ಪ್ರಭಾರಿ

Author : ಮೋಹನ ಭಾಸ್ಕರ ಹೆಗಡೆ

₹ 120.00
Year of Publication: 2022
Published by: ಸ್ನೇಹ ಬುಕ್ ಹೌಸ್
Address: ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು, ನಂ 165, 10ನೇ ಮುಖ್ಯರಸ್ತೆ, ಶ್ರರಿನಗರ, ಬೆಂಗಳೂರು 560050
Phone: 9845031335

Synopsys

ಕತೆಗಾರ, ಲೇಖಕ ಮೋಹನ ಭಾಸ್ಕರ ಹೆಗಡೆ ಅವರ ಕತೆಗಳ ಸಂಕಲನ ಪ್ರಭಾರಿ. ಕೃತಿಯಲ್ಲಿ ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರು ಬೆನ್ನುಡಿಯ ಂಆತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕತೆ ಹೇಳುವವನಿಗೆ ಇರಬೇಕಾದ ಬಹುಮುಖ್ಯ ಗುಣವೆಂದರೆ ಸಹಾನುಭೂತಿ. ಮತ್ತೊಂದು ಪಾತ್ರದೊಳಗೆ ಇಳಿದು ಆ ಪಾತ್ರದ ಸುಖ-ದುಃಖಗಳನ್ನು ತನ್ನದು ಮಾಡಿಕೊಳ್ಳುವ ಗುಣ. ತಾಳಮದ್ದಲೆ ಅರ್ಥಧಾರಿಗಳಾದ ಮೋಹನ ಭಾಸ್ಕರ ಹೆಗಡೆ ಪುರಾಣದ ಅಸಂಖ್ಯ ಪಾತ್ರಗಳನ್ನು ಆವಾಹಿಸಿಕೊಂಡವರು. ಬದುಕನ್ನು ಎಳೆಯೆಳೆಯಾಗಿ ಬಿಡಿಸಿ ನೋಡಬಲ್ಲ ಸೂಕ್ಷ್ಮತೆ ಉಳ್ಳವರು. ಅವರ ಮೊದಲ ಸಂಕಲನದ ಕತೆಗಳನ್ನು ಓದುವಾಗ ನನಗೆ ಕಾಣಿಸಿದ್ದು ಅವರಿಗೆ ಸಹಜವಾಗಿರುವ ಮಾನವೀಯ ಗುಣ, ಅಕ್ಕರೆ ಮತ್ತು ಲೋಕಪ್ರೀತಿ. ಈ ಕತೆಗಳನ್ನು ಅವರು ಜಾಣತನದಿಂದ ಬರೆದಿಲ್ಲ. ತೋಚಿದಂತೆ ಬರೆದಿದ್ದಾರೆ. ತೋಚಿದ್ದನ್ನು ಕಾಣಿಸುವ ಕತೆಗಾರ ತನಗೆ ತೋಚದೇ ಇದ್ದದ್ದನ್ನೂ ಒಮ್ಮೊಮ್ಮೆ ತೋರಿಸುತ್ತಿರುತ್ತಾನೆ. ಹೀಗಾಗಿ ಇಂಥ ಕತೆಗಳಲ್ಲಿ ಅನುಕ್ತ ಮತ್ತು ಅನಿರ್ವಚನೀಯತೆ ಕೂಡ ಸೇರಿಕೊಂಡಿರುತ್ತದೆ. ಎಷ್ಟೋ ಸಲ ಅದು ಕತೆಗಾರನ ಕೈಮೀರಿ ಸಂಭವಿಸುವ ಸಂಗತಿಯೂ ಹೌದು. ಈ ಕತೆಗಳಲ್ಲಿ ಮೋಹನ ಭಾಸ್ಕರ ಹೆಗಡೆ ತಮ್ಮೊಳಗೆ ಹುಟ್ಟಿದ ಜಗತ್ತನ್ನು ನಮ್ಮ ಅನುಭವದ ಲೋಕವನ್ನಾಗಿ ಮಾಡಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರಭಾರಿ ಅವರ ಮೊದಲ ಕಥಾಸಂಕಲನ. ಅವರಿಂದ ಮತ್ತಷ್ಟು ಕತೆಗಳನ್ನು ನಿರೀಕ್ಷಿಸುವಂತೆ ಮಾಡುವಲ್ಲಿ ಇದು ಯಶಸ್ವಿಯಾಗಿದೆ ಎಂಬುದಾಗಿ ಹೇಳಿದ್ದಾರೆ.

About the Author

ಮೋಹನ ಭಾಸ್ಕರ ಹೆಗಡೆ

ಲೇಖಕ ಮೋಹನ ಭಾಸ್ಕರ ಹೆಗಡೆಯವಮೂಲತಃ ಹೊನ್ನಾವರ ತಾಲೂಕಿನ ಕರ್ಕಿಯವರು. ಪ್ರಸ್ತುತ ಕುಮಟಾ ತಾಲೂಕಿನ ಹೊಸಹೆರವಟ್ಟಾ ನಿವಾಸಿ. ತಂದೆ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಭಾಸ್ಕರ ಲಕ್ಷ್ಮಣ ಹೆಗಡೆ. ತಾಯಿ ಪಾರ್ವತಿ. ಪತ್ನಿ ಉಷಾ. ಮಗ ಪ್ರಮೋದ. ಓದಿದ್ದು ಬಿ.ಕಾಂ. (1987) ಡಾ. ಎ. ವಿ. ಬಾಳಿಗಾ ಕಾಲೇಜ್ ಆಫ್ ಕಾಮರ್ಸ್, ಕುಮಟಾದಲ್ಲಿ.  ಯಕ್ಷಗಾನವನ್ನು ಆರಂಭಿಕವಾಗಿ ಕಲಿತಿದ್ದು ಬೆಂಗಳೂರಿನ ಯಕ್ಷದೇಗುಲದಲ್ಲಿ. ಆಮೇಲೆ ವಿಶೇಷವಾಗಿ ಅಭ್ಯಸಿಸಿದ್ದು ಯಕ್ಷಗಾನದ ಸವ್ಯಸಾಚಿ ಮೇರು ಕಲಾವಿದ ಡಾ. ಕೆರೆಮನೆ ಮಹಾಬಲ ಹೆಗಡೆಯವರಲ್ಲಿ. ಅವರನ್ನು ಯಕ್ಷಗಾನದ ಏಕಮೇವ ದಾರ್ಶನಿಕ ಕಲಾವಿದ ಅಂತಲೂ, ಅವಧೂತ ಕಲಾವಿದ ಎಂತಲೂ ...

READ MORE

Related Books