About the Author

ಸುಬ್ರಹ್ಮಣ್ಯಂ ವೆಂಕಟರಾವ್ ಮೀನಗುಂಡಿ ಮನೋವಿಜ್ಞಾನದ ಲೇಖನ ವಲಯದಲ್ಲಿ ಚಿರಪರಿಚಿತ ಹೆಸರು. (ಜನನ 1943) ಬಳ್ಳಾರಿಯ ತಾರಾನಾಥ ಆಯರ್ವೇದ ವಿದ್ಯಾಪೀಠದಲ್ಲಿ ಎಲ್.ಎ.ಎಂ.ಎಸ್.ಶಿಕ್ಷಣ ಪೂರೈಸಿ, ಸೈಕೋಥೆರಪಿ (1975) ರಂಗ ಪ್ರವೇಶಿಸಿದರು. ನಂತರ, ಕೊಚ್ಚಿನ್'ನ ಇನ್ಸ್ ಸ್ಟಿಟ್ಯೂಟ್ ಫಾರ್ ಕೌನ್ಸೆಲಿಂಗ್ ಆಂಡ್ ಟ್ರ್ಯಾನ್ಸ್ಯಾಕ್ಯನಲ್ ಅನಾಲಿಸಿಸ್ ರೆವರೆಂಡ್ ಫಾದರ್ ಜಾರ್ಜ್ ಕಂಡತಿಲ್ ಎಸ್.ಜೆ. ಮತ್ತು ಸಿಸ್ಟರ್ ಅನ್ನಿ ಮಾರಿಯಾ ಸಿ.ಎಂ. ಅವರಿಂದ ಟ್ರಾನ್ಯಾಕನಲ್ ಅನಾಲಿಸಿಸ್, ಗ್ರೂಪ್ ಡೈನಾಮಿಕ್ಸ್, ಗೆಸ್ಟಾಲ್ಟ್ ಥೆರಪಿ ಮತ್ತು ನಾನ್ ಡೈರೆಕ್ಟಿವ್ ಕೌನ್ಸೆಲಿಂಗ್ ನಲ್ಲಿ ತರಬೇತಿ ಪಡೆದರು. ಮಾನಸಿಕ ವಿಜ್ಞಾನದಲ್ಲಿ ರೋಗ ವಿಶ್ಲೇಷಣೆಯ ಪದ್ಧತಿ ಬೆಳೆದು ಬಂದು, ಹಲವಾರು ಶಿಬಿರಗಳನ್ನು ನಡೆಸಿದರು. 

ಮೀನಗುಂಡಿಯವರು ಮನಸ್ಸು ಇಲ್ಲದ ಮಾರ್ಗ ಕೃತಿ(1988) ಪ್ರಕಟಿಸಿ ನೂತನ ಚಿಕಿತ್ಸಾ ಕ್ರಮವನ್ನು ಪರಿಚಯಿಸಿದರು. ಈ ಕೃತಿಗೆ 1992-93ನೇ ಸಾಲಿನ ಮೂಡಬಿದಿರೆಯ ವರ್ಧಮಾನ ಸಾಹಿತ್ಯ ಪ್ರಶಸ್ತಿ ಲಭಿಸಿತು. 'ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?' ಮೀನಗುಂಡಿಯವರ ಇನ್ನೊಂದು ಕೃತಿ. 

ಮೀನಗುಂಡಿ ಸುಬ್ರಮಣ್ಯ