ಗಿರಿಗಿಟ್ಟೆ

Author : ಕಸ್ತೂರಿ ಬಾಯಿರಿ

Pages 120

₹ 80.00
Published by: ಕಾಲ ಪ್ರಕಾಶನ
Address: ನಂ. 39/3, ಕೆಳಮಹಡಿ, 9ನೇ ಮೇನ್, ಶಿವನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ರಾಜಾಜಿನಗರ, ಬೆಂಗಳೂರು-560018

Synopsys

ಕಸ್ತೂರಿ ಬಾಯಿರಿ ಅವರ ’ಗಿರಿಗಿಟ್ಟೆ’ಯು ಪುಟ್ಟಪುಟ್ಟ ನುಡಿಚಿತ್ರಗಳ ಸಂಕಲನ. ಪ್ರತಿಯೊಂದು ಬರೆಹವೂ ಎರಡು-ಎರಡುವರೆ ಪುಟದಷ್ಟಿದೆ. ಸಂಕ್ಷಿಪ್ತತೆಯ ಕಾರಣದಿಂದಾಗಿ ಗಮನ ಸೆಳೆಯುತ್ತವೆ. ಕಥೆ ಹಾಗೂ ಲಲಿತ ಪ್ರಬಂಧಗಳೆರಡರ ಜಾಯಮಾನ ಹೊಂದಿವೆ. ನುಡಿಚಿತ್ರಗಳ ವಿಶಿಷ್ಟ ಬರವಣಿಗೆಯು ಸ್ವಾನುಭವದ ಹೂರಣ ಹೊಂದಿರುವುದರಿಂದ ಆಪ್ತ ಓದಿಗೆ ಕಾರಣವಾಗುತ್ತವೆ.

About the Author

ಕಸ್ತೂರಿ ಬಾಯಿರಿ
(27 April 1956)

ಕಾವ್ಯಾತ್ಮಕ ನೇಯ್ಕೆಯಲ್ಲಿ ಕತೆ ಬರೆಯುವ ಕಸ್ತೂರಿ ಬಾಯರಿ ಭರವಸೆಯ ಕತೆಗಾರ್ತಿ. ಅವರ ಕತೆಗಳು ಪ್ರಜಾವಾಣಿ, ಸಂಕ್ರಮಣ ಬಹುಮಾನ ಪಡೆದುಕೊಂಡಿವೆ. ದಟ್ಟ ವಿಷಾದ ಮತ್ತು ಮಡುಗಟ್ಟಿದ ನೋವಿನ ಜಿನುಗುವಿಕೆಯ ಭಾವದಲ್ಲಿ ಕತೆ ಹೆಣೆಯುವ ಅವರು ಸೂಕ್ಷ್ಮ ಮನಸಿನ ಕವಯಿತ್ರಿಯೂ ಆಗಿದ್ದಾರೆ. ಅನುವಾದ ಕಾರ್ಯದಲ್ಲೂ ತುಂಬ ಕೆಲಸ ಮಾಡಿದ್ದಾರೆ. ಕರಾವಳಿಯ ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ಜನಿಸಿದ ಅವರು ಉತ್ತರ ಕರ್ನಾಟಕದ ಬಾದಾಮಿಯಲ್ಲಿ ಬೆಳೆದು, ಅಲ್ಲಿಯೇ ವಾಸಿಸುತ್ತಿದ್ದಾರೆ. ಕಾನೂನು ಪದವೀಧರರಾಗಿರುವ ಅವರು ಒಂದು ಶಾಲೆಯ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.  ಥಾ ಸಂಕಲನ, ಕವನ ಸಂಕಲನ, ಪ್ರಬಂಧ ಸಂಕಲನ ಹೀಗೆ ಅವರ ಹತ್ತಕ್ಕೂ ಹೆಚ್ಚು ಪುಸ್ತಕಗಳು ...

READ MORE

Related Books