ಹುದುಗಲಾರದ ದುಃಖ

Author : ಎಂ.ಎಸ್. ಆಶಾದೇವಿ

Pages 376

₹ 310.00




Year of Publication: 2014
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್‌ ಎದುರು ವಿದ್ಯಾ ನಗರ ಶಿವಮೊಗ್ಗ
Phone: 9449174662

Synopsys

ವಸಂತ ಕಣ್ಣಬೀರನ್ ಅವರು ಬರೆದ ಇಂಗ್ಲಿಷ್ ಲೇಖನಗಳನ್ನು ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಹುದಗಲಾರದ ದುಃಖ.  ವ್ಯಕ್ತಿ, ಪ್ರೀತಿ ಹಾಗೂ ವ್ಯಥೆಗಳ ನೆನಪು ಎಂಬುದು ಕೃತಿಯ ಉಪಶೀರ್ಷಿಕೆ. ಈ ವಿಷಯಗಳ ಸುತ್ತ ವ್ಯಕ್ತವಾದ ಭಾವನೆ, ವಿಚಾರಗಳು, ವಿಶ್ಲೇಷಣೆಗೆ ಒಳಗಾಗಿದ್ದು ಈ ಕೃತಿಯ ವಿಶೇಷತೆ.  

ದಾಂಪತ್ಯ ಮತ್ತು ವೈಧವ್ಯ ಎರಡೂ ಹೆಣ್ಣಿನ ಮಟ್ಟಿಗೆ ವರವೂ, ಶಾಪವೂ ಆಗಿರುವ ಅಗ್ನಿದಿವ್ಯಗಳು. ವೈಧವ್ಯವಂತೂ ಅವಳ ಆಯ್ಕೆಯದಲ್ಲ, ಅನೇಕ ಬಾರಿ ದಾಂಪತ್ಯವೂ ಆಗಿರುವುದಿಲ್ಲ! ನಮ್ಮ ಸಮುದಾಯದಲ್ಲಿ ದಾಂಪತ್ಯ ಮತ್ತು ವೈಧವ್ಯ ವೈಯಕ್ತಿಕವೆಷ್ಟೋ ಅಷ್ಟೇ ಸಾಮಾಜಿಕವಾದದ್ದೂ ಹೌದು; ಸಾರ್ವಜನಿಕವಾದದ್ದೂ ಹೌದು. ತಮ್ಮ ಆಯ್ಕೆಯ ವೃತ್ತಿಯನ್ನು ಕುರಿತ ಉತ್ಕಟತೆಯನ್ನು ದಾಂಪತ್ಯದ ಏಳು ಬೀಳುಗಳಲ್ಲಿಯೂ, ವೈಧವ್ಯದ ಅಪರಿಹಾರ್ಯತೆಯಲ್ಲಿಯೂ ಉಳಿಸಿಕೊಳ್ಳುವುದು ಹೆಣ್ಣಿನ ಮಟ್ಟಿಗೆ ಅಪೂರ್ವ ಸಾಧನೆಯೇ.
ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣವಾದುದನ್ನು ಸಾಧಿಸಿದ ಭಾರತದ ಈ ಹನ್ನೆರಡು ಪ್ರಖ್ಯಾತ ಮಹಿಳೆಯರು ದಾಂಪತ್ಯ ಮತ್ತು ವೈಧವ್ಯವನ್ನು ಮುಖಾಮುಖಿಯಾದ ಪರಿಯನ್ನು ಕುರಿತ ಮುಕ್ತ ಸಂದರ್ಶನಗಳ ಕೃತಿ ಇದು. ಆತ್ಮವಂಚನೆಯಲ್ಲದ, ಆತ್ಮರತಿಯನ್ನು ನೀಗಿಕೊಂಡ, ಕೌಟುಂಬಿಕ ನೆಲೆಯನ್ನು ಉಳಿಸಿಕೊಳ್ಳುತ್ತಲೇ ವೃತ್ತಿಪರತೆಯನ್ನು ಸಾಧಿಸಿದ ಈ ಮಹಿಳೆಯರು ಹೆಣ್ಣಿನ ಆತ್ಮಗೌರವವನ್ನು ಹೆಚ್ಚಿಸಿದ ಗಟ್ಟಿಗಿತ್ತಿಯರು.

About the Author

ಎಂ.ಎಸ್. ಆಶಾದೇವಿ
(26 February 1966)

ಅನುವಾದಕಿ, ವಿಮರ್ಶಕಿ ಆಶಾದೇವಿ ಅವರು 1966 ಫೆಬ್ರವರಿ 26 ದಾವಣಗೆರೆ ಜಿಲ್ಲೆಯ ನೇರಳಿಗೆಯಲ್ಲಿ ಜನಿಸಿದರು. ತಂದೆ ಸೋಮಶೇಖರ್, ತಾಯಿ ಅನಸೂಯಾ. ಚನ್ನಗಿರಿ ಸಮೀಪದ ಹಿರೇಕೋಗಲೂರಿನವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಡಿ.ಆರ್.ನಾಗರಾಜ್ ಮಾರ್ಗದರ್ಶನದಲ್ಲಿ ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ ಕುರಿತು ಪಿ.ಎಚ್ಡಿ. ಸ್ತ್ರೀಮತವನುತ್ತರಿಸಲಾಗದೇ(ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳು) ಉರಿಚಮ್ಮಾಳಿಗೆ(ಡಿ.ಆರ್.ನಾಗರಾಜ ಅವರ ದಿ ಪ್ಲೇಮಿಂಗ್ ಫೀಟ್ ಕೃತಿಯ ಅನುವಾದ). ವಚನ ಪ್ರವೇಶ( ಸಂಪಾದನೆ). ಭಾರತದ ಬಂಗಾರ ಪಿ.ಟಿ.ಉಷಾ, ಇವರ ಪ್ರಮುಖ ಕೃತಿಗಳು. ವಿವಿಧ ಸೆಮಿನಾರುಗಳಲ್ಲಿ ಪ್ರಬಂಧ ಮಂಡನೆ. ಪ್ರಸ್ತುತ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ...

READ MORE

Related Books