About the Author

ಕಾವ್ಯಾತ್ಮಕ ನೇಯ್ಕೆಯಲ್ಲಿ ಕತೆ ಬರೆಯುವ ಕಸ್ತೂರಿ ಬಾಯರಿ ಭರವಸೆಯ ಕತೆಗಾರ್ತಿ. ಅವರ ಕತೆಗಳು ಪ್ರಜಾವಾಣಿ, ಸಂಕ್ರಮಣ ಬಹುಮಾನ ಪಡೆದುಕೊಂಡಿವೆ. ದಟ್ಟ ವಿಷಾದ ಮತ್ತು ಮಡುಗಟ್ಟಿದ ನೋವಿನ ಜಿನುಗುವಿಕೆಯ ಭಾವದಲ್ಲಿ ಕತೆ ಹೆಣೆಯುವ ಅವರು ಸೂಕ್ಷ್ಮ ಮನಸಿನ ಕವಯಿತ್ರಿಯೂ ಆಗಿದ್ದಾರೆ. ಅನುವಾದ ಕಾರ್ಯದಲ್ಲೂ ತುಂಬ ಕೆಲಸ ಮಾಡಿದ್ದಾರೆ. ಕರಾವಳಿಯ ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ಜನಿಸಿದ ಅವರು ಉತ್ತರ ಕರ್ನಾಟಕದ ಬಾದಾಮಿಯಲ್ಲಿ ಬೆಳೆದು, ಅಲ್ಲಿಯೇ ವಾಸಿಸುತ್ತಿದ್ದಾರೆ. ಕಾನೂನು ಪದವೀಧರರಾಗಿರುವ ಅವರು ಒಂದು ಶಾಲೆಯ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 

ಥಾ ಸಂಕಲನ, ಕವನ ಸಂಕಲನ, ಪ್ರಬಂಧ ಸಂಕಲನ ಹೀಗೆ ಅವರ ಹತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಗೊಂಡಿವೆ.  ಥೈರಾಯ್ಡ್‌ ಮತ್ತು ಪಾಂಚಾಲಿ, ಹಲವು ಮಕ್ಕಳ ತಾಯಿ ಬೇರು, ಒಂದೇ ಕಾಂಡದ ಕುರ್ಚಿ, ದಂಡ, ಕಲ್ಲಾದಳು ಅಹಲ್ಯ, ಎರಡು ರೆಕ್ಕೆಗಳು, ಗೆರೆಗಳು (ಕಥಾ ಸಂಕಲನಗಳು), ಕಾತ್ಯಾಯಿನಿ, ನದಿಯಾದವಳು, ಬೋರಂಗಿ, ಗಂಧವತಿ, ಅಕ್ಕ, ನೀಲಿ ಆಕಾಶಕ್ಕೆ ರೆಕ್ಕೆಗಳ ಬಿಚ್ಚಿ, ಅಲ್ಲಮನೆಡೆಗೆ (ಕವಿತಾ ಕಲನಗಳು), ಇನ್‌ಕ್ರೆಡಿಬಲ್ ವಾಯ್ಸ್ (ಇಂಗ್ಲಿಷ್ ಕವಿತೆಗಳು), ಗಾಳಿಪಟ, ಸಂಧ್ಯಾರಾಗ (ಪತ್ರಗಳು), ಇಬ್ರಾಹಿಂನ ಪ್ರೇಮಪತ್ರ (ಅನುವಾದ), ಗಿರಿಗಿಟ್ಟೆ, ಖಡಕ್ ರೊಟ್ಟಿ (ಅಂಕಣ ಬರಹಗಳು) ಪ್ರಕಟಿತ ಕೃತಿಗಳು

 

ಕಸ್ತೂರಿ ಬಾಯಿರಿ

(27 Apr 1956)