About the Author

ಎಂ. ನಂಜುಂಡಸ್ವಾಮಿಯವರು ದಿನಾಂಕ 28 ಮಾರ್ಚ್ 1970 ರಂದು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಜನಿಸಿದರು. ತಾಯಿ ಸರೋಜಮ್ಮ , ತಂದೆ ಮಹಾದೇವಯ್ಯ. ಮಳವಳ್ಳಿಯಲ್ಲಿ 1ನೇ ತರಗತಿ ನಂತರ  ಅವಿಭಜಿತ ಧಾರವಾಡ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣ, .ಶಿರಹಟ್ಟಿಯಲ್ಲಿ 9ನೇ ತರಗತಿವರೆಗೆ 1985ರಲ್ಲಿ ಮುಂಡರಗಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದಿದರು. ಧಾರವಾಡದಲ್ಲಿ 1988 ರಲ್ಲಿ ಪಿಯೂಸಿ ಪಾಸಾದರು.

ಕರ್ನಾಟಕ ರೀಜನಲ್ ಇಂಜನಿಯರಿಂಗ್ ಕಾಲೇಜ್, ಸೂರತಕಲ್ ಗೆ ಸೇರಿದರು. ಅಲ್ಲಿ 1993ರಲ್ಲಿ ಗಣಿ ತಂತ್ರಜ್ಞಾನದಲ್ಲಿ ಬ್ಯಾಚಲರ್ ಆಫ್ ಟೆಕ್ನೋಲಾಜಿ ಪದವೀಧರರು. ಗೋವಾ ರಾಜ್ಯದ ಡೆಂಪೋ ಮೈನಿಂಗ್ ಕಾರ್ಪೋರೇಷನ್ ನಲ್ಲಿ ಗಣಿ ಎಂಜಿನಿಯರ್‍ ರಾಗಿ  ಬಿಚೋಲಿಯಲ್ಲಿನ ಕಬ್ಬಿಣದ ಗಣಿಗಳಲ್ಲಿ 1994ರವರೆಗೆ ಕೆಲಸ ಮಾಡಿದರು. ಬಿಹಾರದ ಹಜಾರೀಬಾಗ್ ಜಿಲ್ಲೆಯ ಕಲ್ಲಿದ್ದಲು  ಗಣಿಗಳಲ್ಲಿ ಎಂಜಿನಿಯರ್ ಆಗಿ ಮೂರುವರೆ ವರುಷ ಕೆಲಸ ಮಾಡಿದರು. ರಾಂಚಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೋಲ್ ಮ್ಯಾನೇಜ್ ಮೆಂಟ್ ನಲ್ಲಿ ಮ್ಯಾನೆಜ್ ಮೆಂಟ್ ಕೋರ್ಸ್ ಮಾಡಿದರು. ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವಾಗಲೇ ಭಾರತ ಸರಕಾರದ ಲೋಕಸೇವಾ ಆಯೋಗದವರು ನಾಗರಿಕ ಸೇವೆಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ್‍ಯಾಂಕ್ ನೊಂದಿಗೆ ತೇರ್ಗಡೆಯಾದರು. ಭಾರತೀಯ ಪೊಲೀಸ್ ಸೇವೆಗೆ (1997ರ ಆಗಸ್ಟ್ )21 ) ಸೇರಿದರು. ಸರದಾರ್ ವಲ್ಲಭ್ ಬಾಯ್ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿ, ಹೈದರಾಬಾದಿನಲ್ಲಿ ತರಬೇತಿ ಪಡೆದರು. ಕರ್ನಾಟಕ ಕ್ಯಾಡರ್ ನ ಪೊಲೀಸ್ ಅಧಿಕಾರಿಯಾಗಿ ಸೇವೆಗೆ ಸೇರಿದರು. 

ಬಾಗಲಕೋಟೆ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಬೆಂಗಳೂರಿನ ಸಿಓಡಿಯಲ್ಲಿ ನಕಲು ನೋಟುಗಳು ಮತ್ತು ಮಾದಕ ದ್ರವ್ಯಗಳ ವಿಭಾಗ, ಮಾನವ ಹತ್ಯೆ ಮತ್ತು ಮನೆಗಳ್ಳತನಗಳ ವಿಭಾಗ, ಧಾರವಾಡ, ಹಾಸನ, ಮೈಸೂರು, ಮತ್ತು ಕೊಪ್ಪಳ ಜಿಲ್ಲೆಗಳ ಪೊಲೀಸ್ ಅಧೀಕ್ಷಕರಾಗಿ ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸ್ ಉಪಾಯುಕ್ತರಾಗಿ ದ್ದರು.  

2005ರ ಚಳಿಗಾಲದಲ್ಲಿ ವಿಶ್ವಸಂಸ್ಥೆಯು ಇವರನ್ನು ಆಯ್ಕೆಮಾಡಿ  ಕೊಸೊವೊದಲ್ಲಿ ಶಾಂತಿ ಸ್ಥಾಪನಾ ಕಾರ್ಯಪಡೆಗೆ ಕಳುಹಿಸಿತು. ಪರಸ್ಪರ ಯುದ್ಧದಲ್ಲಿ ತೊಡಗಿದ್ದ ಅಲ್ಬೇನಿಯನ್ ಮತ್ತು ಸರ್ಬಿಯನ್ ಜನಾಂಗಗಳ ನಡುವೆ ಶಾಂತಿ ಸ್ಥಾಪನೆ ಹಾಗೂ ಮಾನವ ಹಕ್ಕುಗಳ ಪಾಲನೆಯ ಕಾರ್ಯದ ಅಂತರ್ ರಾಷ್ಟ್ರೀಯ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು.

ಇವರಿಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸೂರತ್ಕಲ್ ನವರು 2004ರ ಗ್ಲೋಬಲ್ ಅಲುಮ್ನಿ ಎಕ್ಸಲೆನ್ಸ್ ನೀಡಿ ಗೌರವಿಸಿದ್ದಾರೆ. ಕೊಸೊವೊದಲ್ಲಿ ಶಾಂತಿ ಸ್ಥಾಪನಾ ಕಾರ್ಯದಲ್ಲಿ ತೋರಿದ ಸಾಧನೆಗಾಗಿ ವಿಶ್ವಸಂಸ್ಥೆಯು ಇವರಿಗೆ ವಿಶ್ವಸಂಸ್ಥೆಯ ಪದಕ ನೀಡಿ ಗೌರವಿಸಿದೆ. ಓದುವುದು, ಬರೆಯುವುದು, ಛಾಯಾಚಿತ್ರಗಳನ್ನು ತೆಗೆಯುವುದು, ಲೋಕ ಸಂಚಾರ ಇವರ ನೆಚ್ಚಿನ ಹವ್ಯಾಸಗಳಾಗಿವೆ.

ಎಂ. ನಂಜುಂಡಸ್ವಾಮಿ

(28 Mar 1970)