ಅಮರೇಶ್ವರ ಪುರಾಣ

Author : ಕೆ. ರವೀಂದ್ರನಾಥ

Pages 210

₹ 120.00




Year of Publication: 2011
Published by: ಕರ್ನಾಟಕ ಪತ್ರಾಗಾರ ಇಲಾಖೆ
Address: ಮಸ್ಕಿ

Synopsys

‘ಅಮರೇಶ್ವರ ಪುರಾಣ’ ಡಾ. ಕೆ ರವೀಂದ್ರನಾಥ ಅವರ ಸಂಪಾದನೆಯ ಕೃತಿ. ಕನ್ನಡ ಪುರಾಣಗಳಿಗೆ ಸಾಹಿತ್ಯಾರಂಭದಿಂದಲೂ ವಸಂತಕಾಲ. ಜೈನ ತೀರ್ಥಂಕರ ಪುರಾಣಗಳು, ಲಿಂಗಾಯತ ಬಸವಾದಿ ಶರಣರ ಪುರಾಣಗಳು, ವೈದಿಕ ಶಿವ, ವಿಷ್ಣು ಪುರಾಣಗಳು ರಚನೆಯಾಗಿವೆ. ಪೌರಾಣಿಕ, ಐತಿಹಾಸಿಕವಿರಲಿ, ವ್ಯಕ್ತಿಯಿರಲಿ, ಸ್ಥಳವೊರಲಿ ಧಾರ್ಮಿಕ ಚೌಕಟ್ಟಿನಲ್ಲಿ ನಿರೂಪಿಸುವುದು ಪುರಾಣಗಳ ಲಕ್ಷಣ. ಇವುಗಳ ಸಾಲಿನಲ್ಲಿ ಪರಿಗಣಿತವಾಗುವ ತಿಂಥಿಣಿಯ ಬಸವಲಿಂಗಾರ್ಯ ವಿರಚಿತ ಅಮರೇಶ್ವರ ಪುರಾಣ ಸ್ಥಳೀಯ ಧಾರ್ಮಿಕ ಮಹಾಪುರಾಷನ ಕಥನವೆನಿಸಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುಡಗುಂಟಿ ಈ ಅಮರೇಶ್ವರ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಶಿವಸ್ತುತಿ, ಶರಣಸ್ತುತಿ, ಗ್ರಂಥಪ್ರಶಂಸೆ, ಅಮರೇಶ್ವರನ ಜನನ, ಮುದಿ ಎತ್ತುಗಳು ಹೋರಿಗಳಾದ ಮಹಿಮೆ, ಸತ್ಯೇಂದ್ರ ಚೋಳನ ಕತೆ, ಭಕ್ತ ಸಿರಿಯಾಳನ ಕಥೆ, ಗೊಲ್ಲತಿಯ ಕಥೆ, ಶಿವಶರಣರ ಕಥೆ, ಮಾದರಸನಿಗೆ ಮಲ್ಲಿಕಾರ್ಜುನ ದರ್ಶನ, ಕಿನ್ನರಯ್ಯನ ಕಥೆ, ಅಮರೇಶ್ವರನ ಲಿಂಗೈಕ್ಯ, ಆದಿಮಯ್ಯ ಮಾಳಲದೇವಿಯರ ಯರಡೋಣಿ ಪ್ರವಾಸ, ಮಹೇಶ್ವರ ಹೊಂಡದ ಮಹಿಳೆ, ಸ್ವರ್ಗಾರೋಹಣ, ಶಿವಸಾಯುಜ್ಯ ಪದವಿ, ಶಿವನ ಇಪ್ಪತ್ತೈದು ಲೀಲೆಗಳು ಹಾಗೂ ಅನುಬಂಧಗಳಲ್ಲಿ- ಪದ್ಯಗಳ ಅಕಾರಾದಿ, ಛಾಯಾಚಿತ್ರಗಳು ಸೇರಿವೆ.

About the Author

ಕೆ. ರವೀಂದ್ರನಾಥ
(22 July 1962)

ಡಾ. ಕೆ. ರವೀಂದ್ರನಾಥ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ (1990) ಪದವಿ ಪಡೆದಿರುವ ಅವರು ’ಕನ್ನಡ ಸಾಹಿತ್ಯ - ಮಠ ಮಾನ್ಯಗಳ ಸೇವೆ’ ಎಂಬ ವಿಷಯದಲ್ಲಿ ಅಧ್ಯಯನ ನಡೆಸಿ ಪಿಎಚ್. ಡಿ ಪದವಿ (1996) ಪಡೆದಿದ್ದಾರೆ. ಹಳಕನ್ನಡ -ನಡುಕನ್ನಡ ಸಾಹಿತ್ಯ , ಹಸ್ತಪ್ರತಿಶಾಸ್ತ್ರ, ಶಾಸನ ಶಾಸ್ತ್ರ, ಗ್ರಂಥ ಸಂಪಾದನೆ, ಸಂಸ್ಕ್ರತಿ ಅಧ್ಯಯನಗಳು, ವಚನ ಸಾಹಿತ್ಯ  ಅವವರ ಸಂಶೋಧನಾ ಆಸಕ್ತಿಯ ಕ್ಷೇತ್ರಗಳು.ಹಂಪಿ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರುವ ಮುನ್ನ ಅವರು ಬಳ್ಳಾರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಿದ್ದರು. ಸಂಶೋಧನೆ: ಮಾನ್ಯ , ಕನ್ನಡ ದಾಖಲು ಸಾಹಿತ್ಯ,  ಆಗ್ನಿದಿವ್ಯ ...

READ MORE

Related Books