About the Author

ಲೇಖಕ, ಸಂಶೋಧಕ, ಪ್ರಕಾಶಕರೂ ಆಗಿರುವ ಮಹೇಶ್ ಕುಮಾರ್ ಸಿ.ಎಸ್ ಅವರು ಮೂಲತಃ ಬೆಂಗಳೂರಿನ ಚಿಕ್ಕನಹಳ್ಳಿ ಗ್ರಾಮದವರು. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂ.ಎ ಪದವಿ ಪಡೆದ ಮಹೇಶ್ ಅವರು ಯೂರೋಪ್ ಬೆಲ್ಜಿಯಂನ ಫೆಂಟ್ ವಿಶ್ವವಿದ್ಯಾನಿಲಯದಿಂದ ಫೇಲೋಶಿಪ್ ಪಡೆದು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪೂರ್ಣಗೊಳಿಸಿದ್ದಾರೆ. ಜೊತೆಗೆ ಭಾರತ ಸರಕಾರದ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದಿಂದ ಡಾ. ರಾಧಕೃಷ್ಣ 2015-17ನೇ ಸಾಲಿನಲ್ಲಿ ಪೋಸ್ಟ್ ಡಾಕ್ಟ್ರಲ್ ಫೆಲೋ ಆಗಿ ಆಯ್ಕೆಯಾಗಿದ್ದರು. ಕಳೆದ 13 ವರ್ಷಗಳಿಂದ ಇಸ್ಲಾಂ ಮತ್ತು ಭಾರತೀಯ ಸಂಪ್ರದಾಯಗಳ ಒಡನಾಟದ ಬಗೆಗೆ ಸಂಶೋಧನೆ ನಡೆಸುತ್ತಿರುವ ಮಹೇಶ್ ಅವರು ಈ ವಿಚಾರವಾಗಿ ಎರಡು ಪುಸ್ತಕಗಳು  ಮತ್ತು ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಈಶ್ವರ ಅಲ್ಲಾ ತೇರೋ ನಾಮ್ (ಬಾಬಾ ಬುಡನ್ ಗಿರಿಯ ವಿವಾದ ಮತ್ತು ದರಗಾ ಸಂಪ್ರದಾಯಗಳು), ಟಿಪ್ಪು ಸುಲ್ತಾನನ ಹಕೀಕತ್, ಜಾತಿ ಕೆಲವು ಟಿಪ್ಪಣಿಗಳು (ಅನುವಾದ), ಸಂಪ್ರೀತಿ(ಸಂಪಾದಕರಲ್ಲಿ ಒಬ್ಬರು), ಇವರ ಪ್ರಕಟಿತ ಕೃತಿಗಳು. 

ನಾಡಿನ ವಿದ್ವತ್ ಪತ್ರಿಕೆಗಳಲ್ಲಿ ಭಾರತೀಯ ಸಂಪ್ರದಾಯ, ಆಚರಣೆ, ಸೆಕ್ಯೂಲರಿಸಂನ ಬಗೆಗೆ ಹಲವಾರು ಲೇಖನಗಳು ಪ್ರಕಟವಾಗಿವೆ. ಮಹೇಶ್ ಕುಮಾರ್ ಅವರು ‘ಪರಸ್ಪರ’ ಎಂಬ ಹೆಸರಿನಲ್ಲಿ ತಮ್ಮದೇ ಪ್ರಕಾಶನವನ್ನು ಆರಂಭಿಸಿದ್ದಾರೆ. ಇವರ ಪ್ರಕಾಶನದಲ್ಲಿ ಬೇರೆ ಬೇರೆ ಲೇಖಕರ 15ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಮಹೇಶ್ ಕುಮಾರ್ ಸಿ.ಎಸ್

(25 May 1982)