About the Author

ಡಾ. ಕೆ. ರವೀಂದ್ರನಾಥ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ (1990) ಪದವಿ ಪಡೆದಿರುವ ಅವರು ’ಕನ್ನಡ ಸಾಹಿತ್ಯ - ಮಠ ಮಾನ್ಯಗಳ ಸೇವೆ’ ಎಂಬ ವಿಷಯದಲ್ಲಿ ಅಧ್ಯಯನ ನಡೆಸಿ ಪಿಎಚ್. ಡಿ ಪದವಿ (1996) ಪಡೆದಿದ್ದಾರೆ. ಹಳಕನ್ನಡ -ನಡುಕನ್ನಡ ಸಾಹಿತ್ಯ , ಹಸ್ತಪ್ರತಿಶಾಸ್ತ್ರ, ಶಾಸನ ಶಾಸ್ತ್ರ, ಗ್ರಂಥ ಸಂಪಾದನೆ, ಸಂಸ್ಕ್ರತಿ ಅಧ್ಯಯನಗಳು, ವಚನ ಸಾಹಿತ್ಯ  ಅವವರ ಸಂಶೋಧನಾ ಆಸಕ್ತಿಯ ಕ್ಷೇತ್ರಗಳು.ಹಂಪಿ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರುವ ಮುನ್ನ ಅವರು ಬಳ್ಳಾರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಿದ್ದರು.

ಸಂಶೋಧನೆ: ಮಾನ್ಯ , ಕನ್ನಡ ದಾಖಲು ಸಾಹಿತ್ಯ,  ಆಗ್ನಿದಿವ್ಯ , ಕನ್ನಡ ಟೀಕಾ ಸಾಹಿತ್ಯ , ಕರ್ನಾಟಕದ ಮಠಗಳು ಮತ್ತು ಕನ್ನಡ ಸಾಹಿತ್ಯ, ಚರಿತ್ರೆ-ಚಾರಿತ್ರ್ಯ, ವಚನಕಾರರ ವಚನೇತರ ಸಾಹಿತ್ಯ, ಜೈನ ಟೀಕಾ ಸಾಹಿತ್ಯ , ಹಸ್ತಪ್ರತಿಗಳು : ಕನ್ನಡಿಗರ ಬದುಕು, ಗ್ರಂಥ ಸಂಪಾದನೆ : ಬಸವಯುಗದ ವಚನೇತರ ಸಾಹಿತ್ಯ, ಕನ್ನಡ ವಿ.ವಿ. ಹಸ್ತಪ್ರತಿ ಸೂಚಿ ಸಂಪುಟ-1, ಕನ್ನಡ ವಿ.ವಿ.ಹಸ್ತಪ್ರತಿ ಸೂಚಿ ಸಂಪುಟ-2, ಗುಂಡಬ್ರಹ್ಮಯ್ಯಗಳ ಸಾಹಿತ್ಯ, ನುಂಕೆಮಲೆ ಸಿದ್ದೇಶ್ವರ ಪುರಾಣ , ಉದ್ಧರಣ ಸಾಹಿತ್ಯ , ಅಮರೇಶ್ವರ ಪುರಾಣ, ಪರಶುರಾಮ ರಾಮಾಯಣ , ಕಿತ್ತೂರು ರುದ್ರಮ್ಮನ ಕಥೆ, ವರರಮ್ಯ ರತ್ನಾಕರ.. ಸಂಪಾದನೆ   : ವೀರಶೈವ, ದಶಕದ ಕನ್ನಡ ಸಾಹಿತ್ಯ , ಹಸ್ತಪ್ರತಿ ವ್ಯಾಸಂಗ-2, ಬಳ್ಳಾರಿ ಜಿಲ್ಲಾ ದರ್ಶನ,  ಲಕ್ಕಣ್ಣ ದಂಡೇಶನ ಶಿವತತ್ತ್ವ ಚಿಂತಾಮಣಿ ವಿವೇಚನೆ,  ಕವಳಿಗೆ, ಬಿ.ಎಂ. ಹೊರಕೇರಿ ಸಮಗ್ರ ಸಾಹಿತ್ಯ. ಅಧ್ಯಯನದ ವಿಧಿವಿಧಾನಗಳು, ಹಸ್ತಪ್ರತಿ ಅಧ್ಯಯನ , ಹಸ್ತಪ್ರತಿ ವ್ಯಾಸಂಗ-11. .ಅಭಿನಂದ/ಸಂಸ್ಮರಣ ಗ್ರಂಥ: ಸಿರಿಸಂಪದ (ಡಾ. ಬಿ.ವಿ.ಶಿರೂರ ಅಭಿನಂದನ ಗ್ರಂಥ) , , ಕಲ್ಲರಳಿ (ಅರಳಿಹಳ್ಳಿ ಶರಣಬಸವಾರ್ಯರ ಸಂಸ್ಮರಣ ಗ್ರಂಥ,  ಜೀವನ ಚರಿತ್ರೆ : ಹಡಪದ ಅಪ್ಪಣ್ಣ ,ಕುರೇಕುಪ್ಪೆ ಶ್ರೀ ಸಿದ್ದಯ್ಯ ತಾತನವರು, ಬಿ.ಎಂ. ಹೊರಕೇರಿ , ವಿಮರ್ಶೆ: ವ್ಯಕ್ತಿ – ಅಭಿವ್ಯಕ್ತಿ, 

ಪುರಸ್ಕಾರಗಳು : ಅನುಪಮ ನಿರಂಜನ ಚಿನ್ನದ ಪದಕ, ದಿ. ಪಾಂಡುರಂಗರಾವ್ ದೇಶಮುಖ ಚಿನ್ನದ ಪದಕ, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಚಿನ್ನದ ಪದಕ, ಪ್ರಶಸ್ತಿಗಳು  : ಕನ್ನಡ ಪುಸ್ತಕ ಸೊಗಡು ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  (ಕನ್ನಡ ದಾಖಲು ಸಾಹಿತ್ಯ ಸಂಶೋಧನಾ ಕೃತಿ, 2000), ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ  (ಬಸವಯುಗದ ವಚನೇತರ ಸಾಹಿತ್ಯ, ಅತ್ಯುತ್ತಮ ವೀರಶೈವ, ಕೃತಿ, 2003), ವಚನ ಸಾಹಿತ್ಯ ಪುರಸ್ಕಾರ, ಕನಕಪುರ. (ಗುಂಡಬ್ರಹ್ಮಯ್ಯಗಳ ಸಾಹಿತ್ಯ, 2001),  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  (ಉದ್ಧರಣೆ ಸಾಹಿತ್ಯ ಸಂಪಾದಿತ ಕೃತಿ, 2011)

ಜವಾಬ್ದಾರಿಗಳು:  ಕನ್ನಡ ವಿ.ವಿ. ಪುಸ್ತಕ ಮಾಹಿತಿ ಸಂಪಾದಕ,  ಡಾ. ಶಂಬಾಜೋಶಿ ಅಧ್ಯಯನ ಪೀಠದ ಸಂಚಾಲಕ,  ಜೈನ ಅಧ್ಯಯನ ಪೀಠದ ಸಂಚಾಲಕ, ಕೂಡಲಸಂಗಮ ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಮುಖ್ಯಸ್ಥ,     ಎಂ.ಎ.ಪಿಎಚ್.ಡಿ. (ಕನ್ನಡ ಸಾಹಿತ್ಯ) ಸಂಯೋಜಿತ ಪದವಿಯ ಸಂಚಾಲಕ,  ಬಸವ ಸಮಿತಿ, ಬೆಂಗಳೂರು ಪ್ರಕಟಣೆ ಹಾಗೂ ಸಂಶೋಧನೆ ವಿಭಾಗದ ಸದಸ್ಯ,  ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು, ಅಪ್ರಕಟಿತ ಸಾಹಿತ್ಯ , ದಾಖಲೆಗಳ ಪ್ರಕಟಣಾಮಾಲೆಯ ಸದಸ್ಯ, ಸಂಡೂರಿನ ಪ್ರಭುದೇವರ ಜನಕಲ್ಯಾಣ ಸಂಸ್ಥೆಯ ನಿರ್ದೇಶಕ,  ಕನ್ನಡ ವಿಶ್ವವಿದ್ಯಾಲಯದ ಶೈಕ್ಷಣಿಕ ಉಪಕುಲಸಚಿವ, ದೃಶ್ಯಕಲಾ ವಿಭಾಗದ ಮುಖ್ಯಸ್ಥರು, ಅಧ್ಯಯನಾಂಗದ ನಿರ್ದೇಶಕರಾಗಿದ್ದರು. 

 

ಕೆ. ರವೀಂದ್ರನಾಥ

(22 Jul 1962)