About the Author

ಬರಹಗಾರ ಎಂ.ಎಂ.ಶಿವಪ್ರಕಾಶ ಅವರು ಜನಿಸಿದ್ದು 1968 ಜುಲೈ 1ರಂದು. ಹುಟ್ಟೂರು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲುಕಿನ ಹಿರೇಹಡಗಲಿ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಾಹಿತ್ಯ ಅಧ್ಯಯನ ಬರವಣಿಗೆ ಹಾಗೂ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ಚಂದ್ರ ಚೇತನ(ಸಂ)1992, ಕುಟುಂಬ 1993(ನವಸಾಕ್ಷರ ಮಾಲೆ), ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ(ಬದುಕು ಬರಹ)1999, ಮುತ್ಸದ್ದಿ(ಎಂ.ಪಿ.ಪ್ರಕಾಶ್ ಕುರಿತ ಪತ್ರಿಕಾ ಲೇಖನಗಳ ಸಂಗ್ರಹ)2004. ರಂಗಭಾರತಿ , ಎಂಪಿ ಪ್ರಕಾಶ್ ಸಮಗ್ರ ಲೇಖನಗಳು ಸಂಗ್ರಹ 2011, ಮುತ್ಸದ್ದಿ ಸಂಪುಟ 2 ಎಂಪಿ ಪ್ರಕಾಶ್ ಕುರಿತ ಲೇಖನಗಳು 2012, ಸಂಕಥನ 2014, ಎಂಪಿ ಪ್ರಕಾಶ್ ಜೀವನ ಚಿತ್ರ (2014), ನಾಡೋಜ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ (2010), ನಾಡೋಜ ಮುದೇನೂರು ಸಂಗಣ್ಣ (2010), ಪರಂಪರೆ ಲೇಖನಗಳ ಸಂಗ್ರಹ 2005, ಜಾನಪದ ತಜ್ಞ ಮುದೇನೂರು ಸಂಗಣ್ಣ 2014, ಯುವ ರಾಜಕಾರಣಿ ಎಂಪಿ ರವೀಂದ್ರ 2019, ಅವ್ವ ಮತ್ತು ಇತರ ಲೇಖನಗಳು ಮುಂತಾದವು. ಇವರಿಗೆ ಗೊರೂರು ಸಾಹಿತ್ಯ ಪರಿಷತ್ತಿನ ವರ್ಷದ ಲೇಖಕ ಪ್ರಶಸ್ತಿ, ಗುಲಬರ್ಗ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಅನಾಥ ಸೇವಾಶ್ರಮ ಮಲ್ಲಾಡಿಹಳ್ಳಿ ದಾವಣಗೆರೆ ಶಾಖೆ ಗೌರವ ಪುರಸ್ಕಾರ 2007 ಸಮಾಜಸೇವಾ ಭಾರ್ಗವ ಪ್ರಶಸ್ತಿ (2011), ಆದಿಗುರು ಶ್ರೀ ಶಂಕರ ಅನುಗ್ರಹ ಪುರಸ್ಕಾರ (2019) ಮುಂತಾದ ಪ್ರಶಸ್ತಿಗಳು ಸಂದಿವೆ. 

ಎಂ.ಎಂ. ಶಿವಪ್ರಕಾಶ