ಡಿ.ಆರ್. ನಾಗರಾಜ್ ಅವರ ಬೆಲೆಬಾಳುವ ಬರಹಗಳು

Author : ಎಂ.ಎಸ್. ಆಶಾದೇವಿ

Pages 366

₹ 270.00




Year of Publication: 2015
Published by: ವಸಂತ ಪ್ರಕಾಶನ
Address: ನಂ- 360, 10ನೇ ಬಿ ಮುಖ್ಯ ರಸ್ತೆ, 3ನೇ ಬ್ಲಾಕ್ ಜಯನಗರ, ಬೆಂಗಳೂರು- 560011
Phone: 22443996

Synopsys

‘ಡಿ.ಆರ್. ನಾಗರಾಜ್ ಅವರ ಬೆಲೆಬಾಳುವ ಬರಹಗಳು’  ಹೆಸರೇ ಸೂಚಿಸುವಂತೆ ಡಿ.ಆರ್. ನಾಗರಾಜ್ ಅವರ ಬರಹಗಳ ಸಂಗ್ರಹ ಕೃತಿ. ಎಂ.ಎಸ್. ಆಶಾದೇವಿಯವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಡಿ.ಆರ್. ಎನ್ ಅವರ ಈ ಪ್ರಯಾಣವನ್ನು ‘ಮಹಾ ಪ್ರಯಾಣ’ ಎಂದು ಖಂಡಿತ ಕರೆಯಬಹುದು. ಇದನ್ನೇ ಶಾಸ್ತ್ರೀಯವಾಗಿ ಮಂಡಿಸುವುದಾದರೆ ಇದೊಂದು ವಿಕಾಸಶೀಲ ಮಾನವಿಕ ಅಧ್ಯಯನದ ಅಪೂರ್ವ ಮಾದರಿ. ಸ್ವತಃ ಡಿ.ಆರ್ ತಮ್ಮನ್ನು ‘ಬೌದ್ಧಿಕ ನೇಕಾರ’ ಎಂದು ಕರೆದುಕೊಳ್ಳುತ್ತಾರೆ. ಸಾಹಿತ್ಯ ವಿಮರ್ಶೆಯಿಂದ ಆರಂಭವಾದ ಇವರ ಈ ಶೋಧ ಶಕ್ಯವಿರುವ ಎಲ್ಲಾ ಜ್ಞಾನಶಾಖೆಗಳನ್ನೂ  ನಿರಂತರವಾಗಿ ಒಳಗೊಳ್ಳುತ್ತಾ ಹೋಯಿತು.

ಜ್ಞಾನಪಿಪಾಸುವಿನಂತೆ ಕಾಣುತ್ತಿದ್ದ ಈ ಪ್ರತಿಭೆಗೆ ಅದು ಜ್ಞಾನದ ಶೋಧ ಮಾತ್ರವಾಗದೇ ತನ್ನ ಕಾಲದ, ತನ್ನ ಜನಾಂಗದ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆಯೂ ಆಯಿತು. ಅವರ ಹುಡುಕಾಟಕ್ಕಿರುವ ತೀವ್ರತೆಯ ಹಿಂದೆ ಕೆಲಸ ಮಾಡುತ್ತಿದ್ದದ್ದು ಇದೇ ಅಂತ. ತನ್ನ ಸಮುದಾಯವನ್ನು ಸದೃಢವಾಗಿಸುವ, ಆರೋಗ್ಯಪೂರ್ಣವಾಗಿಸುವ ಈ ಅಪ್ಪಟ ಮಾನವೀಯ ಕಾಳಜಿಯು ಅದರ ಸೌಂದರ್ಯ ಮೀಮಾಂಸೆಯಲ್ಲಿಯೂ ಎಂದೂ ನಂಬಿಕೆಯನ್ನು ಮತ್ತು ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ. ಈ ಅಂಶವೇ ಅವರನ್ನು ಅಖಿಲ ಭಾರತ ಮಟ್ಟದಲ್ಲೂ, ಅಂತರಾಷ್ಟ್ರೀಯ ಮಟ್ಟದಲ್ಲೂ ಸ್ಥಾಪಿಸಿಕೊಳ್ಳಲು ನೆರವಾಯಿತು. ಅವರ ಪ್ರಖರ ಓದು ಬರಹಗಳಿಂದ ಪ್ರಭಾವಗೊಳ್ಳದ ಕ್ಷೇತ್ರಗಳಿಲ್ಲ..ಡಿ.ಆರ್. ನಾಗರಾಜ್ ಅವರ ಪ್ರಮುಖ ಬರಹಗಳನ್ನು ಈ ಸಂಕಲನದಲ್ಲಿ ಎಂ.ಎಸ್. ಆಶಾದೇವಿಯರು ಸಂಗ್ರಹಿಸಿದ್ದಾರೆ. 

About the Author

ಎಂ.ಎಸ್. ಆಶಾದೇವಿ
(26 February 1966)

ಅನುವಾದಕಿ, ವಿಮರ್ಶಕಿ ಆಶಾದೇವಿ ಅವರು 1966 ಫೆಬ್ರವರಿ 26 ದಾವಣಗೆರೆ ಜಿಲ್ಲೆಯ ನೇರಳಿಗೆಯಲ್ಲಿ ಜನಿಸಿದರು. ತಂದೆ ಸೋಮಶೇಖರ್, ತಾಯಿ ಅನಸೂಯಾ. ಚನ್ನಗಿರಿ ಸಮೀಪದ ಹಿರೇಕೋಗಲೂರಿನವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಡಿ.ಆರ್.ನಾಗರಾಜ್ ಮಾರ್ಗದರ್ಶನದಲ್ಲಿ ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ ಕುರಿತು ಪಿ.ಎಚ್ಡಿ. ಸ್ತ್ರೀಮತವನುತ್ತರಿಸಲಾಗದೇ(ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳು) ಉರಿಚಮ್ಮಾಳಿಗೆ(ಡಿ.ಆರ್.ನಾಗರಾಜ ಅವರ ದಿ ಪ್ಲೇಮಿಂಗ್ ಫೀಟ್ ಕೃತಿಯ ಅನುವಾದ). ವಚನ ಪ್ರವೇಶ( ಸಂಪಾದನೆ). ಭಾರತದ ಬಂಗಾರ ಪಿ.ಟಿ.ಉಷಾ, ಇವರ ಪ್ರಮುಖ ಕೃತಿಗಳು. ವಿವಿಧ ಸೆಮಿನಾರುಗಳಲ್ಲಿ ಪ್ರಬಂಧ ಮಂಡನೆ. ಪ್ರಸ್ತುತ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ...

READ MORE

Related Books