About the Author

ಮೈ.ಶ್ರೀ. ನಟರಾಜ-ಹುಟ್ಟೂರು ಹಾಸನ, ಅರವತ್ತರ ದಶಕದ ಕೊನೆಯಲ್ಲಿ ಅಮೆರಿಕೆಗೆ ತೆರಳಿ, ಅಮೆರಿಕದ ಅಣುಶಕ್ತಿ ನಿಯಂತ್ರಣ ಆಯೋಗದಲ್ಲಿ ರಾಕ್ ಮೆಕ್ಯಾನಿಕ್ಸ್ ವಿಭಾಗಾಧಿಕಾರಿ ಮತ್ತಿತರ ಜವಾಬ್ದಾರಿಗಳೊಂದಿಗೆ ಸೇವೆ ಸಲ್ಲಿಸಿ ನಿವೃತ್ತರಾಗಿ ಮೇರೀಲ್ಯಾಂಡಿನಲ್ಲಿ ಪತ್ನಿ ಗೀತಾರೊಂದಿಗೆ ವಾಸವಿದ್ದಾರೆ. ನಾನೂ ಅಮೆರಿಕನ್ ಆಗಿಬಿಟ್ಟೆ, ಮಧುಚಂದ್ರ, ಸಿರಿಕೇಂದ್ರ (ಕವನ ಸಂಕಲನ), ಮೀನಿನ ಹೆಜ್ಜೆ, ಮತ್ತು ನೇಣು, ಪರದೇಶಿಗಳ ಪಾರ್ಟಿ ಮತ್ತು ಇತರ ಮೂರು ನಾಟಕಗಳು. ಮತ್ತು ಐ ಆ್ಯಮ್ ಬ್ರಾಹ್ಮಣ್ (ನಾಟಕಗಳು), ಜಾಲತರಂಗ, ಮತ್ತು ಜಾಲತರಂಗಿಣಿ (ಅಂಕಣ ಬರಹಗಳು) , ಮಾಯಾವಿ ಸರೋವರ (ಅನುವಾದಿತ ನಾಟಕ) The void and the womb (ಬಯಲು-ಬಸಿರು) ಕನ್ನಡ ಕಾದಂಬರಿಯ ಆಂಗ್ಲಾನುವಾದ). ಭಾಷೆಯಿಂದ ಭಾಷೆಗೆ ಮತ್ತು Beyond words (ಅನುವಾದಿತ ಕವನ ಸಂಕಲನ). ಸಿರಿಗನ್ನಡ ಗೀತರಾಮಾಯಣ (ನೀಳ್ಗಾವ್ಯ), ಕಥೆಯಂ ಕೇಳೆಲೋ ಕಂದ(ಕಥಾ ಸಂಕಲನ), ಪ್ರಕಟಿತ ಕೃತಿಗಳು. ನಾರೀಗೀತ (ಹಾಸನದ ರಾಜಾರಾಯರ ಕಾದಂಬರಿಯ ಮರುಸೃಷ್ಟಿ). ರಂಗ-ತರಂಗ- ಕನ್ನಡದ ಮುನ್ನಡೆಯ ಮಿಂಚು ನೋಟ. (ಆಹ್ವಾನಿತ ಭಾಷಣಗಳ ಸಂಗ್ರಹ)- ಸಂಪಾದಿಸಿದ ಮುಖ್ಯ ಕೃತಿಗಳು. ಕಾವೇರಿ ಕನ್ನಡ ಸಂಘದ ಕಾರ್ಯಕಾರೀ ಸಮಿತಿಯ ಮತ್ತು ಆಡಳಿತ ಮಂಡಲಿಯ ಅಧ್ಯಕ್ಷತೆ, ಕನ್ನಡ ಸಾಹಿತ್ಯಯ ರಂಗದ ಅಧ್ಯಕ್ಷತೆ, ಹಲವು ಪತ್ರಿಕೆಗಳ ಮತ್ತು ಸ್ಮರಣ ಸಂಚಿಕೆಗಳ ಸಂಪಾದಕತ್ವ, ಕನ್ನಡ ನಾಟಕ ತಂಡವನ್ನು ಊರೊರಿಗೆ ಕೊಂಡೊಯ್ದ ಖ್ಯಾತಿ, ಸಂಸ್ಕೃತದಲ್ಲಿ ನವರತ್ನ ಮಾಲಿಕಾ ಎಂಬ ಒಂಬತ್ತು ಕೃತಿಗಳ ಹಾಗೂ ನವಮಣಿಮಾಲಿಕಾ (ಕನ್ನಡ) ಎಂಬ ಒಂಬತ್ತು ಕೃತಿಗಳ ಸಾಹಿತ್ಯ ರಚನೆ- ಇತರ ಸಾಧನೆಗಳು. ಸಾಹಿತ್ಯ ಕ್ಷೇತ್ರದಲ್ಲಿ, ತ್ರಿವೇಣಿ ಸಂಸ್ಥೆ ಕೊಟ್ಟ ನೀಲಮ್ಮ ಮೆಟ್ ಗುಡ್ ಪಾರಿತೋಷಕ, ಕಾವೇರಿ ಕನ್ನಡ ಸಂಘ ಹ್ಯೂಸ್ಟನ್ ಕನ್ನಡ ವೃಂದ ಮತ್ತು ಅಕ್ಕ ಸಂಸ್ಥೆ ಕೊಟ್ಟ ವಿಶೇಷ ಪ್ರಶಸ್ತಿ ಫಲಕಗಳು ಮಂಗಳೂರಿನ ಪತ್ರಿಕೆ ಹೃದಯವಾಹಿನಿ ಕೊಟ್ಟ ಹೃದಯವಂತರು ಪಾರಿತೋಷಕ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಧುಚಂದ್ರ -ಸಿರಿಕೇಂದ್ರ ಕವನ ಸಂಕಲನಕ್ಕೆ ಕನ್ನಡ ನಾಡಿನಲ್ಲಿ ಸಂದ ಗೊರೂರು ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ. ಇವುಗಳ ಜೊತೆಗೆ, ಇವರ ತಾಂತ್ರಿಕ ನೈಸುಣ್ಯವನ್ನು ಮತ್ತು ಉತ್ತಮ ಸೇವೆಯನ್ನು ಗುರುತಿಸಿ ಅಣುಶಕ್ತಿ ನಿಯಂತ್ರಣ ಆಯೋಗ ಕೊಟ್ಟು ಗೌರವಿಸಿದ ಆಯೋಗದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ವಿಶಿಷ್ಟ ಸೇವಾ ಪ್ರಶಸ್ತಿ ಹಾಗೂ ರಾಜಧಾನಿಯ National council of asian indian associations ಕೊಟ್ಟ ಸೇವಾ ಪ್ರಶಸ್ತಿ ಇವು ಇವರಿಗೆ ಸಂದ ಪ್ರಶಸ್ತಿಗಳ ಪೈಕಿ ಕೆಲವು. ಯು.ಕೆ.ಕನ್ನಡಿಗರು ಮತ್ತು ಕೆನಡಾ ಕನ್ನಡಿಗರು ಸಹ ಗೌರವಿಸಿದ್ದಾರೆ. 

 

ಮೈ.ಶ್ರೀ. ನಟರಾಜ