MORE

Related Books