ಜೀವೋಪನಿಷತ್

Author : ಎಂ.ಎನ್. ಕೇಶವರಾವ್‌

Pages 72

₹ 45.00




Year of Publication: 2009
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001
Phone: 0802216 1900

Synopsys

ಎಂ. ಎನ್. ಕೇಶವ ರಾವ್ ಅವರ ಕವನ ಸಂಕಲನ ’ಜೀವೋಪನಿಷತ್ ’.ಆಕಾಶ ಕರೆಯುತ್ತಿದೆ, ಬಾನಾಡಿಯೆ, ದೇವರೇ ಪ್ರಶ್ನೆ,ಪವಿತ್ರ ಹಿಂಸೆ, ಸ್ವಧರ್ಮ ನಿಧನದ ಶ್ರೇಯ ಸೇರಿದಂತೆ ಒಟ್ಟು 27  ಕವನಗಳು ಸಂಕಲನಗೊಂಡಿವೆ.

ಹಿರಿಯ ಕವಿ ಜಿ.ಎಸ್. ಶಿವರುದ್ರಪ್ಪ ಅವರು ಸಂಕಲನಕ್ಕೆ ಮುನ್ನುಡಿ ಬರೆದು ‘ಇಲ್ಲಿಯ ಕವಿತೆಗಳಲ್ಲಿ ಹೆಚ್ಚು ವೈವಿಧ್ಯವೂ, ಕಲಾತ್ಮಕತೆ ಮತ್ತು ಪರಿಣತಿಯೂ ಗೋಚರಿಸುತ್ತವೆ. ವಿಜ್ಞಾನದಂಥ ವಸ್ತು ಹೀಗೆ ಕನ್ನಡದಲ್ಲಿ ಕಾವ್ಯರೂಪವನ್ನು ತಾಳಿದ್ದು ಬಹುಶಃ ಇದೇ ಮೊದಲೆಂದು ತೋರುತ್ತದೆ. ನಮಗೆ ಪರಿಚಿತವಾದ 'ಕಾವ್ಯ'ದಿಂದ ಭಿನ್ನವಾಗಿ ನಿಲ್ಲುವ ಕೇಶವ ರಾವ್ ಅವರ ಬರಹಗಳು ಸುಗಮವಾಗಿ ಓದಿಸಿಕೊಂಡು ಹೋಗುವುದಿಲ್ಲವೆಂಬಂತೆ ತೋರಿದರೂ ಕೊಂಚ ತಾಳ್ಮೆಯಿಂದ ಹಾಗೂ ಸಹೃದಯತೆಯಿಂದ ಇವುಗಳನ್ನು ಪ್ರವೇಶಿಸಿದರೆ, ಓದುಗರು ಪಡೆಯುವ ಕಾವ್ಯಾನುಭವದ ಸ್ವರೂಪವೇ ಬೇರೆ ಅನ್ನಿಸದೆ ಇರದು.’ ಎಂದು ಪ್ರಶಂಸಿಸಿದ್ದಾರೆ. 

About the Author

ಎಂ.ಎನ್. ಕೇಶವರಾವ್‌

ಲೇಖಕ ಎಂ.ಎನ್. ಕೇಶವರಾವ್  ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಸಂಸ್ಥೆಗಳಲ್ಲಿ ನಲವತ್ತು ವರ್ಷ ಕಾಲ ಸಂಶೋಧಕ ವಿಜ್ಞಾನಿಯಾಗಿದ್ದು ನಿವೃತ್ತರಾಗಿದ್ದಾರೆ. 1966ರಲ್ಲಿ ಕಂಪ್ಯೂಟರ್ ತಾಂತ್ರಿಕತೆಯನ್ನು ಬೋಧಿಸಿ, ಭಾರತದ ಮೊಟ್ಟಮೊದಲ ಕಂಪ್ಯೂಟರ್ ಅಧ್ಯಯನದ ಪುಸ್ತಕವನ್ನು ಬರೆದಿದ್ದಾರೆ. ದೂರತೀರದ ಮತ್ತು ಬಾಹ್ಯಾಕಾಶದ ಸಂವರ್ಧನ ಕಾರ್ಯಗಳಲ್ಲಿ ತಾಂತ್ರಿಕ ನೆರವು ನೀಡಿದ್ದಾರೆ, ಇಂಜಿನಿಯರಿಂಗ್, ಗಣಿತ ಮತ್ತು ಕಂಪ್ಯೂಟರ್‌ಗಳಿಗೆ ಸಂಬಂಧಿತ ಅನೇಕ ಶೋಧನಪತ್ರಗಳನ್ನು ಬರೆದು ಪ್ರಕಟಿಸಿದ್ದಾರೆ. ಅಂತರರಾಷ್ಟ್ರೀಯ ಸಂಶೋಧನ ಪತ್ರಿಕೆಯೊಂದರ ಸ್ಥಾಪಕ - ಸಂಪಾದಕರಾಗಿ 20 ವರ್ಷ ಕಾಲ ನಡೆಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಕಥನ, ವಿಚಾರ, ...

READ MORE

Related Books