ಅಸ್ಪೃಶ್ಯ ಗುಲಾಬಿ

Author : ಮಂಜುನಾಥ ವಿ.ಎಂ

Pages 144

₹ 150.00




Published by: ಒನ್ ವ್ಹೀಲರ್‌ ಪಬ್ಲಿಕೇಷನ್ಸ್ ಬೆಂಗಳೂರು

Synopsys

ನಗರದ ಮೂಲೆಗಳಲ್ಲಿ ಬಾಳುತ್ತಿರುವ ದಲಿತರ ಬಗ್ಗೆ ಈ ಕೃತಿಯಲ್ಲಿ ವಿವರಿಸಿದ್ದಾರೆ.  ಮಂಜುನಾಥ ವಿ. ಎಂ ಎರಡನೇ ಕಾದಂಬರಿಯಾಗಿದೆ. ಅಪರಿಮಿತ ಜೀವನೋತ್ಸಾಹವನ್ನು ಒಳಗೊಂಡ ದಲಿತ ತರುಣಿಯೊಳೊಬ್ಬಳ ಬದುಕಿನ ದುರಂತ ಕಥೆ ‘ಅಸ್ಪೃಶ್ಯ ಗುಲಾಬಿ’ ಕಾದಂಬರಿಯದು. ದಲಿತ ಸಮೂಹದೊಳಗೇ ನಡೆಯುವ ಹೆಣ್ಣಿನ ಶೋಷಣೆ ಇನ್ನೊಂದು ಬಗೆಯದು ಯಾಕೆಂದರೆ ಇಲ್ಲಿನ ಹೆಣ್ಣುಮಕ್ಕಳು ದಲಿತರಲ್ಲಿ ದಲಿತರು. ಕಥಾನಾಯಕಿ ದೀಪಾ ಹಾಗೂ ಅವಳ ತಂಗಿ ವಸಂತ, ತಾಯಿ ಸುಗುಣ, ಕ್ಯಾಂಡಿ ಮಾರುವ ಹುಡುಗಿಯರು ಬದುಕನ್ನು ಈ ಕಾದಂಬರಿಯಲ್ಲಿ  ಚಿತ್ರಿಸಿದ್ದಾರೆ. ಬೀದಿಯಲ್ಲಿ ಸಾಯುತ್ತಾ ಬಿದ್ದಿರುವ ಕಥಾನಾಯಕಿ ದೀಪಾಳನ್ನು ಕಾಮುಕರ ಗುಂಪೊಂದು ಎದುರಾಗುತ್ತದೆ. ಅವಳನ್ನು ಬಳಸಿಕೊಳ್ಳಲು ಗುಂಪು ಮುಂದಾದಾಗುವ ಬಗೆ, ಅಸ್ಪೃಶ್ಯ ಗುಲಾಬಿಯನ್ನು ಕೇಡಿಯೊಬ್ಬ ಮಾನಸಿಕವಾಗಿ ಸ್ಪರ್ಶಿಸಿದ ಬಗೆಯನ್ನು ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

About the Author

ಮಂಜುನಾಥ ವಿ.ಎಂ
(13 September 1976)

ಕವಿ, ಲೇಖಕ ವಿ.ಎಂ. ಮಂಜುನಾಥ್ ಬೆಂಗಳೂರಿನ ವೆಂಕಟಾಲ ಗ್ರಾಮದಲ್ಲಿ ಸೆಪ್ಟಂಬರ್ 13, 1976ರಲ್ಲಿ ಜನಿಸಿದರು. ತಂದೆ-ಮುನಿಮಾರಪ್ಪ ಮತ್ತು ತಾಯಿ- ನಾರಾಯಣಮ್ಮ. ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ, ಹೈಸ್ಕೂಲ್ ಓದುತ್ತಿರುವಾಗಲೇ ಲಂಕೇಶರ ಪ್ರಭಾವದಿಂದ ಸಾಹಿತ್ಯ ರಚನೆ ಆರಂಭಿಸಿದರು. ಇವರ ಮೊದಲ ಪದ್ಯ ಲಂಕೇಶ್ ನೆನಪಿನ ‘ಇಂತಿ ನಮಸ್ಕಾರಗಳು’ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಅಭಿನಯ ತರಂಗ ಮತ್ತು ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ಡಿಪ್ಲೋಮಾ, 2003ರಲ್ಲಿ ಫಾದರ್ 55 ಮತ್ತು ನೀನಾಸಂ ಡೈರಿಯ ಕವಿತೆಗಳು, 2004ರಲ್ಲಿ ಲೆವೆಲ್ ಕ್ರಾಸಿಂಗ್ ಕವನ ಸಂಕಲನ, 2008ರಲ್ಲಿ ಬ್ರಾಂಡಿ ಕಥಾಸಂಕಲನ, 2008ರಲ್ಲಿ ಕ್ರಿಮಿ ನಾಟಕ, 2012ರಲ್ಲಿ ...

READ MORE

Conversation

Related Books