ಚದುರಂಗ

Author : ಲತಾ ಗುತ್ತಿ

Pages 472

₹ 495.00
Year of Publication: 2023
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಚದುರಂಗ’ ಡಾ. ಲತಾ ಗುತ್ತಿ ಅವರ ಕಾದಂಬರಿಯಾಗಿದೆ. ಇದು 1975ರ ತುರ್ತುಪರಿಸ್ಥಿತಿಯ ಪೂರ್ವೋತ್ತರ ಕಥನವಾಗಿದೆ. ಈ ಕಾದಂಬರಿಯಲ್ಲಿ ವೈವಿಧ್ಯಮಯ ಸ್ತ್ರೀ ಪಾತ್ರಗಳನ್ನು ಕಾಣಬಹುದು. ಕುಟುಂಬದ ಸುಖದುಃಖಗಳಲ್ಲಿ ಸಂಕಷ್ಟಗಳನ್ನು ಎದುರಿಸುತ್ತಾ ಅದನ್ನು ನಿವಾರಿಸುವ ಪ್ರಯತ್ನದಲ್ಲಿರುವ ಹೆಣ್ಣು ಪಾತ್ರಗಳು ಇಲ್ಲಿವೆ. ಸಾವಕ್ಕ, ಉಮಾ, ಶಕುಂತಲಾ, ರತ್ನವ್ವ, ಅಂಥ ಪಾತ್ರಗಳು. ಶಿಕ್ಷಣ ಪಡೆದು ತಮ್ಮ ತಮ್ಮ ಬದುಕನ್ನು ತಮ್ಮ ಇಚ್ಛೆಯಂತೆ ಆಯ್ದುಕೊಳ್ಳಲು ಹುಡುಕಾಟ ಮಾಡುವ ಸ್ತ್ರೀ ಪಾತ್ರಗಳು ಇಲ್ಲಿವೆ. ಶಾಲಿನಿ, ಕುಸುಮ ಅಂಥ ಪಾತ್ರಗಳು. ಕಾದಂಬರಿಯು ಎಲ್ಲಿಯೂ ನಾಯಕರನ್ನು ಕಟ್ಟುವ, ಬೆಳೆಸುವ ಉದ್ದೇಶವನ್ನು ಹೊಂದಿಲ್ಲ. ಎಲ್ಲವೂ ಸಾಮಾನ್ಯ ಪಾತ್ರಗಳು ಮತ್ತು ಎಲ್ಲವೂ ತಮ್ಮ ಸಂಸಾರ ಹಾಗೂ ಸಮಾಜದ ಸಂಕಟಗಳಲ್ಲಿ ಮಿಳಿತವಾಗಿ, ಅವುಗಳನ್ನು ನಿವಾರಿಸಿಕೊಳ್ಳುವ ಪ್ರಯತ್ನ- ಶೀಲ ವ್ಯಕ್ತಿತ್ವಗಳೆ ಆಗಿವೆ. ಈ ಕಾದಂಬರಿಯು ಅನೇಕ ರಾಜಕೀಯ ಸಾಮಾಜಿಕ ಕಾದಂಬರಿಗಳಂತೆ ಒಡಲಲ್ಲಿ ಮಹತ್ವಾಕಾಂಕ್ಷೆಯನ್ನು ಮೆರೆಯುವ ಭಾಷೆಯನ್ನು ಹೊಂದಿಲ್ಲ ಎನ್ನುವುದು ಕಾದಂಬರಿಯ ಗುಣಗಳಲ್ಲಿ ಒಂದಾಗಿದೆ. ಇದೊಂದು ಕ್ರಿಯಾಶೀಲ, ಸೃಜನಶೀಲ ವ್ಯಕ್ತಿತ್ವಗಳಿಗೆ ಒಂದು ಸವಾಲು ಕೊಡುವ ಭಾಷೆಯೇ ಆಗಿದೆ. ಅಂತಹ ಸವಾಲನ್ನು ಈ ಕಾದಂಬರಿಯು ಮುಖಾಮುಖಿಯಾಗಿಸುತ್ತದೆ.

About the Author

ಲತಾ ಗುತ್ತಿ
(12 August 1953)

ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು.  “ಪ್ರವಾಸ ಸಾಹಿತ್ಯ ...

READ MORE

Related Books