About the Author

ಎಂ. ಎಂ. ಪಡಶೆಟ್ಟಿ ಅವರು ಮಲ್ಲಪ್ಪ ಪಡಶೆಟ್ಟಿ ಮತ್ತು ಅಯ್ಯಮ್ಮ ಮಲ್ಲಪ್ಪ ಪಡಶೆಟ್ಟಿ ಅವರ ಮಗನಾಗಿ 01-06-1949 ರಂದು ಅಸ್ಕಿ ಗ್ರಾಮದ ಸಿಂದಗಿ ತಾಲ್ಲೂಕಿನ ವಿಜಯಪುರ ಜಿಲ್ಲೆಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಅಸ್ಕಿಯಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಕಲಕೇರಿಯಲ್ಲಿ, ಕಾಲೇಜು ಶಿಕ್ಷಣವನ್ನು ವಿಜಯಪುರದಲ್ಲಿ ಪಡೆದರು.

1974 ರಲ್ಲಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಜಿ.ಪಿ ಪೋರವಾಲ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ ಅಲ್ಲಿ ಕನ್ನಡ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರು.  1991 ರಲ್ಲಿ ತಿಂಥಿಣಿ ಮೋನಪ್ಪಯ್ಯ – ಒಂದು ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಕೊಂಡಗುಳಿ ಕೇಶಿರಾಜ, ತಿಂಥಿಣಿ ಮೋನಪ್ಪಯ್ಯ – ಒಂದು ಅಧ್ಯಯನ, ಹೇಳಕಿ ಮಾಡ್ಯಾರ ಒಡೆಯರು, ದಾಂಗುಡಿ, ಘನಮಠ ಶಿವಯೋಗಿಗಳು, ಸಿಂದಗಿ ನೀಲಗಂಗಾ. ಇವರ ಪ್ರಕಟಿತ ಕೃತಿಗಳು.

ಮೌನ ಮಾತಾಡಿದಾಗ, ಫ.ಗು ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ -೧೦ ಚರಿತ್ರೆ ಸಾಹಿತ್ಯ, ಕೊರಡ ಕೊನರು, ಗ್ರಾಮ ಚೇತನ, ಅತ್ರೇಯ, ಸ್ವರಗುರು, ವಚನ ವಿಜಯ, ವಿಶ್ವ ಚೇತನ ಮುಂತಾದವು ಇವರ ಸಂಪಾದಿತ ಕೃತಿಗಳಾಗಿವೆ.

ಚೌಡಮ್ಮ – ಒಂದು  ಗ್ರಾಮ ದೇವತೆ, ಶ್ರೀ ಸಾಮಾನ್ಯರ ಶರಣ ತಿಂಥಿಣಿ ಮೋನಪ್ಪಯ್ಯ, ಮೈಲಾರಲಿಂಗ, ಕುರುಬ ಹೇಳಿಕೆಗಳು, ವೀರಶೈವಾಮೃತ ಪುರಾಣ – ತಾತ್ವಿಕ ವಿವೇಚನೆ ಮುಂತಾದ ಅನೇಕ ಲೇಖನ ಬರಹಗಳನ್ನು ಪ್ರಕಟಿಸಿದ್ಧಾರೆ. ಮತ್ತು ಅನೇಕ ವಿಚಾರ ಸಂಕಿರಣಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ, ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಇವರು ಭಾಗವಹಿಸಿದ್ದಾರೆ.  ಇವರ ಅನೇಕ ಭಾಷಣಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ.

ಎಂ. ಎಂ. ಪಡಶೆಟ್ಟಿ