About the Author

ಕಿರಣ್ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.‌ ಹೊನ್ನಾವರದಲ್ಲಿ ಬಿ.ಎಸ್.ಸಿ ಪದವಿ ಪಡೆದ ನಂತರ ಟೆಲಿಕಾಂ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಹುಬ್ಬಳ್ಳಿ, ತಿರುವನಂತಪುರಂ, ಶಿರಸಿ, ಮಂಗಳೂರು, ಕುಮಟಾ, ಕಾರವಾರ, ಎರ್ನಾಕುಲಂ,ಕಣ್ಣಾನೂರಿನಲ್ಲಿ‌ ಸೇವೆ ಸಲ್ಲಿಸಿ ಸದ್ಯ ಸ್ವಯಂ ನಿವೃತ್ತಿ ಪಡೆದಿದ್ದಾರೆ.

ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಕಿರಣ್ ಭಟ್ ಮಂಗಳೂರು ಸಮುದಾಯ,ಆಯನ ತಂಡಗಳ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಶಿರಸಿಯಲ್ಲಿ 'ರಂಗಸಂಗ' ತಂಡದ ಸ್ಥಾಪಿಸಿ, ನಾಟಕಗಳನ್ನು ನಿರ್ದೇಶಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ಹಾಗೂ ಮಕ್ಕಳ ರಂಗಶಿಬಿರಗಳ ನಿರ್ದೇಶಿಸಿದ್ದಾರೆ. ರಂಗಭೂಮಿ ಸೇವೆಗಾಗಿ 1999 ರಲ್ಲಿ ' ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ, ' ಕೊಗ್ರೆ ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿವೆ. ಕರ್ನಾಟಕ ನಾಟಕ ಅಕಾಡಮಿಯ ಸದಸ್ಯತ್ವ ಹೊಂದಿರುವ ಕಿರಣ್ ಸದ್ಯ ' ಚಿಂತನ ರಂಗ ಅಧ್ಯಯನ ಕೇಂದ್ರ' ದ ಅಧ್ಯಕ್ಷರಾಗಿದ್ದಾರೆ. ರಂಗಭೂಮಿಯ ಕುರಿತ ನೂರಾರು ಲೇಖನಗಳು ಪ್ರಕಟವಾಗಿವೆ. 'ಉತ್ತರ ಕನ್ನಡ ಜಿಲ್ಲಾ ರಂಗದರ್ಶನ' ಪತ್ರಿಕೆಯ ಸಂಪಾದಕರಾಗಿದ್ದು, ' ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ' ಎಂಬ ಕಿರುಪುಸ್ತಕ, ' ಮಕ್ಕಳ ರಂಗಭೂಮಿ' ಎಂಬ ಸಂಪಾದಿತ ಕೃತಿಯ ಜೊತೆಗೆ ಇತ್ತೀಚೆಗಷ್ಟೇ ಅವರ ' ರಂಗ ಕೈರಳಿ' ಎಂಬ ಪ್ರವಾಸಕಥನ ಪ್ರಕಟವಾಗಿದೆ.

ಕಿರಣ್ ಭಟ್