
ಮಿಲ್ಲೊಶ್ ಜಿರ್ಜ್ ನಿಕೊಲ್ಲಾ, 26 ವರ್ಷದ ಬದುಕಿನಲ್ಲಿ ಅವರ ಸಾಹಿತ್ಯಕ್ಕೆ ಸಿಕ್ಕಿದ್ದು ನಿಷೇಧದ ಉಡುಗೊರೆ. ಆದರೆ ಇಂದು ಆಲ್ಬೇನಿಯಾದ ಹೆಮ್ಮೆಯ ಸಾಹಿತಿ. ಸುಂದರ ಸಂಸಾರದ ಆಸೆಗಾಗಿ ದುಡಿಯಲು ವೇಶ್ಯಾ ವೃತ್ತಿಯನ್ನು ಆರಿಸಿಕೊಂಡು, ಅಲ್ಲಿ ಕನಸನ್ನು ನನಸಾಗಿಸಿಕೊಳ್ಳಲು ವಿಫಲವಾಗಿ ಕೊನೆಗೆ ಹುಚ್ಚಾಸ್ಪತ್ರೆಯನ್ನು ಸೇರಿದರು. ಗುರುವಿಗಾಗಿ ಕೊಡಲು ಏನೂ ಇಲ್ಲದೆ ತನ್ನ ಹರಿದ ಪಾದರಕ್ಷೆಯನ್ನು ಅವರಿಗೆ ನೀಡುವ ಬಾಲಕ ಲುಲಿ, ಅಸಹನೀಯವಾದ ವಾತಾವರಣದಲ್ಲಿ ಖಿನ್ನವಾಗಿ ಅಸಹಾಯಕವಾಗಿ ಆತ್ಮಹತ್ಯೆಯನ್ನು ಮಾಡಿಕೊಂಡ ಗುಬ್ಬಿ, ಮರ್ಯಾದಾ ಹತ್ಯೆಯು ಪ್ರಚಲಿತವಾಗಿದ್ದ ಆಲ್ಬೇನಿಯಾದಲ್ಲಿ ತಾನು ಗಂಡನಿಂದ ವಂಚಿತವಾದ ಸುಖವನ್ನು ಕೆಲಸದ ಆಳಿನಿಂದ ಪಡೆದೂ, ಮರ್ಯಾದಾ ಹತ್ಯೆಯಿಂದ ಪಾರಾದ ಹೆಣ್ಣು ಇಂತಹ ಹಲವು ಸಂಗತಿಗಳನ್ನು ಲೇಖಕರು ಈ ಕೃತಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ.
©2025 Book Brahma Private Limited.