About the Author

ಲೇಖಕ ಎಂ.ಸಿ. ಶ್ರೀಧರಮೂರ್ತಿ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮದ್ದೂರಿನವರು. ತಂದೆ-ಎಂ.ಎಲ್. ಚಿನ್ನಸ್ವಾಮಿ, ತಾಯಿ- ಸರೋಜಮ್ಮ. ಹೊಳಲು ಶ್ರೀಧರ್ ಎಂಬುದು ಇವರ ಕಾವ್ಯನಾಮ. ಎಂ.ಎ, ಬಿ.ಎಸ್ಸಿ, ಬಿಎಡ್, ಪದವೀಧರರು. 24 ವರ್ಷ ಕಾಲ ಪ್ರೌಢಶಾಲೆಗಳಲ್ಲಿ ವಿಜ್ಞಾನ-ಗಣಿತ ಶಿಕ್ಷಕರಾಗಿ, ಬಸರಾಳಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 13 ವರ್ಷ ಕಾಲ ಕನ್ನಡ ಉಪನ್ಯಾಸಕರಾಗಿ ಒಟ್ಟು 37 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 

ಜಿಲ್ಲಾ ಮತ್ತು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪತ್ರ ಲೇಖನಗಳನ್ನು ಬರೆದಿದ್ದಾರೆ.  ಪ್ರಸ್ತುತ ಸ್ಥಳೀಯ ಮಂಡ್ಯ ಪ್ರೆಸ್ ದಿನಪತ್ರಿಕೆಯ ಮುಖ್ಯ ವರದಿಗಾರರಾಗಿದ್ದಾರೆ. 

ಕೃತಿಗಳು: ವಿಚಾರ ಲಹರಿ (ಲೇಖನಗಳ ಸಂಗ್ರಹ), ಪತ್ರ ಪ್ರಪಂಚ ( ವಿವಿಧ ಪತ್ರಿಕೆಗಳ ಓದುಗರ ವಿಭಾಗಕ್ಕೆ ಬರೆದಿದ್ದ ಪತ್ರಗಳ ಸಂಕಲನ),  ಕಳೆದ ಒಂಬತ್ತು ವರ್ಷಗಳಿಂದ ನಾಡಿನ ಪ್ರಸಿದ್ಧ ಸಾಪ್ತಾಹಿಕ ತರಂಗದಲ್ಲಿ ಶಬ್ದಶಿಲ್ಪ ಪದಬಂಧ ಅಂಕಣವನ್ನು ರಚಿಸಿಕೊಂಡು ಬರುತ್ತಿದ್ದು ಅವುಗಳ ಸಂಕಲನವಾದ ‘ಪದ ಸಂಚಯ’, ’ಪದ ತರಂಗ’, ’ಪದ ಸಂಗಮ’ ಎಂಬ ಮೂರು ಕೃತಿಗಳು,  

ಪ್ರಶಸ್ತಿ-ಪುರಸ್ಕಾರಗಳು:  ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ‘ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ’ ಹಾಗೂ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿ (2016) ಹಾಗೂ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ (2001 ರಲ್ಲಿ) ‘ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’, ಮಂಡ್ಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ. 

 

ಎಂ.ಸಿ.ಶ್ರೀಧರಮೂರ್ತಿ (ಹೊಳಲು ಶ್ರೀಧರ್)