About the Author

ಕುಮಾರ್ ಭದ್ರಾವತಿ  ತಂದೆ  ದಿ. ನಿಂಗೇಗೌಡ ತಾಯಿ ದಿ. ಹೊಂಬಮ್ಮ. ಬಿ.ಎ, ಬಿ.ಲಿಬ್ ಸೈನ್ಸ್, ಎಂ.ಲಿಬ್ ಸೈನ್ಸ್ ವಿದ್ಯಾರ್ಹತೆ  ಪಡೆದು ಕರ್ನಾಟಕ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.  ಕರ್ನಾಟಕ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 40 ಕ್ಕೂ ಹೆಚ್ಚು ಕಥೆಗಳು ಪ್ರಕಟವಾಗಿವೆ. ರಂಗಭೂಮಿ ,ಸಂಪಾದಕೀಯ ಮಂಡಳಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.

 ಕಾದಂಬರಿಗಳು 
ಮೇಡಂ ಹೇಳಿದ ಕಥೆ (ಮಕ್ಕಳ ಕಾದಂಬರಿ) 1989, (2015 ರಲ್ಲಿ ಚಲನಚಿತ್ರವಾದ ಕಾದಂಬರಿ), ಮಿಸ್ಟರ್ ಎಕ್ಸ್ (ಪತ್ತೆದಾರಿ ಕಾದಂಬರಿ) 1990 , ಬಣ್ಣದ ಚಿಟ್ಟೆ (ಮಕ್ಕಳ ಸಾಹಿತ್ಯ) 1991 , ನಮ್ಮ ಚಂದಿರ (ಮಕ್ಕಳ ಸಾಹಿತ್ಯ) 1994 , ಒಲವಿನ ಋಣ (ಸಾಮಾಜಿಕ ಕಾದಂಬರಿ) 1997, ಅಡ್ಡಹಾದಿ (ಸಾಮಾಜಿಕ ಕಾದಂಬರಿ) 2000 , 2001 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಹೊರ ತಂದಿರುವ 'ಶತಮಾನದ ಸಾಹಿತ್ಯ' ಎಂಬ ಬೃಹತ್‌ ಹೊತ್ತಿಗೆಯಲ್ಲಿ 'ಪ್ರಾಮಾಣಿಕ ರೈತ' ಎಂಬ ಕಥೆ ಪ್ರಕಟ. ಜ್ಞಾನ ಜಲನ (ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮಾಹಿತಿಗಳು) ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಕಟಣೆ 2015 ,ಸರ್ವೇಜನಾಃ ಸುಖಿನೋಭವಂತು (ಸಾಮಾಜಿಕ ಕಾದಂಬರಿ) 2022,ಒಲವಿನ ಋಣ, ಅಡ್ಡಹಾದಿ

ಪ್ರಶಸ್ತಿ-ಸನ್ಮಾನ 

ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಗ್ರಂಥಾಲಯ ಸೇವಾ ಪುರಸ್ಕಾರ,  “ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ” , ಭದ್ರಾವತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕ ಪ್ರಕಟಣೆ ಹಾಗೂ ಸಾಹಿತ್ಯ ಸೇವೆಗಾಗಿ ಸನ್ಮಾನಿಸಿದೆ. ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಪುಸ್ತಕ ರಚನೆಗೆ ಬಹುಮಾನ ನೀಡಿವೆ.

 

ಕುಮಾರ್ ಭದ್ರಾವತಿ

(22 Aug 1969)