About the Author

ಲೇಖಕ ಮೋಹನ ಭಾಸ್ಕರ ಹೆಗಡೆಯವಮೂಲತಃ ಹೊನ್ನಾವರ ತಾಲೂಕಿನ ಕರ್ಕಿಯವರು. ಪ್ರಸ್ತುತ ಕುಮಟಾ ತಾಲೂಕಿನ ಹೊಸಹೆರವಟ್ಟಾ ನಿವಾಸಿ. ತಂದೆ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಭಾಸ್ಕರ ಲಕ್ಷ್ಮಣ ಹೆಗಡೆ. ತಾಯಿ ಪಾರ್ವತಿ. ಪತ್ನಿ ಉಷಾ. ಮಗ ಪ್ರಮೋದ.
ಓದಿದ್ದು ಬಿ.ಕಾಂ. (1987) ಡಾ. ಎ. ವಿ. ಬಾಳಿಗಾ ಕಾಲೇಜ್ ಆಫ್ ಕಾಮರ್ಸ್, ಕುಮಟಾದಲ್ಲಿ. 

ಯಕ್ಷಗಾನವನ್ನು ಆರಂಭಿಕವಾಗಿ ಕಲಿತಿದ್ದು ಬೆಂಗಳೂರಿನ ಯಕ್ಷದೇಗುಲದಲ್ಲಿ. ಆಮೇಲೆ ವಿಶೇಷವಾಗಿ ಅಭ್ಯಸಿಸಿದ್ದು ಯಕ್ಷಗಾನದ ಸವ್ಯಸಾಚಿ ಮೇರು ಕಲಾವಿದ ಡಾ. ಕೆರೆಮನೆ ಮಹಾಬಲ ಹೆಗಡೆಯವರಲ್ಲಿ. ಅವರನ್ನು ಯಕ್ಷಗಾನದ ಏಕಮೇವ ದಾರ್ಶನಿಕ ಕಲಾವಿದ ಅಂತಲೂ, ಅವಧೂತ ಕಲಾವಿದ ಎಂತಲೂ ಅವರನ್ನು ಬಲ್ಲವರು ಸದಾ ಗೌರವಿಸುವರು. ಅವರ ಒಡನಾಟದಲ್ಲಿ ಇವರು ಯಕ್ಷಗಾನದ ಹಲವು ವಿಭಾಗದ ಪರಿಚಯ ಮಾಡಿಕೊಂಡವರು ಹಾಗೂ ರೂಢಿಸಿಕೊಂಡವರು. ಯಕ್ಷಗಾನದ ಒಂದು ಪ್ರಬಲ ವಿಭಾಗವಾದ ತಾಳಮದ್ದಳೆಯಲ್ಲಿ ಸುಮಾರು 35 ವರ್ಷಗಳ ಪರಿಶ್ರಮ ಹಾಗೂ ಅನುಭವ. ಪಾತ್ರದ ನವನವೀನ ಸ್ವರೂಪ ಚಿತ್ರಣಾ ಕ್ರಮ, ಔಚಿತ್ಯವರಿತ, ರಸ-ಭಾವ ಪುಷ್ಟಿಯ ಹಿತವಾದ ಹಾಗೂ ಹೃದ್ಯವಾಗುವ ವಾಗ್ಧೋರಣೆ ಇವರ ವಿಶೇಷತೆ. 
ನಿರಂತರ ಅಭ್ಯಾಸ ಹಾಗೂ ಬರಹಗಳ ಜೊತೆಗೆ ವೈವಿಧ್ಯಮಯ ವಿಷಯಗಳ ಕುರಿತಾಗಿ ಮಾತನಾಡುವದು ಇವರಿಗೆ ಇಷ್ಟ.

ಪ್ರಸ್ತುತ ಎನರ್ಜಿ ಕ್ಷೇತ್ರದಲ್ಲಿನ ವಿಶ್ವ ಮಾನ್ಯತೆಯ ಸೆಲ್ಕೋ ಸೋಲಾರ್ ಸಂಸ್ಥೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ.

ಪ್ರಕಟಿತ ಇತರ ಪುಸ್ತಕಗಳು:  ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು (2014),  ಮ್ಯಾಗಸ್ಸೆಸ್ಸೆ ಪುರಸ್ಕೃತ ವಿಜ್ಞಾನಿ ಡಾ. ಹರೀಶ ಹಂದೆ (2015) ,ವಾತ್ಸಲ್ಯದ ಸಿರಿ ಸಾಹಿತ್ಯದ ಗರಿ ಬಿ.ಹೆಚ್.ಶ್ರೀಧರ್ (2017). ಪ್ರಭಾರಿ(2022)

ಸಂಪಾದನಾ ಗ್ರಂಥ: ದಶಮಾನ (ಶ್ರೀ ರಾಮಚಂದ್ರಾಪುರ ಮಠ)

ಮನ್ನಣೆ : ಪ್ರಖ್ಯಾತ ಯಕ್ಷಗಾನ ಕಲಾವಿದ ಶ್ರೀ ಮಂಟಪ ಪ್ರಭಾಕರ ಉಪಾಧ್ಯ ಹಾಗೂ ಹಿರಿಯ ವಿದ್ವಾಂಸ ಶತಾವಧಾನಿ ಆರ್. ಗಣೇಶರವರ ಸಂಯೋಜನೆಯ ಏಕವ್ಯಕ್ತಿ ಯಕ್ಷಗಾನದ 500ನೇ ಪ್ರಯೋಗದ ಸಂದರ್ಭದಲ್ಲಿ ಯಕ್ಷಕಲಾರಕ್ಷಾಮಣಿ ಬಿರುದು ನೀಡಿ ಪುರಸ್ಕಾರ. 

ವಿಶ್ವ ಶಾಂತಿ ಟ್ರಸ್ಟ್ , ಬೆಟ್ಟಕೊಪ್ಪ , ಶಿರಸಿ ನೀಡುವ 2021ರ ನಮ್ಮನೆ ಪ್ರಶಸ್ತಿ ನೀಡಿ ಸನ್ಮಾನ.

 

ಮೋಹನ ಭಾಸ್ಕರ ಹೆಗಡೆ

BY THE AUTHOR