About the Author

ಮಹೇಶ್ ಆರ್. ನಾಯಕ್ ಅವರು ಕಲ್ಲಚ್ಚು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ. ಕಡಲತಡಿಯ ಸಾಹಿತ್ಯ ಲೋಕದ ಸರಿಸುಮಾರು ಮೂರು ದಶಕಗಳಿಂದ ಕೇಳಿ ಬರುವ ಇವರ ಹೆಸರು, ವಿಶೇಷವಾಗಿ ಸಣ್ಣಕಥಾ ರಚನೆ ಹಾಗೂ ಇತರ ಹೆಚ್ಚಿನ ಪ್ರಕಾರಗಳಲ್ಲೂ ಬರೆದು ಸೈ ಎನ್ನಿಸಿಕೊಂಡಿದ್ದಾರೆ. 21 ವರ್ಷಗಳಿಂದ ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆ ಸದ್ವಿಚಾರಗಳ ಮೂಲಕ ಸಕ್ರಿಯವಾಗಿರುವ "ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥರು.

ಈವರೆಗೆ ಸ್ವರಚಿತ 18 ಮತ್ತು ಕಲ್ಲಚ್ಚು ಪ್ರಕಾಶನದ ನೆಲೆಯಲ್ಲಿ 48 ಸಾಹಿತ್ಯ ಕೃತಿಗಳು ಪ್ರಕಟವಾಗಿವೆ. ನೂರಾರು ಸಾಹಿತ್ಯಪರ ಗೋಷ್ಠಿಗಳಲ್ಲಿ ವಿವಿಧ ನೆಲೆಗಳಿಂದ ತಾಲೂಕು ಜಿಲ್ಲೆ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುತ್ತಾರೆ.

ಕೃತಿಗಳು: ಕಥಾಸಂಕಲನ :- ಜೊಂಪೆ, 18 ಮೊಳ, ಲಂಬಾಣ, ಮಿಕ್ಸೆಡ್ ಸ್ವೀಟ್ ಬಾಕ್ಸ್, ಪರದೇಶಿ ಪಾಣಿಗ್ರಹಣ, ಪಾಂಡು ದಾದನ ರುಬ್ಬುವ ಕಲ್ಲು, ಗೀಯ ಗೀಯ ಆಗಿಯ ಗೇ..ಯ, ಬೆಂಝಲು ರಂದ್ರ ಮತ್ತು ಮುದ್ದು ಕೃಷ್ಣ, ಕೆಂದಾಳಿ ತೆಂಗಿನಮರ ಮತ್ತು ಜೋಯಿಸರ ಮಗಳು, ಜಪಾನಿ ಪ್ಲೇಟ್.  

ಸಂಶೋಧನಾ ಕೃತಿ:-ನನ್ನಜ್ಜನ ಬಿರುಗಾಳಿಯ ಹಾರಾಟ

ಹಾಸ್ಯ ಸಂಕಲನ:-ಜಸ್ಟ್ ಫಾರ್‍ ಫನ್, ನಗು ನಗುತಾ ನಲಿ.

ಕವನ ಸಂಕಲನ: ಝೇಂಕಾರ, ಪಲ್ಲಟದ ಬದುಕು, ಕಲ್ಲಚ್ಚು ಕವನಗಳು. 

 

 

ಮಹೇಶ್ ಆರ್. ನಾಯಕ್

BY THE AUTHOR