About the Author

ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ವೇದಾ ಎಂ.ಎಸ್. ಅವರು ಪ್ರಥಮ ರ್‍ಯಾಂಕ್‌ ಮತ್ತು ಚಿನ್ನದ ಪದಕದೊಂದಿಗೆ
ಎಂ.ಎ. ಪದವಿ ಪಡೆದವರು. ಅವರು ಜನಿಸಿದ್ದು 1965ರ ಮೇ 4ರಂದು ಮೈಸೂರಿನಲ್ಲಿ. ಬಿ. ಪುಟ್ಟಸ್ವಾಮಯ್ಯನವರ ಕಾದಂಬರಿಗಳನ್ನು ಕುರಿತ ಸಂಶೋಧನೆಗಾಗಿ ಪಿಎಚ್‌.ಡಿ. ಪದವಿ ಪಡೆದಿರುವ ಅವರು ’ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ ಆಧುನಿಕ ಯುಗ’ ಕುರಿತು ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ವಿಶೇಷ ಯೋಜನೆಯಲ್ಲಿ ಸಂಶೋಧನೆ ನಡೆಸಿದ್ದಾರೆ.

ಕಾವ್ಯಕೂಸು, ಗಂಗೋತ್ರಿಯಲ್ಲಿ (1987), ಬಿಳಲುಗಳು (1989), ದಾಖಲಾಗುವುದು ಬೇಡ (2000) ಪ್ರಕಟಿತ ಕವನ ಸಂಕಲನಗಳು.  ಪ್ರೀತಿ ಮತ್ತು ಸಾವು (1993) ಪಾಲು (1997), ಬಿಳಿಹೆಣ್ಣುಮತ್ತು ದುಂಡವ್ವನ ದೆವ್ವ (2002), ಮುಳ್ಳ ಮನೆಯ ಮೇಲೆ (2009) ಕಥಾಸಂಕಲನಗಳು. ಜಮೀನು (2010), ಜಯ (2004), ಕಪ್ಪು ಕಿವಿಯ ಬಿಳಿಯ ಕುದುರೆಗಳು (2007) ರಲ್ಲಿ ಪ್ರಕಟಿತ ಕಾದಂಬರಿಗಳು.

ಚದುರಂಗ (ಜೀವನ ಚರಿತ್ರೆ (2001), ಉತ್ತರ ಶಾಕುಂತಲ (ನಾಟಕ)(2006)೬, ಆರ್ದ್ರಗರ್ವದ ಹುಡುಗಿ (ವಿಮರ್ಶೆ) (2010), ಎಂ.ಎಸ್. ವೇದಾರ ಈ ತನಕ (ಸಣ್ಣಕಥೆಗಳು) (2010) ರಲ್ಲಿ ಪ್ರಕಟಿತ ಕೃತಿಗಳು. ಅವರಿಗೆ ಕರ್ನಾಟಕ ಲೇಖಕಿಯರ ಸಂಘದ (1987) ಗೀತಾದೇಸಾಯಿ ದತ್ತಿನಿಧಿ ಬಹುಮಾನ, ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ (1993), ಹಾವನೂರು ಪ್ರಶಸ್ತಿ, ಭಾರತೀಸುತ ಕಾದಂಬರಿ ಪ್ರಶಸ್ತಿ (2004), ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಥಮ ಪ್ರಶಸ್ತಿ (20004), ಇನ್‌ಫೋಸಿಸ್ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ಧಾರವಾಡ (2006), ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ಸಾಹಿತ್ಯ ಪ್ರಶಸ್ತಿ, ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.

 

 

ಎಂ.ಎಸ್‌. ವೇದಾ

(04 May 1965)