About the Author

ಕವಿ, ಲೇಖಕ ವಿ.ಎಂ. ಮಂಜುನಾಥ್ ಬೆಂಗಳೂರಿನ ವೆಂಕಟಾಲ ಗ್ರಾಮದಲ್ಲಿ ಸೆಪ್ಟಂಬರ್ 13, 1976ರಲ್ಲಿ ಜನಿಸಿದರು. ತಂದೆ-ಮುನಿಮಾರಪ್ಪ ಮತ್ತು ತಾಯಿ- ನಾರಾಯಣಮ್ಮ. ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ, ಹೈಸ್ಕೂಲ್ ಓದುತ್ತಿರುವಾಗಲೇ ಲಂಕೇಶರ ಪ್ರಭಾವದಿಂದ ಸಾಹಿತ್ಯ ರಚನೆ ಆರಂಭಿಸಿದರು. ಇವರ ಮೊದಲ ಪದ್ಯ ಲಂಕೇಶ್ ನೆನಪಿನ ‘ಇಂತಿ ನಮಸ್ಕಾರಗಳು’ ಸಂಚಿಕೆಯಲ್ಲಿ ಪ್ರಕಟವಾಗಿತ್ತು.

ಅಭಿನಯ ತರಂಗ ಮತ್ತು ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ಡಿಪ್ಲೋಮಾ, 2003ರಲ್ಲಿ ಫಾದರ್ 55 ಮತ್ತು ನೀನಾಸಂ ಡೈರಿಯ ಕವಿತೆಗಳು, 2004ರಲ್ಲಿ ಲೆವೆಲ್ ಕ್ರಾಸಿಂಗ್ ಕವನ ಸಂಕಲನ, 2008ರಲ್ಲಿ ಬ್ರಾಂಡಿ ಕಥಾಸಂಕಲನ, 2008ರಲ್ಲಿ ಕ್ರಿಮಿ ನಾಟಕ, 2012ರಲ್ಲಿ ಜಾನ್-ಗೋವಾ(ಬ್ರಾಂಡಿ ಪರಿಷ್ಕೃತ), 2013ರಲ್ಲಿ ರಾಯಲ್ ಎನ್ ಫೀಲ್ಡ್, 2017ರಲ್ಲಿ ಅಸ್ಪೃಶ್ಯ ಗುಲಾಬಿ ಕಾದಂಬರಿ ಪ್ರಟಕಗೊಂಡಿವೆ. ಹೈವೇ ಥಿಯೇಟರ್ಸ್ ಡ್ರಾಮಾ ಟ್ರೂಪ್ ಆರಂಭಿಸಿರುವ ಇವರು ನಾಟಕ ನಿರ್ದೇಶನ ಮಾಡುತ್ತಿದ್ದಾರೆ. ‘ನನ್ನ ಗೆರೆಗಳು’ ಮತ್ತು ‘ಹೆದ್ದಾರಿಯಲ್ಲಿ ಕಂಡ ಚಿತ್ರಗಳು’ ಏಕವ್ಯಕ್ತಿ ಕಲಾಕೃತಿಗಳು ಪ್ರದರ್ಶನ ಕಂಡಿವೆ.

ಮಂಜುನಾಥ ವಿ.ಎಂ

(13 Sep 1976)