About the Author

ಅನುವಾದಕಿ, ವಿಮರ್ಶಕಿ ಆಶಾದೇವಿ ಅವರು 1966 ಫೆಬ್ರವರಿ 26 ದಾವಣಗೆರೆ ಜಿಲ್ಲೆಯ ನೇರಳಿಗೆಯಲ್ಲಿ ಜನಿಸಿದರು. ತಂದೆ ಸೋಮಶೇಖರ್, ತಾಯಿ ಅನಸೂಯಾ. ಚನ್ನಗಿರಿ ಸಮೀಪದ ಹಿರೇಕೋಗಲೂರಿನವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಡಿ.ಆರ್.ನಾಗರಾಜ್ ಮಾರ್ಗದರ್ಶನದಲ್ಲಿ ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ ಕುರಿತು ಪಿ.ಎಚ್ಡಿ. ಸ್ತ್ರೀಮತವನುತ್ತರಿಸಲಾಗದೇ(ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳು) ಉರಿಚಮ್ಮಾಳಿಗೆ(ಡಿ.ಆರ್.ನಾಗರಾಜ ಅವರ ದಿ ಪ್ಲೇಮಿಂಗ್ ಫೀಟ್ ಕೃತಿಯ ಅನುವಾದ). ವಚನ ಪ್ರವೇಶ( ಸಂಪಾದನೆ). ಭಾರತದ ಬಂಗಾರ ಪಿ.ಟಿ.ಉಷಾ, ಇವರ ಪ್ರಮುಖ ಕೃತಿಗಳು. ವಿವಿಧ ಸೆಮಿನಾರುಗಳಲ್ಲಿ ಪ್ರಬಂಧ ಮಂಡನೆ. ಪ್ರಸ್ತುತ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

’ಭಾರತದ ಬಂಗಾರ, ಉರಿಚಮ್ಮಾಳಿಗೆ’ ಕೃತಿಗಳನ್ನು ಭಾಷಾಂತರಿಸಿದ್ದಾರೆ. ’ಸ್ತ್ರೀಮತವನುತ್ತರಿಸಲಾಗದೆ, ನಡುವೆ ಸುಳಿವಾತ್ಮ’ ಅವರ ವಿಮರ್ಶಾ ಕೃತಿಗಳು. ’ಎಂ.ಕೆ.ಇಂದಿರಾ ಪ್ರಶಸ್ತಿ, ಇನ್‌ಫೋಸಿಸ್ ಪ್ರಶಸ್ತಿ, ಜಿಎಸ್‌ಎಸ್ ಪ್ರಶಸ್ತಿ’ಗಳಿಗೆ ಪಾತ್ರರಾಗಿದ್ದಾರೆ.

ಎಂ.ಎಸ್. ಆಶಾದೇವಿ

(26 Feb 1966)

BY THE AUTHOR