ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ

Author : ಕಿರಣ್ ಭಟ್

Pages 40

₹ 3.00




Year of Publication: 1995
Published by: ಚಿಂತನ
Address: ವಿಳಾಸ: c/o ವಿಠ್ಠಲ ಭಂಡಾರಿ, ಎಂಜಿಸಿ ಕಾಲೇಜು, ಸಿದ್ದಾಪುರ, ಜಿಲ್ಲೆ: ಉತ್ತರ ಕನ್ನಡ
Phone: 9448729359

Synopsys

‘ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ’ ರಂಗಕರ್ಮಿ ಕಿರಣ್ ಭಟ್ ಅವರ ಕೃತಿ. ಈ ಪುಸ್ತಕ ಉತ್ತರ ಕನ್ನಡ ಜಿಲ್ಲೆಯ ಆಧುನಿಕ ರಂಗಭೂಮಿಯ ಕುರಿತ ವಿವರಗಳನ್ನು ಹೊಂದಿದೆ. ಪುಸ್ತಕದಲ್ಲಿ ಪರ್ಯಾಯ ರಂಗಭೂಮಿಯ ಹುಟ್ಟು ಮತ್ತು ತದನಂತರದ ರಂಗಚಟುವಟುಕೆಗಳ ಸ್ಥೂಲ ಪರಿಚಯವಿದೆ. ರಂಗಕರ್ಮಿ ಕಿರಣ್ ಭಟ್ ಅವರು ಉತ್ತರ ಕನ್ನಡ ಜಿಲ್ಲೆಯ ಆಧುನಿಕ ರಂಗಭೂಮಿಯ ಕುರಿತು ಅಧ್ಯಯನ ನಡೆಸಿ ಬರೆದಿರುವ ಮಹತ್ವದ ಕೃತಿಯಿದು.

 

About the Author

ಕಿರಣ್ ಭಟ್

ಕಿರಣ್ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.‌ ಹೊನ್ನಾವರದಲ್ಲಿ ಬಿ.ಎಸ್.ಸಿ ಪದವಿ ಪಡೆದ ನಂತರ ಟೆಲಿಕಾಂ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಹುಬ್ಬಳ್ಳಿ, ತಿರುವನಂತಪುರಂ, ಶಿರಸಿ, ಮಂಗಳೂರು, ಕುಮಟಾ, ಕಾರವಾರ, ಎರ್ನಾಕುಲಂ,ಕಣ್ಣಾನೂರಿನಲ್ಲಿ‌ ಸೇವೆ ಸಲ್ಲಿಸಿ ಸದ್ಯ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಕಿರಣ್ ಭಟ್ ಮಂಗಳೂರು ಸಮುದಾಯ,ಆಯನ ತಂಡಗಳ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಶಿರಸಿಯಲ್ಲಿ 'ರಂಗಸಂಗ' ತಂಡದ ಸ್ಥಾಪಿಸಿ, ನಾಟಕಗಳನ್ನು ನಿರ್ದೇಶಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ಹಾಗೂ ಮಕ್ಕಳ ರಂಗಶಿಬಿರಗಳ ನಿರ್ದೇಶಿಸಿದ್ದಾರೆ. ರಂಗಭೂಮಿ ಸೇವೆಗಾಗಿ 1999 ರಲ್ಲಿ ' ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ, ' ...

READ MORE

Related Books