About the Author

ಲೇಖಕ ಎಂ.ಎನ್. ಕೇಶವರಾವ್  ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಸಂಸ್ಥೆಗಳಲ್ಲಿ ನಲವತ್ತು ವರ್ಷ ಕಾಲ ಸಂಶೋಧಕ ವಿಜ್ಞಾನಿಯಾಗಿದ್ದು ನಿವೃತ್ತರಾಗಿದ್ದಾರೆ. 1966ರಲ್ಲಿ ಕಂಪ್ಯೂಟರ್ ತಾಂತ್ರಿಕತೆಯನ್ನು ಬೋಧಿಸಿ, ಭಾರತದ ಮೊಟ್ಟಮೊದಲ ಕಂಪ್ಯೂಟರ್ ಅಧ್ಯಯನದ ಪುಸ್ತಕವನ್ನು ಬರೆದಿದ್ದಾರೆ. ದೂರತೀರದ ಮತ್ತು ಬಾಹ್ಯಾಕಾಶದ ಸಂವರ್ಧನ ಕಾರ್ಯಗಳಲ್ಲಿ ತಾಂತ್ರಿಕ ನೆರವು ನೀಡಿದ್ದಾರೆ, ಇಂಜಿನಿಯರಿಂಗ್, ಗಣಿತ ಮತ್ತು ಕಂಪ್ಯೂಟರ್‌ಗಳಿಗೆ ಸಂಬಂಧಿತ ಅನೇಕ ಶೋಧನಪತ್ರಗಳನ್ನು ಬರೆದು ಪ್ರಕಟಿಸಿದ್ದಾರೆ. ಅಂತರರಾಷ್ಟ್ರೀಯ ಸಂಶೋಧನ ಪತ್ರಿಕೆಯೊಂದರ ಸ್ಥಾಪಕ - ಸಂಪಾದಕರಾಗಿ 20 ವರ್ಷ ಕಾಲ ನಡೆಸಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್ ಕಥನ, ವಿಚಾರ, ವಿಜ್ಞಾನ ಸಾಹಿತ್ಯಗಳಲ್ಲಿ ಹಾಗೂ ಹಿಂದಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ವಿಶೇಷ ಅಭಿರುಚಿ ಬೆಳೆಸಿಕೊಂಡಿದ್ದಾರೆ, 'ಹೊಸತು' ಪತ್ರಿಕೆಯಲ್ಲಿನ ಇವರ ಅನೇಕ ವಿಚಾರಾತ್ಮಕ ಲೇಖನಗಳು ಬೇರೆ ಪತ್ರಿಕೆಗಳ ಗಮನ ಸೆಳೆದಿವೆ. ವೈಚಾರಿಕತೆ, ವೈಜ್ಞಾನಿಕತೆ, ಮಾನವತಾವಾದ ಮತ್ತು ನಿರೀಶ್ವರವಾದಗಳ ನಿಲುವನ್ನು ದೃಢವಾಗಿ ತಳೆದಿರುವ ಇವರು, ಅಧ್ಯಯನ, ವಿಮರ್ಶನ ಮತ್ತು ಲೇಖನಗಳ ಬರಹ ಮುಂದುವರಿಸಿದ್ದಾರೆ. ಇವರ 'ಬುದ್ಧ ಹರಿಶ್ಚಂದ್ರ' ನಾಟಕ, ಪ್ರಶಸ್ತಿ ಪಡೆದಿದೆ; ಈ ನಾಟಕವು ಅನ್ಯ ಭಾಷೆಗಳಿಗೆ ಅನುವಾದಗೊಂಡಿದೆ. 

ಎಂ.ಎನ್. ಕೇಶವರಾವ್‌